ಬೆಂಗಳೂರು, ಮಾ.17- ಗಣ್ಯರು, ರಾಜಕಾರಣಿಗಳು ಸೇರಿದಂತೆ ಲಕ್ಷಾಂತರ ಮಂದಿಗೆ ವಿದ್ಯಾ ದಾನ ಮಾಡಿರುವ ಬೆಂಗಳೂರು ವಿಶ್ವ ವಿದ್ಯಾಲಯದ ಕಟ್ಟಡ ಹರಾಜಾಗುತ್ತಾ…! ಬಿಬಿಎಂಪಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ತೆರಿಗೆ ಪಾವತಿಸದಿದ್ದರೆ ಬೆಂಗಳೂರು ವಿವಿಯ ಕಟ್ಟಡವನ್ನು ಹರಾಜು ಹಾಕಲಾಗುವುದಂತೆ.
ಈಗಾಗಲೇ ರಾಜ್ಯದ 32 ವಿಶ್ವವಿದ್ಯಾಲಯಗಳಿಗೆ ಅನುದಾನ ಕೊರತೆ ಇದೆ . ಕೆಲ ವಿ.ವಿಗಳಲ್ಲಿ ಉಪಾಧ್ಯಾಯರ ಕೊರತೆ ಇದ್ದರೆ, ಮತ್ತೆ ಕೆಲ ವಿ.ವಿ ಗಳಲ್ಲಿ ಸಂಬಳಕ್ಕೂ ಹಣವಿಲ್ಲದಂತಹ ಪರಿಸ್ಥಿತಿ ಇದೆ.
ಮಂಗಳೂರು. ದಾರವಾಡ ವಿವಿ ಗಳಿಗೆ ಲೈಟ್ ಬಿಲ್ ಕಟ್ಟೋದಕ್ಕೂ ಹಣ ಇಲ್ಲ. ಈ ಬೆಳವಣಿಗೆ ನಡುವೆ ರಾಜ್ಯದ ಪ್ರಖ್ಯಾತ ವಿಶ್ವವಿದ್ಯಾಲಯವೆಂದು ಗುರುತಿಸಿಕೊಂಡಿರುವ ಬೆಂಗಳೂರು ವಿವಿಗೆ ಕಟ್ಟಡ ತೆರಿಗೆ ಕಟ್ಟೋದಕ್ಕೂ ಹಣದ ಕೊರತೆ ಎದುರಾಗಿದೆಯಂತೆ.
ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿ.ವಿ ಅನೇಕ ಗಣ್ಯರು, ರಾಜಕಾರಣಿಗಳು ಓದಿದ ಬೆಂಗಳೂರು ವಿ.ವಿ ಕಳೆದ 15 ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸಿಲ್ಲ.
ಇದೀಗ ವಿ.ವಿ 19. 5 ಕೋಟಿ ರೂ. ಅಸ್ತಿ ತೆರಿಗೆ ಪಾವತಿ ಮಾಡಬೇಕಿದೆ. ಈಗಾಗಲೇ ಹಲವು ಬಾರಿ ನೋಟೀಸ್ ನೀಡಿದ್ದರೂ ವಿವಿಯವರು ಬಾಕಿ ತೆರಿಗೆ ಕಟ್ಟಲು ಮೀನಾಮೇಷ ಎಣಿಸುತ್ತಿದ್ದಾರೆ.
ವಿವಿ ಯ ಬಾಕಿ ಅಸ್ತಿ ತೆರಿಗೆ ಮೊತ್ತ..19.5 ಕೋಟಿಯಾದರೆ, ಎಜುಕೇಶನ್ ಕಟ್ಟಡದ ತೆರಿಗೆ…10.61.81.113.ಕೋಟಿ, ವಸತಿ ಕಟ್ಟಡಗಳ ತೆರಿಗೆ…4.03.23.00. ಕೋಟಿ ರೂ, ವಸತಿಯೇತರ ಹಾಗೂ ವಾಣಿಜ್ಯ ಕಟ್ಟಡಗಳ ತೆರಿಗೆ..4.40.23.261. ಕೋಟಿ ಪಾವತಿಸಬೇಕಿದೆ.
ಈಗಾಗಲೇ ಬಿಬಿಎಂಪಿಯ ಅರ್ ಅರ್ ನಗರ ಕಂದಾಯ ಇಲಾಖೆ ಯಿಂದ ಬಾಕಿ ತೆರಿಗೆ ಕಟ್ಟಲು ನೋಟೀಸ್ ನೀಡಲಾಗಿದೆ.
ಇದೆ ತಿಂಗಳ 31 ರೊಳಗೆ ಬಾಕಿ ತೆರಿಗೆ ಪಾವತಿಸಿ..ಇಲ್ಲವಾದರೆ ಡಬಲ್ ತೆರಿಗೆ ಕಟ್ಟಬೇಕಾಗುತ್ತೆ ಅಂತ ನೋಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಗಡುವಿನೊಳಗೆ ಬೆಂಗಳೂರು ವಿವಿ ಬಾಕಿ ತೆರಿಗೆ ಕಟ್ಟದಿದ್ರೆ ಬೆಂಗಳೂರು ವಿವಿ ಕಟ್ಟಡವನ್ನು ಕಾನೂನಿನ ಪ್ರಕಾರ ಹರಾಜು ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.