ಬೆಂಗಳೂರು,ಫೆ.8– ಆಸ್ತಿಗಳ ನೋಂದಣಿ ವ್ಯವಸ್ಥೆ ಕಾವೇರಿ-2 ತಂತ್ರಾಂಶದ ಮೇಲೆ ನಡೆದಿರುವ ವಿದ್ಯುನಾನ ದಾಳಿಯನ್ನು ಸೈಬರ್ ಪೊಲೀಸರ ಜೊತೆಗೆ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಭದ್ರತಾ ಪರಿಶೋಧನೆಗೂ ಒಳಪಡಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.
ಕಾವೇರಿ ತಂತ್ರಾಂಶ-2 ರ ಮೇಲೆ ನಡೆದಿರುವ ವಿದ್ಯುನಾನ ದಾಳಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಮೇಲಿನ ಈ ದಾಳಿ ಮುಂದಿನ ದಿನಗಳಲ್ಲಿ ಪುನರಾವರ್ತಿತವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಈಗಾಗಲೇ ನೋಂದಣಿ ಇಲಾಖೆಯ ಮಹಾ ನಿರ್ದೇಶಕರು ಮತ್ತು ಸ್ಟಾಂಪ್ ಆಯುಕ್ತರು ಆಗಿರುವ ಕೆ.ಎ.ದಯಾನಂದ್ ನೀಡಿರುವ ದೂರು ಆಧರಿಸಿ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸೈಬರ್ ದಾಳಿಯಿಂದಾಗಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ತೊಂದರೆಗೊಳಗಾಗಿದೆ. ತನಿಖೆ ಈ ರೀತಿಯ ದಾಳಿ ಮತ್ತು ವ್ಯಕ್ತಿಗಳ ಕೃತ್ಯಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಕಂದಾಯ ಇಲಾಖೆ ತಜ್ಞರ ಮೂಲಕ ಸ್ವತಂತ್ರವಾದ ಭದ್ರತಾ ಲೆಕ್ಕ ಪರಿಶೋಧನೆ ನಡೆಸಲಿದೆ. ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ಕೆ.ಎ.ದಯಾನಂದ್ ಅವರು ನೀಡಿರುವ ದೂರಿನಲ್ಲಿ ಸೈಬರ್ ದಾಳಿಯ ಬಗ್ಗೆ ಸುದೀರ್ಘ ವಿವರಣೆ ನೀಡಿದ್ದಾರೆ. ಕಾವೇರಿ ತಂತ್ರಾಂಶ-2, ಆಸ್ತಿಗಳ ನೋಂದಣಿ, ಇ.ಸಿ, ಸಿ.ಸಿಗಳ ದೃಢೀಕೃತ ಪ್ರತಿಗಳನ್ನು ಜನರಿಗೆ ನೀಡುವ ಸೇವೆಯನ್ನು ಒದಗಿಸುತ್ತಿದೆ.
ಈ ಆಡಳಿತ ಇಲಾಖೆಯ ಸಾರ್ಟ್ ಗೌವರ್ನೆನ್‌್ಸ ಕೇಂದ್ರದಿಂದ ಕಾವೇರಿ-2 ತಂತ್ರಾಂಶ ನಿರ್ವಹಿಸುತ್ತಿದೆ. ಈ ಸಾಫ್‌್ಟವೇರ್ ಪಾರದರ್ಶಕತೆ, ಸಾಮರ್ಥ್ಯ ಮತ್ತು ತಲುಪುವಿಕೆಯನ್ನು ಹೆಚ್ಚಿಸಿದೆ. ಭೂಮಿ ಮತ್ತು ಆಸ್ತಿಗಳ ಪರಭಾರೆಗೆ ಕಾನೂನು ವೃತ್ತಿಪರರಿಗೆ, ಸರ್ಕಾರದ ಅಧಿಕಾರಿಗಳಿಗೆ ಸೇವೆ ಒದಗಿಸುವುದರಲ್ಲಿ ನಿರತವಾಗಿದೆ ಎಂದು ವಿವರಿಸಿದ್ದಾರೆ.
ನೋಂದಣಿ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪವನ್ನು ತಗ್ಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ 2024ರ ಡಿಸೆಂಬರ್‌ನಿಂದ ಕಾವೇರಿ ತಂತ್ರಾಂಶ ಸಮಸ್ಯೆ ಪೀಡಿತವಾಗಿದೆ. ಸಾರ್ಟ್ ಗೌವರ್ನೆನ್‌್ಸ ಕೇಂದ್ರ ವಿಶ್ಲೇಷಣೆ ನಡೆಸಿದಾಗ ಹೆಚ್ಚುವರಿಯಾದ ಸೇವೆ ಪೂರೈಕೆಗೆ ನಿರಾಕರಣೆ (ಡಿಸ್ಟರ್ಬ್ ಡಿನಾಯಲ್ ಆಫ್ ಸರ್ವೀಸ್-ಡಿಡಿಒಎಸ್)ಗಳ ದಾಳಿ ಕಂಡುಬಂದಿವೆ.
ಯಾಂತ್ರೀಕೃತ ಸಲಕರಣೆಗಳು ಮತ್ತು ಬೂಟ್‌್ಸಗಳನ್ನು ಬಳಸಿ ಈ ಕೃತ್ಯ ಎಸಗಲಾಗಿದೆ. ಇದಕ್ಕಾಗಿ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿದೆ. ಖಾತೆ ಸೃಷ್ಟಿಸಲು ಸುಳ್ಳು ಮಾಹಿತಿಯನ್ನು ಒದಗಿಸಲಾಗಿದೆ. ಸಾರ್ಟ್ ಗೌವರ್ನೆನ್ಸ್ ಕೇಂದ್ರ ಈ ರೀತಿಯ 62 ಇ-ಮೇಲ್ ಖಾತೆಗಳನ್ನು ಪತ್ತೆ ಹಚ್ಚಿದೆ. ಇವು ಬೇರೆಬೇರೆ ಸ್ಥಳಗಳಲ್ಲಿ 14 ಐಪಿ ವಿಳಾಸದಿಂದ ಕಾರ್ಯಾಚರಣೆಗೊಂಡಿವೆ ಎಂದು ವಿವರಿಸಿದ್ದಾರೆ.
ಇದೇ ರೀತಿಯ ದಾಳಿ ಕಳೆದ ಜನವರಿ ತಿಂಗಳಿನಲ್ಲೂ ನಡೆದಿದೆ. ಸಾರ್ವಜನಿಕರಿಂದ ಇ.ಸಿಗಳ ಶೋಧನೆಗಾಗಿ ಅತೀ ಹೆಚ್ಚು ಮನವಿಗಳು ಬಂದಂತೆ ಕೃತಕ ಒತ್ತಡ ಸೃಷ್ಟಿಸಲಾಗಿದೆ. ಇದು ಸಾಮಾನ್ಯ ಪ್ರಕ್ರಿಯೆಗಳಿಗಿಂತಲೂ 8 ಪಟ್ಟು ಅಧಿಕವಾಗಿತ್ತು. ಒಂದು ಹಂತದಲ್ಲಿ 6.2 ಲಕ್ಷ ಮನವಿಗಳು 2 ಗಂಟೆ ಅವಧಿಯಲ್ಲಿ ಸಲ್ಲಿಕೆಯಾಗಿವೆ. ಈ ರೀತಿಯ ಬಳಕೆದಾರರು ರ್ಯಾಂಡಮ್ ಕೀ ವರ್ಡ್‌್ಸಗಳನ್ನು ನಡೆಸಿ ಶೋಧ ಕಾರ್ಯಾಚರಣೆ ಅಥವಾ ಮನವಿಗಳನ್ನು ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸರ್ಕಾರದ ಸೇವೆ ಪೂರೈಕೆಯನ್ನು ತೊಂದರೆಗೊಳಪಡಿಸುವುದು ಮತ್ತು ಸರ್ಕಾರದ ವ್ಯವಸ್ಥೆಯ ದೃಢತೆಯನ್ನು ಪ್ರಶ್ನಾರ್ಹಗೊಳಿಸಲು ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಅತ್ಯಂತ ತುರ್ತು ಆದ್ಯತೆ ಮೇರೆಗೆ ಈ ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದು ಕೆ.ಎ.ದಯಾನಂದ್ ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತ ವಿದ್ಯುನಾನ ಸಾಕ್ಷ್ಯಗಳನ್ನು ಸೈಬರ್ ಪೊಲೀಸರಿಗೆ ಒದಗಿಸಿದ್ದಾರೆ.
ಪೊಲೀಸರ ಮಾಹಿತಿ :
ಪ್ರಕರಣ ದಾಖಲಿಸಿರುವ ಪೊಲೀಸರು ಪ್ರಾಥಮಿಕ ಪರಿಶೀಲನೆ ನಡೆಸಿದ್ದು, ಸರ್ಕಾರಿ ಸೇವೆಯನ್ನು ತೊಂದರೆಗೊಳಪಡಿಸುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ. ಯಾವುದೇ ದತ್ತಾಂಶಗಳು ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೂರು ಆಧರಿಸಿ ತನಿಖೆಯನ್ನು ಚುರುಕುಗೊಳಿಸುವುದಾಗಿ ತಿಳಿಸಿದ್ದಾರೆ.