ಭರತವರ್ಷ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾ ಇಂಟರ್ವಲ್. ಮಾರ್ಚ್ 7ರಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಖೇಶ್, ಸಹನಾ ಆರಾಧ್ಯ, ಚರಿತ್ರಾ ರಾವ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಸಿನಿಮಾದ ಕಥೆ, ಸಿನಿಮಾದೊಳಗಿನ ಹಾಸ್ಯ ಅದ್ಭುತವಾಗಿದೆ. ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲೂ ಎಂಬ ಮಾತಿದೆ. ಅದನ್ನ ಈ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ಜೀವನದ ಬಗ್ಗೆ ಸೀರಿಯಸ್ನೆಸ್ ಇಲ್ಲದ ಹುಡುಗರು ಜೀವನ ಕಟ್ಟಿಕೊಳ್ಳಲು ಏನೆಲ್ಲಾ ಪರದಾಟ ಪಡಬೇಕಾಗುತ್ತದೆ ಎಂಬುದನ್ನು ಇಲ್ಲಿ ಅಚ್ಚುಕಟ್ಟಾಗಿ ತಿಳಿಸಿದ್ದಾರೆ.
ಥಿಯೇಟರ್ಗೆ ಬರುವ ವೀಕ್ಷಕರನ್ನು ನಕ್ಕು ನಗಿಸಬೇಕೆಂಬ ಉದ್ದೇಶವನ್ನ ಸಿನಿಮಾ ಹೊಂದಿದೆ. ಅದಕ್ಕೆ ತಕ್ಕ ಹಾಗೇ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಕಾಮಿಡಿಯ ಝಲಕ್ ಕಾಣಿಸುತ್ತದೆ. ಡೈಲಾಗ್ಗಳ ಸುರಿಮಳೆ ಸುರಿಯುತ್ತದೆ. ಸಿನಿಮಾದಲ್ಲಿ ಮೂವರು ಹುಡುಗರದ್ದೇ ಕಥೆ. ಮೂವರ ಹೆಸರು ಗಣೇಶನೇ. ಆದರೆ ಇನ್ಶಿಯಲ್ ಮಾತ್ರ ಚೇಂಜ್. ಸ್ಕೂಲ್ನಿಂದ ಹಿಡಿದು ಕಾಲೇಜು ಜೊತೆಗೆ ಓದುತ್ತಾರೆ. ಕೆಲಸ ಹುಡುಕುವುದಕ್ಕೂ ಜೊತೆಗೆ ಹೊರಡುತ್ತಾರೆ. ಅಲ್ಲಿ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಅದರ ನಡುವೆ ನಡೆಯುವ ತಮಾಷೆಯ ಸನ್ನಿವೇಶ ನೋಡ್ಬೇಕು ಅಂದ್ರೆ ನೀವೂ ಥಿಯೇಟರ್ನಲ್ಲಿಯೇ ಸಿನಿಮಾ ನೋಡಬೇಕು.
ಹಳ್ಳಿಯಿಂದ ನಗರಕ್ಕೆ ಬಂದ ಮೂವರಿಗೂ ಎಲ್ಲವೂ ಇದ್ದರೂ ನೆಮ್ಮದಿ ಸಿಗದೆ ಇರುವುದು ಗಮನಕ್ಕೆ ಬರುತ್ತದೆ. ಸಿಟಿಯಲ್ಲಿ ಪ್ರತಿಯೊಂದಕ್ಕೂ ದುಡ್ಡು ಆದರೆ ಕೆಲಸ ಮಾತ್ರ ಇಲ್ಲ. ಕಡೆಗೂ ಜ್ಞಾನೋದಯವಾಗಿ ಮತ್ತೆ ತಮ್ಮ ಹಳ್ಳಿಗೆ ವಾಪಾಸ್ ಬರುತ್ತಾರೆ. ಇದರ ನಡುವೆ ನಾಯಕ ಶಶಿರಾಜ್ಗೆ ಎರಡು ಲವ್ ಆಗುತ್ತೆ. ಒಟ್ಟಾರೆ ಥಿಯೇಟರ್ನಲ್ಲಿ ಕೂತು, ಮನ ಮನಸ್ಸನ್ನ ತಂಪು ಮಾಡಿಕೊಳ್ಳುವುದಕ್ಕೆ ಇದೊಂದು ಬೆಸ್ಟ್ ಸಿನಿಮಾ ಅಂತಾನೇ ಹೇಳಬಹುದು.