Saturday, September 14, 2024
Homeಅಂತಾರಾಷ್ಟ್ರೀಯ | Internationalಅಮೆರಿಕ ಪ್ರಜೆ ಸೇರಿ 6 ಒತ್ತೆಯಾಳುಗಳನ್ನು ಹತ್ಯೆ ಮಾಡಿದ ಹಮಾಸ್‌‍

ಅಮೆರಿಕ ಪ್ರಜೆ ಸೇರಿ 6 ಒತ್ತೆಯಾಳುಗಳನ್ನು ಹತ್ಯೆ ಮಾಡಿದ ಹಮಾಸ್‌‍

Israel recovers bodies of 6 Hostages, including an Israeli American

ನವದೆಹಲಿ,ಸೆ.1- ಇಸ್ರೇಲಿ ರಕ್ಷಣಾ ಪಡೆಗಳು ಗಾಜಾದಿಂದ ಅಮೆರಿಕದ ಪ್ರಜೆ ಹರ್ಷ್‌ ಗೋಲ್ಡ್ ಬರ್ಗ್‌ ಪೋಲಿನ್‌ ಸೇರಿದಂತೆ ಆರು ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿವೆ. ಮತದೇಹಗಳು ರಾಫಾ ನಗರದ ಸುರಂಗದಲ್ಲಿ ಪತ್ತೆಯಾಗಿವೆ.

ಪೋಲಿನ್‌ ಶವದ ಜೊತೆ ಈಡನ್‌ ಯೆರುಷಲಿ (24), ಕಾರ್ಮೆಲ್‌ ಗ್ಯಾಟ್‌ (39), ಅಲೊಗ್‌ ಸರುಸಿ (26), ಅಲೆಕ್ಸ್ ಲುಬ್ನೋವ್‌ (32) ಮತ್ತು ಒರಿ ಡ್ಯಾನಿನೊ (25) ಶವಗಳು ಪತ್ತೆಯಾಗಿವೆ.ಗಾಜಾದ ಸುರಂಗಗಳಲ್ಲಿ ಪತ್ತೆಯಾದವರಲ್ಲಿ ಹರ್ಷ್‌ ಗೋಲ್‌್ಡಬರ್ಗ್‌ ಪೋಲಿನ್‌ ಅವರ ದೇಹವೂ ಸೇರಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ದಢಪಡಿಸಿದ್ದಾರೆ.

ರಫಾ ನಗರದ ಅಡಿಯಲ್ಲಿರುವ ಸುರಂಗದಲ್ಲಿ, ಇಸ್ರೇಲಿ ಪಡೆಗಳು ಹಮಾಸ್‌‍ ವಶಪಡಿಸಿಕೊಂಡ ಆರು ಒತ್ತೆಯಾಳುಗಳ ದೇಹಗಳನ್ನು ವಶಪಡಿಸಿಕೊಂಡವು ಎಂದು ಬಿಡೆನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೋಲಿನ್‌ ಅಕ್ಟೋಬರ್‌ 7 ರಂದು ದಕ್ಷಿಣ ಇಸ್ರೇಲ್‌ ಮೇಲೆ ಹಮಾಸ್‌‍ ಭಯೋತ್ಪಾದಕರು ನಡೆಸಿದ ದಾಳಿಯ ಸಂದರ್ಭದಲ್ಲಿ ಸಿಕ್ಕಿಬಿದ್ದ 251 ಒತ್ತೆಯಾಳುಗಳಲ್ಲಿ ಒಬ್ಬನಾಗಿದ್ದ. ಅಕ್ಟೋಬರ್‌ 7 ರಂದು ಹಮಾಸ್‌‍ ಇಸ್ರೇಲ್‌ಗೆ ನುಗ್ಗಿ 1,200 ಜನರನ್ನು ಕೊಂದಾಗ ಸುಮಾರು 250 ಜನರನ್ನು ಅಪಹರಿಸಲಾಯಿತು. ಕಳೆದ ವರ್ಷದ ಕೊನೆಯಲ್ಲಿ ಕದನ ವಿರಾಮದ ಸಮಯದಲ್ಲಿ 100 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.

ಸೂಪರ್‌ನೋವಾ ಸಂಗೀತ ಉತ್ಸವದಿಂದ ಅಪಹರಣಕ್ಕೊಳಗಾದ ಪೋಲಿನ್‌ ಅವರ ಪೋಷಕರು ಕಳೆದ ತಿಂಗಳು ಚಿಕಾಗೋದಲ್ಲಿ ಡೆಮಾಕ್ರಟಿಕ್‌ ರಾಷ್ಟ್ರೀಯ ಸಮಾವೇಶದಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.

RELATED ARTICLES

Latest News