Friday, March 28, 2025
Homeರಾಷ್ಟ್ರೀಯ | Nationalಅಯೋಧ್ಯೆಯ ರಾಮಮಂದಿರದ ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಇಸ್ರೋ

ಅಯೋಧ್ಯೆಯ ರಾಮಮಂದಿರದ ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಇಸ್ರೋ

ಬೆಂಗಳೂರು, ಜ.21- ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದ ಬಾಹ್ಯಾಕಾಶದ ನೋಟವನ್ನು ಹೈದರಾಬಾದ್ ಮೂಲದ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಬಿಡುಗಡೆ ಮಾಡಿದೆ.

ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹದಿಂದ ತೆಗೆದುಕೊಳ್ಳಲಾಗಿದೆ, ಭಾನುವಾರ ಇಸ್ರೋ ಹಂಚಿಕೊಂಡ ಚಿತ್ರವು ಜನವರಿ 22ರಂದು ಉದ್ಘಾಟನೆಗೊಳ್ಳಲಿರುವ ಭವ್ಯವಾದ ಹೊಸ ದೇವಾಲಯವನ್ನು ತೋರಿಸುತ್ತದೆ.
ಕಳೆದ ವರ್ಷ ಡಿ.16ರಂದು ತೆಗೆದ ಚಿತ್ರವು ದಶರಥ್ ಮಹಲ್, ಅಯೋಧ್ಯೆ ರೈಲು ನಿಲ್ದಾಣ ಮತ್ತು ಧಾರ್ಮಿಕ ಸರಯೂ ನದಿಯನ್ನು ಸಹ ತೋರಿಸುತ್ತದೆ.

ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ VK29 ಪೋಸ್ಟರ್ ಗಿಫ್ಟ್

ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರರ ಸಮ್ಮುಖದಲ್ಲಿ ವೈದಿಕ ಸ್ತೋತ್ರಗಳ ನಡುವೆ ನಾಳೆ ಮಹಾಮಸ್ತಕಾಭಿಷೇಕ ನಡೆಯಲಿದೆ.

RELATED ARTICLES

Latest News