ಸಿನಿಮಾ ಅನ್ನೋದು ವ್ಯಾಪಾರ ಅನ್ನೋದಕ್ಕಿಂತ ಅದೊಂದು ಮನರಂಜನೆಯ ಕ್ಷೇತ್ರ. ಜನ ತಮ್ಮ ಬೇಸರ, ಒತ್ತಡಗಳ ನಿವಾರಣೆಗಾಗಿನೇ ಥಿಯೇಟರ್ಗೆ ಬರೋದು. ಹೆಚ್ಚು ಜನ ಬಂದಾಗ ಸಹಜವಾಗಿಯೇ ಅದು ವ್ಯಾಪಾರೀಕರಣವಾಗಿ ಬದಲಾಗುತ್ತದೆ, ಬಂಡವಾಳ ಹಾಕಿದ ನಿರ್ಮಾಪಕನಿಗೆ ಕೊಂಚ ಸಮಾಧಾನವಾಗುತ್ತದೆ. ಮತ್ತೊಂದು ಸಿನಿಮಾ ಮಾಡುವ ಮನಸ್ಸು ಮಾಡುತ್ತಾನೆ. ಆದರೆ ಇಷ್ಟೆಲ್ಲ ಸಕ್ಸಸ್ ಆಗ್ಬೇಕು ಅಂದ್ರೆ ಸಿನಿಮಾದ ಕಥೆ ಅಷ್ಟೇ ಚೆಂದವಿರಬೇಕು. ರಿಯಾಲಿಟಿಗೆ ಹತ್ತಿರವಿರಬೇಕು, ಒಂದಷ್ಟು ನಗು ಅಲ್ಲಿರಬೇಕು. ಇಂಥದ್ದೊಂದು ಸಿನಿಮಾ ಈಗ ಗಾಂಧಿನಗರದಲ್ಲಿ ಸದ್ದು ಮಾಡ್ತಾ ಒದೆ. ಅದುವೆ ಇಂಟರ್ವಲ್.
ಹೌದು, ಈಗಂತು ಮೊಬೈಲ್ ಬಳಸದೆ ಇರುವವರು ಹುಡುಕಿದರು ಸಿಗೋದಿಲ್ಲ. ಹಾಗೇ ಸೋಷಿಯಲ್ ಮೀಡಿಯಾ ಅಕೌಂಟ್ ಇಲ್ಲದವರು ಇಲ್ಲ. ಮೊಬೈಲ್ನಲ್ಲಿ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ. ಇಷ್ಟು ಸೌಂಡ್ ಆಗೋದಕ್ಕೂ ಒಂದು ಕಾರಣ ಇದೆ. ಅದರೊಳಗಿನ ಒಂದು ಕಂಟೆಂಟ್. ಸೀರಿಯಸ್ ಸಬ್ಜೆಕ್ಟ್ ಇದೆ, ಫ್ರೆಶ್ ಕಾಮಿಡಿ ಇದೆ, ಬ್ಯೂಟಿಫುಲ್ ಸಾಂಗ್ಸ್ ಇದಾವೆ. ಎರಡೂವರೆ ಗಂಟೆಗಳ ಕಾಲ ಕೂತು ಮೈಂಡ್, ಮನಸ್ಸು ರಿಲ್ಯಾಕ್ಸ್ ಮಾಡಿಕೊಳ್ಳುವುದಕ್ಕೆ ಇನ್ನೇನಾದ್ರೂ ಬೇಕಾ.
ಅಂಡ್ ಒನ್ ಮೋರ್ ಇನ್ಫರ್ಮೇಷನ್ ಟೈಟಲ್ ಟ್ರ್ಯಾಕ್ ನಾಳೆ ರಿಲೀಸ್ ಆಗ್ತಾ ಇದೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ವಿಜಯ್ ಪ್ರಕಾಶ್ ಅವರ ಚಂದದ ಧ್ವನಿ ಇರುವ ಹಾಡು ನಾಳೆ ನಿಮ್ಮ ಮುಂದೆ ಬರಲಿದೆ. ಈಗಾಗಲೇ ಟ್ರೇಲರ್ ಝಲಕ್ ನೋಡಿದ್ದೀರಿ. ಶಶಿರಾಜ್ ಅಂತು ಮನಸ್ಸಾರೆ ನಗಿಸುವ ಭರವಸೆ ನೀಡಿದ್ದಾರೆ. ನಾವೂ ನಿವೆಲ್ಲಾ ಖಂಡಿತ ಕಾಲೇಜಿನ ದಿನಗಳನ್ನೊಮ್ಮೆ ನೆನಪು ಮಾಡಿಸುತ್ತದೆ. ಹಾಗೇ ಊರು ಬಿಟ್ಟು ಏನೋ ಸಾಧಿಸಲು ಬಂದ ಆ ಕಷ್ಟದ ದಿನಗಳನ್ನು ಕಣ್ಣ ಮುಂದೆ ತರುತ್ತದೆ. ಮನಸ್ಸು ಹಗುರಾಗುವುದಕ್ಕೆ ನಮ್ಮ ಹಳೆಯ ದಿನಗಳು ನೆನಪಾಗಬೇಕು. ಅಂಥದ್ದೊಂದು ಪ್ರಯತ್ನವನ್ನ ಖಂಡಿತ ಇಂಟರ್ವಲ್ ಸಿನಿಮಾ ಮಾಡುತ್ತದೆ ಎಂಬ ಭರವಸೆ ಇದೆ. ಇದೇ ಮಾರ್ಚ್ 7ರಂದು ಸಿನಿಮಾ ರಿಲೀಸ್ ಆಗ್ತಾ ಇದೆ.
ಅಂದ ಹಾಗೇ ಈ ಸಿನಿಮಾವನ್ನು ಭರತವರ್ಷ ಪಿಕ್ಚರ್ಸ್ ಬ್ಯಾನರ್ನಡಿ, ಭರತ್ ವರ್ಷ ನಿರ್ಮಾಣ ಮಾಡಿದ್ದು, ನಿರ್ದೇಶನದ ಜವಬ್ದಾರಿಯನ್ನು ಹೊತ್ತಿದ್ದಾರೆ. ಸುಖೇಶ್ ಅವರು ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಶಶಿರಾಜ್, ಸುಖೇಶ್, ಪ್ರಜ್ವಲ್ ಗೌಡ, ಚೈತ್ರಾ ರಾವ್, ಸಹನಾ ಆರಾಧ್ಯ ಅವರು ತಾರಾಬಳಗದಲ್ಲಿದ್ದಾರೆ.