Friday, December 20, 2024
Homeರಾಜ್ಯಸಿ.ಟಿ.ರವಿ ಅವಾಚ್ಯ ಶಬ್ದ ಬಳಸಿರುವುದು ನಿಜ : ಸಿಎಂ ಸಿದ್ದರಾಮಯ್ಯ

ಸಿ.ಟಿ.ರವಿ ಅವಾಚ್ಯ ಶಬ್ದ ಬಳಸಿರುವುದು ನಿಜ : ಸಿಎಂ ಸಿದ್ದರಾಮಯ್ಯ

It is true that CT Ravi used abusive language: CM Siddaramaiah

ಬೆಂಗಳೂರು,ಡಿ.20- ಹೆಣ್ಣುಮಗಳನ್ನು ಬಹಳ ಶುಚೀಕರಣವಾಗಿ ಅವಹೇಳನ ಮಾಡಿದರೂ ಬಿಜೆಪಿಯವರು ಅದನ್ನು ಬೆಂಬಲಿಸುತ್ತಾರೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಡ್ಯದ ಗೆದ್ದಲಗೆರೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಿಂದ ನೊಂದಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿಕೆ ಪ್ರಕಾರ ಸಿ.ಟಿ.ರವಿ ಅವಾಚ್ಯ ಶಬ್ದ ಬಳಸಿರುವುದು ನಿಜ. ತಪ್ಪು ಮಾಡಿದವರು ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಸಿ.ಟಿ.ರವಿ ಕೂಡ ನಾನು ಹಾಗೆ ಹೇಳಿಲ್ಲ ಎಂದು ಹೇಳುವುದು ಸಹಜ ಎಂದರು.

ಸಾಮಾನ್ಯವಾಗಿ ಹೆಣ್ಣುಮಕ್ಕಳು ಸುಳ್ಳು ಆರೋಪ ಮಾಡಿ ದೂರು ಕೊಡುವುದಿಲ್ಲ. ಒಂದು ವೇಳೆ ಆ ರೀತಿ ಪದಬಳಕೆ ಮಾಡದೇ ಇದ್ದರೆ ಸಿ.ಟಿ.ರವಿ ಬಂಧನ ಏಕೆ ಆಗುತ್ತಿತ್ತು?, ಆ ರೀತಿಯ ಪದವನ್ನು ಆತ ಏಕೆ ಬಳಸಿದ್ದಾರೋ ಗೊತ್ತಿಲ್ಲ. ಮೇಲ್ನೋಟಕ್ಕಂತೂ ಅದು ಅಪರಾಧ ಎಂದರು.
ಸಿ.ಟಿ.ರವಿ ನಾನು ಫೆಸ್ಟ್ರೇಶನ್‌ ಪದ ಬಳಸಿದ್ದೇನೆ ಎಂದು ಹೇಳುತ್ತಿದ್ದಾರೆ.

ನಿಂದನೆಗೆ ಒಳಗಾದ ಲಕ್ಷ್ಮೀ ಹೇಳುತ್ತಿರುವುದನ್ನು ನಾನು ಕೇಳಿದ್ದೇನೆ. ಆಡಿಯೋ, ವಿಡಿಯೋ ಸಾಕ್ಷ್ಯಗಳೂ ಇವೆ ಎಂದು ಹೇಳುತ್ತಿದ್ದಾರೆ. ಅದರ ಪ್ರಕಾರ ಪದಬಳಕೆ ಸತ್ಯ ಎಂದು ತಿಳಿದುಬಂದಿದೆ ಎಂದು ಹೇಳಿದರು.

ಬಸವರಾಜ ಹೊರಟ್ಟಿಯವರು ಘಟನೆ ನಡೆದಾಗ ಅಧಿವೇಶನದಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಮಾಹಿತಿ ಇಲ್ಲದೇ ಇರಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸಿ.ಟಿ.ರವಿಯವರನ್ನು ಬೆಳಗಾವಿಯಿಂದ ಖಾನಾಪುರ ಠಾಣೆಗೆ ಕರೆದೊಯ್ದಿದ್ದೇ ಆತನ ಸುರಕ್ಷತಾ ದೃಷ್ಟಿಯಿಂದ.ತಮಗೆ ಏನಾದರೂ ಅಪಾಯವಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಸಿ.ಟಿ.ರವಿ ಹೇಳುತ್ತಿರುವುದು ಸರಿಯಲ್ಲ. ಹಾಗಿದ್ದರೆ ತಪ್ಪು ಮಾಡಿದವರ ವಿರುದ್ಧ ಕ್ರಮವನ್ನೇ ಕೈಗೊಳ್ಳುವಂತಿಲ್ಲವೇ? ಎಂದು ಪ್ರಶ್ನಿಸಿದರು.

ಅಖಿಲ ಭಾರತ 87ನೇ ಸಾಹಿತ್ಯ ಸಮೇಳನವನ್ನು ಉದ್ಘಾಟಿಸಿ ಭಾಷಣ ಮಾಡುತ್ತೇನೆ. ಮಂಡ್ಯ ಶುದ್ಧ ಕನ್ನಡದ ಜಿಲ್ಲೆ. ಇಲ್ಲಿ ಅಪ್ಪಟ ಕನ್ನಡ ಬಳಸುತ್ತಾರೆ. ಯಾರೇ ಅನ್ಯಭಾಷಿಗರು ಇಲ್ಲಿಗೆ ಬಂದರೂ ಕನ್ನಡ ಕಲಿಯಬೇಕು. ಹಿಂದಿ, ತಮಿಳು, ಮಲಯಾಳಂ, ಉರ್ದು ಯಾವುದೇ ಭಾಷೆಯವರು ಬಂದರೂ ಇಲ್ಲಿ ಕನ್ನಡ ಕಲಿಯಲೇಬೇಕಿದೆ ಎಂದರು.ಕನ್ನಡ ನಾಡಿನ ಭಾಷೆ. ವರ್ಷಕ್ಕೊಮೆ ಸಾಹಿತ್ಯ ಸಮೇಳನವನ್ನು ಆಯೋಜಿಸಲಾಗಿದೆ. ಅದನ್ನು ವಿಜೃಂಭಣೆಯಿಂದ ಆಚರಿಸುವುದು ನಮ ಕರ್ತವ್ಯ ಎಂದು ತಿಳಿಸಿದರು.

RELATED ARTICLES

Latest News