ನವದೆಹಲಿ, ಏ.28- ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡ ಬೆನ್ನಲ್ಲೇ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ಹಾಗೂ ತಂಡದ ಇತರ ಆಟಗಾರರಿಗೆ ಬಿಸಿಸಿಐ ದಂಡದ ಶಿಕ್ಷೆ ನೀಡಿದೆ.
2025ರ ಐಪಿಎಲ್ ಟೂರ್ನಿಯಲ್ಲಿ ನಿಗಧಿತ ಸಮಯದಲ್ಲಿ ಪಂದ್ಯ ಮುಗಿಸುವಲ್ಲ ಎಲ್‌ಎಸ್‌ಜಿ ತಂಡವು ಎರಡು ಭಾರೀ ವಿಫಲರಾಗಿರುವುದರಿಂದ ತಂಡದ ನಾಯಕ ರಿಷಭ್ ಪಂತ್‌ಗೆ 24 ಲಕ್ಷ ರೂ. ದಂಡ ವಿಧಿಸಿದೆ.
ಐಪಿಎಲ್ ಟೂರ್ನಿಯ ನಿಯಮದ ಪ್ರಕಾರ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ನಿಗಧಿತ ಸಮಯಕ್ಕಿಂತ ಹೆಚ್ಚಿನ ವೇಳೆ ತೆಗೆದುಕೊಂಡರೆ ತಂಡದ ಇತರ ಆಟಗಾರರು ಶಿಕ್ಷೆಗೆ ಒಳಪಡುವುದರಿಂದ ತಂಡದ ಇತರ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ವರಮಾನದ ಶೇ. 25ರಷ್ಟು ಶಿಕ್ಷೆ ವಿಧಿಸಬಹುದು.