ಬೆಂಗಳೂರು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಷೀನ್ ಲರ್ನಿಂಗ್, ರೊಬೊಟಿಕ್ಸ್ & ಆಟೋಮೇಷನ್ ಇವು ಇವತ್ತಿನ ಮಕ್ಕಳ ಶಿಕ್ಷಣಕ್ಕೆ ಅತ್ಯಗತ್ಯ. ವಿಶ್ವದ್ಯಂತ AI ಕ್ರಾಂತಿ ಆರಂಭವಾಗಿದ್ದು ಶಿಕ್ಷಣ – ಉದ್ಯೋಗ ಅಷ್ಟೇ ಅಲ್ಲದೆ ಸೇವಾ ವಲಯದಲ್ಲೂ ಹೊಸ ಆವಿಷ್ಕಾರಗಳು ಪ್ರಾರಂಭವಾಗಿದೆ. ಮಕ್ಕಳಿಗೆ ಇವುಗಳ ಬಗ್ಗೆ ಜ್ಞಾನವಿಲ್ಲದೆ ಎಷ್ಟೇ ಪದವಿ ಪಡೆದರು ವ್ಯರ್ಥ ಎಂದೇ ಹೇಳಬಹುದು. ಆಧುನಿಕ ತಂತ್ರಜ್ಞಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಐಒ ಬ್ರೇನ್ ಇನ್ನೊವೇಟಿವ್ ಲ್ಯಾಬ್ಸ್ ವಸ್ತು ಪ್ರದಶನವನ್ನು ಏರ್ಪಡಿಸಿತ್ತು. ಈ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಹಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು.
ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಈ ವಸ್ತು ಪ್ರದರ್ಶನದಲ್ಲಿ ಮಕ್ಕಳು ತಮ್ಮ ಕೌಶಲದಿಂದ ತಂತ್ರಜ್ಞಾನ ಅಳವಡಿಸಿ ರೂಪೊಂದಿಸಿದ ಹಲವಾರು ಉಪಕರಣಗಳನ್ನು ಪ್ರದರ್ಶಿಸಿದರು. ಪ್ರದರ್ಶನದಲ್ಲಿ ರೊಬೋಟಿಕ್ಸ್, ಆಟೋಮೇಷನ್, ಐಒಟಿ, ಸಾಫ್ಟ್ವೇರ್ ಮತ್ತು ಕೋಡಿಂಗ್, 3ಡಿ ಮಾಡಲಿಂಗ್ ಮತ್ತು ಪ್ರಿಂಟಿಂಗ್, ಕೋಡಿಂಗ್ ಬ್ಲಾಕ್ಸ್ ವಿಜ್ಞಾನ ಪ್ರಯೋಗಗಳು, ಕೃತಕ ಬುದ್ಧಿಮತ್ತೆಯನ್ನು ವಿವರಿಸುವ ಉಪಕರಣ ಕಂಡ ಮಕ್ಕಳು ಆಶ್ಚರ್ಯಚಕಿತರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಐಒ ಬ್ರೇನ್ ಸಿಇಒ ರಾಮಕೃಷ್ಣ ಅವರು, ತಮ್ಮ ಲ್ಯಾಬ್ನಲ್ಲಿ ನೀಡುವ ತರಬೇತಿಗೆ ಮಕ್ಕಳು ಅತ್ಯುತ್ಸಾಹದಿಂದ ಬರುತ್ತಿದ್ದಾರೆ ಎಂದು ಹೇಳಿದರು. ತಾವು ಕರ್ನಾಟಕ ರಾಜ್ಯಾದ್ಯಂತ ಒಂದನೇ ತರಗತಿಯಿಂದ ಪಿಯುಸಿ ವರೆಗೆ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ತರಬೇತಿ ನೀಡುವ ಸಲುವಾಗಿ ನಾವು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು. ಸಣ್ಣ ವಯಸ್ಸಿನಲ್ಲಿ ಕೌಶಲ ಹೆಚ್ಚಿಸಿಕೊಂಡರೆ ಇಂತಹ ಆಧುನಿಕ ತಂತ್ರಜ್ಞಾನದ ಅಭ್ಯಾಸದಿಂದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಂದರಿಂದ ಸೂಕ್ತ ರೀತಿಯ ಉದ್ಯಮಗಳನ್ನು ಸಹಾ ಸ್ಥಾಪಿಸಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಹಲವಾರು ಶಾಲೆಗಳಿಗೆ ತೆರಳಿ ಮಕ್ಕಳಿ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.

ಸಂಸ್ಥೆಯಲ್ಲಿ ಏರ್ಪಡಿಸಿದ್ದ ಏರೋ ಮತ್ತು ಏರೋಫಿಜಿಕ್ಸ್ ಡ್ರೋನ್ ಲ್ಯಾಬ್ ಪ್ರದರ್ಶನ ಕುರಿತು ಆ ವಿಭಾಗದ ಮುಖ್ಯಸ್ಥ ಹಾಗೂ ಎನ್ಎ ಎಲ್ ನಿವೃತ್ತ ಇಂಜಿನಿಯರ್ ರಮೇಶ್ ಅವರು ಮಾತನಾಡಿ, ವೈಮಾಂತರಿಕ್ಷ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು, ಹೊಸ ಬಗೆಯ ಉದ್ಯೋಗ ಸೃಷ್ಟಿಯಾಗುತ್ತಿದೆ. ಡ್ರೋನ್ ಮೂಲಕ ಯುದ್ಧವು ಮಾಡಬಹುದು ತುರ್ತು ಚಿಕಿತ್ಸೆಯಂತಹ ಸಂದರ್ಭದಲ್ಲಿಅಗೋಗ್ಯ ಸೇವೆ, ಕೃಷಿ, ಭೂಮಿ ಸರ್ವೆ ಸೇರಿ ಹಲವು ಕಾರ್ಯಗಳಲ್ಲಿ ಬಳಕೆಯಾಗುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ಡಿಜಿಸಿಐ ಮೂಲಕ ಡ್ರೋನ್ ಪೈಲೆಟ್ ಲೈಸೆನ್ಸ್ ಕೊಡಿಸಲಾಗುವುದು. ಫ್ಲೈಟ್ಗಳ ಯಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳ ಬಗ್ಗೆ ವಿವರಿಸಿದರು. ತರಬೇತುದಾರರಾದ ಲೋಹಿತ್ ಉಪಸ್ಥಿತರಿದ್ದರು.