Friday, November 22, 2024
Homeರಾಜಕೀಯ | Politicsಸಿಎಂ-ಡಿಸಿಎಂ ವಿಚಾರ ಹಾದಿ-ಬೀದಿಯಲ್ಲಿ ಮಾತನಾಡುವ ವಿಷಯವಲ್ಲ : ಸಚಿವ ಆರ್‌.ಬಿ. ತಿಮ್ಮಾಪುರ

ಸಿಎಂ-ಡಿಸಿಎಂ ವಿಚಾರ ಹಾದಿ-ಬೀದಿಯಲ್ಲಿ ಮಾತನಾಡುವ ವಿಷಯವಲ್ಲ : ಸಚಿವ ಆರ್‌.ಬಿ. ತಿಮ್ಮಾಪುರ

ಹುಬ್ಬಳ್ಳಿ, ಜು.7- ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನದ ವಿಚಾರ ಹಾದಿ ಬೀದಿಯಲ್ಲಿ ಮಾತನಾಡುವ ವಿಷಯವಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅದರದ್ದೇ ಆದ ಘನತೆ, ಮಹತ್ವ ಇರುತ್ತದೆ. ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಷಯವಲ್ಲ.

ಇದಕ್ಕಾಗಿ ಒಂದು ರೂಪುರೇಷೆ ಇದೆ. ಹೈಕಮಾಂಡ್‌ ಇದೆ, ಸಿಎಲ್‌ಪಿ ಇದೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಎಲ್ಲೆಂದರಲ್ಲಿ ಚರ್ಚೆ ಮಾಡಬಾರದು ಎಂದು ಹೇಳಿದರು.ಮಾಧ್ಯಮದವರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಗ್ಗೆ ಚರ್ಚೆ ಮಾಡ್ತಾ ಇದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್‌‍ಸಿಎಸ್‌‍ಪಿ/ ಟಿಎಸ್‌‍ಪಿ ಅನುದಾನ ದುರ್ಬಳಕೆಯಾಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ದುರ್ಬಳಕೆ ಆಗುತ್ತಿಲ್ಲ. ವಾಸ್ತವಾಂಶ ನೋಡಬೇಕು ಎಂದರು.ಹಿಂದುಳಿದ ಜನಾಂಗಕ್ಕೆ ಸಹಾಯ ಮಾಡುವ ಪ್ರವೃತ್ತಿ ಮುಖ್ಯಮಂತ್ರಿಗಳಲ್ಲಿ ಇದೆ. ಯಾವುದೇ ರೀತಿಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಿಲ್ಲ. ಈಗಾಗಲೇ ಸಿಎಂ ಅವರೇ ತಂದ ಕಾನೂನು ಇದು. ಹೆಚ್ಚಿಗೆ ಅನುದಾನ ಕೊಡುತ್ತಿದ್ದಾರೆ. ಇದರಲ್ಲಿ ವಿಪಕ್ಷದವರು ಹುಳುಕು ಹುಡುಕುತ್ತಿದ್ದಾರೆ ಎಂದರು.

ಅಬಕಾರಿ ಇಲಾಖೆಯಲ್ಲಿ ಬಾರ್‌ ವ್ಯಾಪಾರಸ್ಥರಿಗಾಗಿ ವ್ಯಾಪಾರ ಸ್ನೇಹಿ ಅದಾಲತ್‌ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಂತಹ ವಿಚಾರ ಬಹಳ ದಿನಗಳಿಂದ ಇದೆ. ನಮ ಇಲಾಖೆಯಲ್ಲಿ ಇದು ಆಗಬೇಕಾಗಿದೆ. ಗೋವಾದಲ್ಲಿ ಲಿಕ್ಕರ್‌ ಬಹಳ ಕಡಿಮೆ ದರದಲ್ಲಿ ಸಿಗುತ್ತದೆ. ಅಲ್ಲಿ ಯಾವುದೇ ತೆರಿಗೆ ಇಲ್ಲ. ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಸ್ಪಿರಿಟ್‌ ಹೋಗುತ್ತದೆ. ಅದನ್ನು ಮೊದಲು ತಡೆಗಟ್ಟಬೇಕು. ನಮ ರಾಜ್ಯದ ಲಿಕ್ಕರ್‌ ಚೆನ್ನಾಗಿದೆ. ಬೇರೆ ರಾಜ್ಯದ ಕಳಪೆ ಲಿಕ್ಕರ್‌ ನಮ ರಾಜ್ಯಕ್ಕೆ ಬರದಂತೆ ಕಡಿವಾಣ ಹಾಕಬೇಕಾಗಿದೆ ಎಂದರು.

ಮದ್ಯದ ದರ ಏರಿಕೆ ಇಲ್ಲ:
ಮದ್ಯದ ದರ ಏರಿಕೆ ಕೇವಲ ಊಹಾಪೋಹ. ಎಂಎಸ್‌‍ ಐಎಸ್‌‍ಗಳಿಗೆ ಇನ್ನು ಮುಂದೆ ಪರವಾನಗಿ ಕೊಡದಿರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಬಾರ್‌ಗಳಿಗೆ ತೊಂದರೆಯಾಗುತ್ತದೆ ಎಂಬುದಕ್ಕೆ ಅಲ್ಲ, ಇದೊಂದು ಆಡಳಿತಾತಕ ನಿರ್ಧಾರ ಎಂದು ಹೇಳಿದರು.

ಮುಡಾ ಹಗರಣ ಸಿಬಿಐ ತನಿಖೆಗೆ ಕೊಡಬೇಕು ಎಂದು ಬಿಜೆಪಿಯವರು ಕೆಲಸವಿಲ್ಲದೆ ಒತ್ತಡ ಮಾಡುತ್ತಿದ್ದಾರೆ.ಮುಖ್ಯಮಂತ್ರಿಗಳ ಘನತೆಗೆ ಧಕ್ಕೆ ತರಲು ಬಿಜೆಪಿ ಈ ಆಗ್ರಹ ಮಾಡುತ್ತಿದೆ. ಮುಡಾದಲ್ಲಿ ಯಾವುದೇ ಹಗರಣ ಆಗಿಲ್ಲ. ಅವರ ಸರ್ಕಾರ ಇದ್ದಾಗಲೇ ಮಾಡಿದ್ದು ಈಗ ಸಿಬಿಐಗೆ ಒತ್ತಡ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಡವರ ಬಗ್ಗೆ ಕಾಳಜಿ ಇದ್ದರೆ ರಾಜ್ಯಕ್ಕೆ ಅಕ್ಕಿ ಕೊಡಬೇಕು. ಅವರಿಗೆ ಕೇವಲ ಹಿಂದುತ್ವ, ಜಾತಿ, ಧರ್ಮದ ವಿವಾದ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

RELATED ARTICLES

Latest News