Saturday, June 14, 2025
Homeಅಂತಾರಾಷ್ಟ್ರೀಯ | Internationalಇರಾನ್‌ ಮೇಲೆ ಇಸ್ರೇಲ್‌ ದಾಳಿ: ಗಗನ ಮುಟ್ಟಲಿದೆ ತೈಲಬೆಲೆ

ಇರಾನ್‌ ಮೇಲೆ ಇಸ್ರೇಲ್‌ ದಾಳಿ: ಗಗನ ಮುಟ್ಟಲಿದೆ ತೈಲಬೆಲೆ

ನವದೆಹಲಿ, ಜೂ.13: ಇರಾನ್‌ ದೇಶದ ಮೇಲೆ ಇಸ್ರೇಲ್‌ ಏಕಾಏಕಿ ದಾಳಿ ಮಾಡಿರುವುದು ಜಾಗತಿಕವಾಗಿ ಮಾರುಕಟ್ಟೆಗಳನ್ನು ಆತಂಕಕ್ಕೆ ದೂಡಿದೆ. ಮಾತ್ರವಲ್ಲ ಕಚ್ಛಾ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.
ಇಸ್ರೇಲ್‌ ದಾಳಿಯಿಂದಾಗಿ ಇಂದು ತೈಲ ಬೆಳೆ ಶೇ. 13ರಷ್ಟು ಏರಿಕೆ ಆಗಿದೆ. ಒಂದು ಬ್ಯಾರಲ್‌ ಕಚ್ಛಾ ತೈಲದ ಬೆಲೆ 76 ಡಾಲರ್‌ ಆಸುಪಾಸಿನಷ್ಟಿದೆ. ಇಸ್ರೇಲ್‌ ದಾಳಿ ಪರಿಣಾಮವಾಗಿ ಮಧ್ಯಪ್ರಾಚ್ಯ ದೇಶಗಳಿಂದ ತೈಲ ಸರಬರಾಜು ಕಡಿಮೆಗೊಳ್ಳುವ ಸಾಧ್ಯತೆ ಮನಗಂಡು ತೈಲ ಬೆಲೆ ಹೆಚ್ಚಳ ಆಗಿದೆ.

ಇದರ ಪರಿಣಾಮವಾಗಿ ಭಾರತವೂ ಒಳಗೊಂಡಂತೆ ಜಾಗತಿಕವಾಗಿ ಪೆಟ್ರೋಲ್‌ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಇದೆ.ಯುಎಸ್‌‍ ಡಬ್ಲ್ಯುಟಿಐ ಕ್ರೂಡ್‌ ಒಂದು ಬ್ಯಾರಲ್‌ಗೆ ಶೇ. 11.38ರಷ್ಟು ಏರಿ 75.82 ಡಾಲರ್‌ ಮುಟ್ಟಿದೆ. ಬ್ರೆಂಟ್‌ ಕ್ರೂಡ್‌ ಇಂಡೆಕ್‌್ಸನಲ್ಲಿ ಒಂದು ಬ್ಯಾರಲ್‌ ತೈಲದ ಬೆಲೆ 76.48 ಡಾಲರ್‌ಗೆ ಏರಿದೆ. ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಇರಾನ್‌ ಕೂಡ ವಿವಿಧ ಕಾರ್ಯಾಚರಣೆ ಅಥವಾ ಕ್ರಮಗಳನ್ನು ಕೈಗೊಳ್ಳಬಹುದು. ತಜ್ಞರ ಪ್ರಕಾರ ಇರಾನ್‌ ನಿಯಂತ್ರಣದಲ್ಲಿರುವ ಹಾರ್ಮುಜ್‌ ಜಲಮಾರ್ಗವನ್ನು ಬಂದ್‌ ಮಾಡಬಹುದು. ವಿಶ್ವದ ಶೇ. 25ರಷ್ಟು ತೈಲ ಸರಬರಾಜು ಇಲ್ಲಿಂದ ಸಾಗಿ ಹೋಗುತ್ತದೆ. ಪರ್ಯಾಯ ಮಾರ್ಗದಲ್ಲಿ ತೈಲ ಸಾಗಿಸಲು ಹೆಚ್ಚು ವೆಚ್ಚವಾಗಬಹುದು. ಇದೇ ರೀತಿ ಬಿಕ್ಕಟ್ಟು ಮುಂದುವರಿದರೆ ತೈಲ ಬೆಲೆ ಬ್ಯಾರಲ್‌ಗೆ 120 ರೂ ಮುಟ್ಟಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

ಅಂದರೆ, ಈಗಿರುವ ಬೆಲೆಗಿಂತ ಶೇ. 85ರಷ್ಟು ಏರಿಕೆ ಆಗುವ ಸಂಭಾವ್ಯತೆ ಇಲ್ಲದಿಲ್ಲ.ಪರಿಸ್ಥಿತಿ ಇದೇ ರೀತಿ ಇದ್ದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸಲ್‌ ಬೆಲೆ ತೀವ್ರವಾಗಿ ಏರಿಕೆ ಆಗುವ ನಿರೀಕ್ಷೆ ಇದೆ.

RELATED ARTICLES

Latest News