ಢಾಕಾ, ಡಿ.21- ಉದ್ವಿಗ್ನತೆಗೊಂಡಿರುವ ಬಾಂಗ್ಲಾದೇಶದ ಸಿಲ್ಹೆಟ್ ನಗರದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ ಮತ್ತು ವೀಸಾ ಅರ್ಜಿ ಕೇಂದ್ರದಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದೆಂಬ ದೃಷ್ಠಿಯಿಂದ ಬಿಗಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಿಲ್ಹೆಟ್ ಮೆಟ್ರೋಪಾಲಿಟನ್ ಪೊಲೀಸ್‌ನ ಹೆಚ್ಚುವರಿ ಉಪ ಆಯುಕ್ತ ಸೈಫುಲ್ ಇಸ್ಲಾಂ ತಿಳಿಸಿದ್ದಾರೆಂದು ಢಾಕಾ ಟ್ರಿಬ್ಯೂನ್ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಪ್ರಕಾರ ಕಳೆದ ಶುಕ್ರವಾರದಿಂದಲೆ ಉಪಶಹರ್ ಪ್ರದೇಶದಲ್ಲಿರುವ ಸಹಾಯಕ ಹೈಕಮಿಷನ್ ಕಚೇರಿ, ಅದೇ ಪ್ರದೇಶದಲ್ಲಿ ಸಹಾಯಕ ಹೈಕಮಿಷನರ್ ನಿವಾಸ ಮತ್ತು ಶೋಭಾನಿಘಾಟ್ ಪ್ರದೇಶದಲ್ಲಿರುವ ವೀಸಾ ಅರ್ಜಿ ಕೇಂದ್ರದಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ.
ಭದ್ರತಾ ಪಡೆಗಳನ್ನು ರಾತ್ರಿಯಿಡೀ ನಿಯೋಜಿಸಲಾಗಿದೆ.ಹೈಕಮಿಷನ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದ ಇಂಕಿಲಾಬ್ ಮಂಚ ಸಿಲ್ಹೆಟ್ ಸೆಂಟ್ರಲ್ ಶಹೀದ್ ಮಿನಾರ್ ಮುಂದೆ ಧರಣಿ ನಡೆಸಿತ್ತು,
ಹಾದಿ ಅಂತ್ಯಕ್ರಿಯೆಯ ನಂತರ, ಅವರ ಪಕ್ಷವಾದ ಇಂಕಿಲಾಬ್ ಮಂಚ ಮಧ್ಯಂತರ ಸರ್ಕಾರಕ್ಕೆ 24 ಗಂಟೆಗಳ ಅಂತಿಮ ಗಡುವು ನೀಡಿ, ಅವರ ಹತ್ಯೆಗೆ ಕಾರಣರಾದವರನ್ನು ಬಂಧಿಸುವ ಮತ್ತು ತನಿಖಾ ಪ್ರಗತಿ ಬಹಿರಂಗಪಡಿಸಲು ಗಡುವು ನೀಡಿದೆ.
