Home ಅಂತಾರಾಷ್ಟ್ರೀಯ | International ಪೋಪ್‌ ಫ್ರಾನ್ಸಿಸ್‌‍ ಅವರ ‘ಡಬಲ್‌ ಸ್ಟಾಂಡರ್ಡ್‌’ ನೀತಿ ಖಂಡಿಸಿದ ಇಸ್ರೇಲ್‌

ಪೋಪ್‌ ಫ್ರಾನ್ಸಿಸ್‌‍ ಅವರ ‘ಡಬಲ್‌ ಸ್ಟಾಂಡರ್ಡ್‌’ ನೀತಿ ಖಂಡಿಸಿದ ಇಸ್ರೇಲ್‌

0
ಪೋಪ್‌ ಫ್ರಾನ್ಸಿಸ್‌‍ ಅವರ ‘ಡಬಲ್‌ ಸ್ಟಾಂಡರ್ಡ್‌’ ನೀತಿ ಖಂಡಿಸಿದ ಇಸ್ರೇಲ್‌

ಜೆರುಸಲೇಮ್‌, ಡಿ.22- ಒಂದು ಕುಟುಂಬದ ಏಳು ಮಕ್ಕಳನ್ನು ಕೊಂದ ವೈಮಾನಿಕ ದಾಳಿಯ ನಂತರ ಗಾಜಾದಲ್ಲಿ ಮಕ್ಕಳ ಮೇಲೆ ಬಾಂಬ್‌ ದಾಳಿಯನ್ನು ಕ್ರೌರ್ಯ ಎಂದು ಖಂಡಿಸಿದ ಪೋಪ್‌ ಫ್ರಾನ್ಸಿಸ್‌‍ ಅವರನ್ನು ಇಸ್ರೇಲ್‌ ಡಬಲ್‌ ಸ್ಟ್ಯಾಂಡರ್ಡ್‌ ಎಂದು ಇಸ್ರೇಲ್‌ ಜರಿದಿದೆ.

ಜಿಹಾದಿ ಭಯೋತ್ಪಾದನೆಯ ವಿರುದ್ಧ ಇಸ್ರೇಲ್‌ನ ಹೋರಾಟದ ನಿಜವಾದ ಮತ್ತು ವಾಸ್ತವಿಕ ಸನ್ನಿವೇಶದಿಂದ ಸಂಪರ್ಕ ಕಡಿತಗೊಂಡಿರುವ ಪೋಪ್‌ರ ಟೀಕೆಗಳು ವಿಶೇಷವಾಗಿ ನಿರಾಶಾದಾಯಕವಾಗಿವೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯು ಶುಕ್ರವಾರ ಪ್ಯಾಲೆಸ್ತೀನ್‌ ಪ್ರದೇಶದ ಉತ್ತರ ಭಾಗದಲ್ಲಿ ಏಳು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 10 ಸದಸ್ಯರನ್ನು ಕೊಂದಿದೆ ಎಂದು ವರದಿ ಮಾಡಿದೆ.

ನಿನ್ನೆ ಅವರು ವಾಗ್ದಾನ ಮಾಡಿದಂತೆ ಪಿತಪ್ರಧಾನರನ್ನು (ಜೆರುಸಲೆಮ್‌ನ) ಗಾಜಾಕ್ಕೆ ಅನುಮತಿಸಲಿಲ್ಲ. ನಿನ್ನೆ ಮಕ್ಕಳ ಮೇಲೆ ಬಾಂಬ್‌ ದಾಳಿ ಮಾಡಲಾಯಿತು. ಇದು ಕ್ರೌರ್ಯ, ಇದು ಯುದ್ಧವಲ್ಲ ಎಂದು ಪೋಪ್‌ ಹೇಳಿದ್ದರು.

ಪ್ಯಾಲೆಸ್ತೀನ್‌ನ ಹಮಾಸ್‌‍ ಉಗ್ರಗಾಮಿಗಳು ಹಲವಾರು ಮಕ್ಕಳು ಸೇರಿದಂತೆ 100 ಒತ್ತೆಯಾಳುಗಳ ಮೇಲೆ ಭಯೋತ್ಪಾದಕರು ದೌರ್ಜನ್ಯ ನಡೆಸಿದೆ ಇದರಿಂದಾಗಿಯೇ ಯುದ್ಧ ಆರಂಭವಾಗಿದೆ ಇಂತಹ ಸಂದರ್ಭದಲ್ಲಿ ಪೋಪ್‌ ಅವರ ಈ ಹೇಳಿಕೆ ದುರದಷ್ಟಕರ ಎಂದು ಇಸ್ರೇಲಿ ಸಚಿವಾಲಯ ಹೇಳಿದೆ