ಬೆಂಗಳೂರು, ಸೆ.15- ಶಾಂತಿ ಸಹಬಾಳ್ವೆಯ ಬುದ್ಧನ ದೇಶದಲ್ಲಿ ಇಂದು ಅಸಹನೆ, ಧರ್ಮಾಂಧತೆ, ವ್ಯಕ್ತಿಪೂಜೆ, ಸರ್ವಾಧಿಕಾರಿ ಧೋರಣೆ ಆ ಮೂಲಕ ಪ್ರಜಾಪ್ರಭುತ್ವದ ಅಳಿವು ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ತನ್ನ ಭಾವ ವ್ಯಕ್ತಪಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. 2007ರಲ್ಲಿ ವಿಶ್ವಸಂಸ್ಥೆ ಧರ್ಮಾಂಧತೆ, ಸರ್ವಾಧಿಕಾರಿ ಆಡಳಿತ, ಸಮಾಜಕ್ಕೆ ಮಾರಕ. ಪ್ರಜಾಪ್ರಭುತ್ವ ಸೂಕ್ತ ಎಂಬ ನಿಲುವಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಘೋಷಣೆ ಮಾಡಿದೆ ಎಂದು ಹೇಳಿದರು.
ಬ್ರಿಟನ್, ಫ್ರಾನ್‌್ಸ, ಆಮೆರಿಕಾದಂತಹ ರಾಷ್ಟ್ರಗಳು ಕ್ರಾಂತಿಯ ಮೂಲಕ ಪ್ರಜಾಪ್ರಭುತ್ವ ದೇಶಗಳಾಗಿ ಬದಲಾಗಿವೆ. ಪ್ರಜಾಪ್ರಭುತ್ವ ಸಮಸ್ತ ಜನರ ಧ್ವನಿಯನ್ನು ಜಾರಿ ಮಾಡಲು ಇರುವ ಬಲವಾದ ವ್ಯವಸ್ಥೆ ಎಂದು ಹೇಳಿದರು.ಪ್ರಸ್ತುತ ಪ್ರಜಾ ಪ್ರಭುತ್ವ ಕ್ಕಿರುವ ಸವಾಲನ್ನು ಮೆಟ್ಟಿನಿಲ್ಲಲು ಜನ ಜಾಗೃತರಾಗಬೇಕು. ಯಥಾಃರಾಜ, ತಥಾಃಪ್ರಜಾ ಎಂದು ಸಹಿಸಿಕೊಳ್ಳಬಾರದು. ಅಸಹನೆ, ಧರ್ಮಾಂಧತೆ, ಸರ್ವಾಧಿಕಾರ, ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಅಶಾಂತಿ, ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಎಚ್ಚರಿಸಿದರು.
ಕಷ್ಟಪಟ್ಟು ಬೆಳೆಸಿದ ಪ್ರಜಾಪ್ರಭುತ್ವವನ್ನು ಕಳೆದುಕೊಂಡರೆ ಮತ್ತೆ ನಾವು ಪ್ರಜಾಪ್ರಭುತ್ವಗಳಿಸುವುದು ಕಷ್ಟಸಾಧ್ಯತೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ದೇಶದ ಪ್ರತಿಯೊಬ್ಬರೂ ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಬದ್ಧವಾಗಿರಬೇಕು ಎಂದರು.ರಾಜಕೀಯ ಸ್ವಾತಂತ್ರ್ಯದಿಂದ ಸಾರ್ಥಕತೆ ಸಿಗುವುದಿಲ್ಲ. ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಅಗತ್ಯವಿದೆ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾಧಿಸುತ್ತದೆ. ಪ್ರತಿಯೊಬ್ಬರಿಗೂ ತಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಐಚ್ಛಿಕ ಅಧಿಕಾರವನ್ನು ಸಂವಿಧಾನ ನೀಡಿದೆ. ಅದನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಸಮಾನತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಕಟ್ಟಕಡೆಯ ಪ್ರಜೆಗೂ ಪ್ರಜಾಪ್ರಭುತ್ವದ ಆಶಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಕಲೆ, ಛಾಯಾಚಿತ್ರ ಹಾಗೂ ಚರ್ಚಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಶಾಸಕ ಎಸ್.ಎ. ನಾರಾಯಣಸ್ವಾಮಿ, ವಿವಿಧ ನಿಗಮಗಳ ಅಧ್ಯಕ್ಷರಾದ ಸಂಪತ್‌ರಾಜ್, ಮಂಜುನಾಥ್, ಪಲ್ಲವಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.