Friday, December 20, 2024
Homeರಾಜ್ಯಸಿ.ಟಿ.ರವಿ ಅವರು ಅವಾಚ್ಯ ಶಬ್ದದಿಂದ ನಿಂದಿಸಿದ್ದು ಸ್ಪಷ್ಟವಾಗಿದೆ : ಡಿಸಿಎಂ ಡಿಕೆಶಿ

ಸಿ.ಟಿ.ರವಿ ಅವರು ಅವಾಚ್ಯ ಶಬ್ದದಿಂದ ನಿಂದಿಸಿದ್ದು ಸ್ಪಷ್ಟವಾಗಿದೆ : ಡಿಸಿಎಂ ಡಿಕೆಶಿ

It is clear that C.T. Ravi abused her with abusive words: DCM

ಬೆಳಗಾವಿ,ಡಿ.20– ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸ್ಪಷ್ಟವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತಂತೆ ಕೇಂದ್ರ ಗೃಹಸಚಿವ ಅಮಿತ್‌ಶಾ ನೀಡಿರುವ ಹೇಳಿಕೆ ವಿಚಾರವಾಗಿ ವಿಧಾನಪರಿಷತ್‌ನಲ್ಲಿ ಗದ್ದಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮುಂದೂಡಲಾಗಿದೆ.

ಈ ಸಂದರ್ಭದಲ್ಲಿ ಪರಸ್ಪರ ಚರ್ಚೆಯ ನಡುವೆ ಸಿ.ಟಿ.ರವಿ ಕಾಂಗ್ರೆಸ್‌‍ ನಾಯಕ ರಾಹುಲ್‌ಗಾಂಧಿಯವರನ್ನು ಮಾದಕ ವ್ಯಸನಿ ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಪಘಾತ ಮಾಡಿ ಇಬ್ಬರನ್ನು ಕೊಲೆ ಮಾಡಲಾಗಿದೆ ಎಂದು ಲಕ್ಷ್ಮೀಹೆಬ್ಬಾಳ್ಕರ್‌ ಅವರು ಸಿ.ಟಿ.ರವಿ ಅವರನ್ನು ಕೊಲೆಗಾರ ಎಂದು ಹೇಳಿದ್ದಾರೆ.

ಇದನ್ನು ಸರಿ ಎಂದು ನಾನು ಹೇಳುವುದಿಲ್ಲ. ಆದರೆ ಕೊಲೆಗಾರ ಎಂದಿದ್ದಕ್ಕೆ ಪ್ರತಿಯಾಗಿ ಸಿ.ಟಿ.ರವಿ ಅವಹೇಳನಕಾರಿ ಪದ ಬಳಸಿರುವುದು ಸರಿಯಲ್ಲ. ಕೇವಲ ಸಿ.ಟಿ.ರವಿ ಪರವಾದಂತಹ ವರದಿಗಳು ಮಾತ್ರ ಪ್ರಕಟವಾಗುತ್ತಿವೆ. ಸಿ.ಟಿ.ರವಿ ಅವರು ರಾಹುಲ್‌ಗಾಂಧಿಯವರನ್ನು ನಿಂದಿಸಿರುವ ಬಗ್ಗೆ ಚರ್ಚೆಯಾಗುತ್ತಿಲ್ಲ. ಅಂಬೇಡ್ಕರ್‌ ಅವರನ್ನು ನಿಂದಿಸಿದ ಪ್ರಕರಣ ಕುರಿತು ವಿಮರ್ಶೆಗಳಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಈ ಪ್ರಕರಣದಲ್ಲಿ ಸಭಾಪತಿಯವರ ರೂಲಿಂಗ್‌ ಸರಿಯಿಲ್ಲ. ಅತ್ಯಂತ ಹಿರಿಯರಾದ ಬಸವರಾಜಹೊರಟ್ಟಿ ಅವರನ್ನು ದೂರುಗಳನ್ನು ಪರಿಶೀಲಿಸಬೇಕಿತ್ತು. ಯಾರದು ತಪ್ಪು ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕಿತ್ತು. ಅದನ್ನು ಬಿಟ್ಟು ಆತಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿ ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿದ್ದು ಸೂಕ್ತವಲ್ಲ. ಈ ಕುರಿತು ಚರ್ಚೆಗೂ ಅವಕಾಶ ನೀಡಬೇಕಿತ್ತು. ಹೊರಟ್ಟಿಯವರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಸಭಾಪತಿಯಾದ ಮೇಲೆ ನಿಷ್ಪಕ್ಷಪಾತವಾಗಿರಬೇಕು ಎಂದರು.

ತಮನ್ನು ಕೊಲೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಸಿ.ಟಿ.ರವಿ ಹೇಳಿರುವುದು ರಾಜಕೀಯ ಹಾಸ್ಯಾಸ್ಪದ. ಪೊಲೀಸರು ಪೊಲೀಸ್‌‍ ಠಾಣೆಯಲ್ಲಿ ಬಿಜೆಪಿ ನಾಯಕರುಗಳು ಗುಂಪಾಗಿ ಕುಳಿತು ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಷ್ಟು ಸೌಜನ್ಯವಾಗಿ ವರ್ತಿಸುವ ಅಗತ್ಯವೇ ಇಲ್ಲ. ಆರೋಪಿಯನ್ನು ಆರೋಪಿಯಂತೆ ನಡೆಸಿಕೊಳ್ಳಬೇಕಿತ್ತು. ನಾವು ಯಾವುದಕ್ಕೂ ಹಸ್ತಕ್ಷೇಪ ಮಾಡುತ್ತಿಲ್ಲ. ಒಬ್ಬರೊ, ಇಬ್ಬರನ್ನೊ ಭೇಟಿ ಮಾಡಲು ಅವಕಾಶ ಕೊಡುವುದು ಸಾಮಾನ್ಯ. ಆದರೆ ಪೊಲೀಸ್‌‍ ಠಾಣೆಯಲ್ಲೇ ಪಕ್ಷದ ಸಭೆ ನಡೆಸುತ್ತಿರುವುದು ಒಪ್ಪಿಕೊಳ್ಳುವಂತಹ ವಿಷಯವೇ? ಎಂದು ಪ್ರಶ್ನಿಸಿದರು.

ಲಕ್ಷೀಹೆಬ್ಬಾಳ್ಕರ್‌ ಅವರ ಕ್ಷೇತ್ರದಲ್ಲೇ ಆಕೆಯನ್ನು ನಿಂದಿಸಿರುವ ಸಿ.ಟಿ.ರವಿಯನ್ನು ಸುರಕ್ಷಿತವಾಗಿರಲು ಬಿಟ್ಟಿರುವುದೇ ಪುಣ್ಯ. ಸಹಜವಾಗಿಯೇ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಗೊತ್ತಾಗಿ ಗದ್ದಲ ಮಾಡುವುದು ಸಹಜ. ಹೆಣ್ಣುಮಗಳಿಗೆ ಅವಮಾನವಾದಾಗ ಪ್ರತಿಕ್ರಿಯಿಸುತ್ತಾರೆ. ಹಾಗಾದರೆ ಬಿಜೆಪಿಯವರು ಸಿ.ಟಿ.ರವಿ ಪರವಾಗಿ ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸಿ.ಟಿ.ರವಿ ಹರಕಲು ಬಾಯಿಯ ಕೊಳಕು ಸಂಸ್ಕೃತಿಯ ವ್ಯಕ್ತಿ. ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾಖಾನ್‌ ಎಂದಿದ್ದಾರೆ. ಈ ರೀತಿಯ ಹಲವಾರು ಟೀಕೆಗಳನ್ನು ಕೇಳಿದ್ದಾರೆ. ಇದು ಚಿಕ್ಕಮಗಳೂರಿನ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.

RELATED ARTICLES

Latest News