Saturday, December 6, 2025
Homeಅಂತಾರಾಷ್ಟ್ರೀಯತರಬೇತಿ ವೇಳೆ ಅಮೆರಿಕ ವಾಯುಪಡೆಯ ಥಂಡರ್‌ಬರ್ಡ್‌ ಎಫ್‌-16 ಯುದ್ಧವಿಮಾನ ಪತನ

ತರಬೇತಿ ವೇಳೆ ಅಮೆರಿಕ ವಾಯುಪಡೆಯ ಥಂಡರ್‌ಬರ್ಡ್‌ ಎಫ್‌-16 ಯುದ್ಧವಿಮಾನ ಪತನ

Thunderbird F-16 jet crashes in Mojave Desert during training mission

ವಾಷಿಂಗ್ಟನ್‌, ಡಿ.4 ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಅಮೆರಿಕ ವಾಯುಪಡೆಯ ಶಕ್ತಿಶಾಲಿ ಅಸ್ತ್ರ ಥಂಡರ್‌ಬರ್ಡ್‌ ಎಫ್‌-16ಸಿ ಯುದ್ಧವಿಮಾನ ಪತನಗೊಂಡಿದೆ. ಲಾಸ್‌‍ ಏಂಜಲೀಸ್‌‍ನ ಉತ್ತರಕ್ಕೆ ಸುಮಾರು 290 ಕಿಮೀ ದೂರದಲ್ಲಿರುವ ಮೊಜಾವೆ ಮರುಭೂಮಿ ಪ್ರದೇಶದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಎಫ್‌-16ಸಿ ಜೆಟ್‌ ಪತನಗೊಂಡಿದೆ.

ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಎಜೆಕ್ಟ್‌ ಆಗಿದ್ದಾರೆ ಎಂದು ಯುಎಸ್‌‍ ವಾಯುಪಡೆ ತಿಳಿಸಿದೆ. ಏರ್‌ ಚೀಫ್‌ ಮಾರ್ಷಲ್‌ ಅವರು ಬೆಳಗ್ಗೆ 10:45ರ ಸುಮಾರಿಗೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲಿಸುತ್ತಿವೆ ಎಂದು ತಿಳಿಸಿದ್ದಾರೆ.ಯುದ್ಧವಿಮಾನ ಪತನಗೊಂಡ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 24 ಸೆಕೆಂಡುಗಳ ವಿಡಿಯೋದಲ್ಲಿ ಒಂದೆಡೆ ಯುದ್ಧವಿಮಾನ ಪತನಗೊಂಡು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುದು ಮತ್ತೊಂದು ಕಡೆ ಇಬ್ಬರು ಪೈಲಟ್‌ ಸುರಕ್ಷಿತವಾಗಿ ಎಜೆಕ್ಟ್‌ ಆಗಿರುವುದು ಕಂಡುಬಂದಿದೆ.

ಮೂಲಗಳ ಪ್ರಕಾರ, ಪೈಲಟ್‌ಗಳು ಎಜೆಕ್ಟ್‌ ಆಗುವ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.1953 ರಲ್ಲಿ ರಚನೆಯಾದ ಥಂಡರ್‌ಬರ್ಡ್‌್ಸ ಲಾಸ್‌‍ ವೇಗಾಸ್‌‍ ಬಳಿಯ ನೆಲ್ಲಿಸ್‌‍ ವಾಯುನೆಲೆಯಲ್ಲಿ ತರಬೇತಿ ನಡೆಸುತ್ತಾ ಬಂದಿವೆ.

RELATED ARTICLES

Latest News