Friday, May 16, 2025
Homeರಾಜ್ಯಅಪರೇಷನ್ ಸಿಂಧೂರ ಬಗ್ಗೆ ಅಪಪ್ರಚಾರಕ್ಕೆ ಕಾಂಗ್ರೆಸ್ ಸಚಿವರಿಗೆ ಟಾಸ್ಕ್ ಕೊಟ್ಟಂತೆ ಕಾಣುತ್ತೆ : ಸಿ.ಟಿ.ರವಿ

ಅಪರೇಷನ್ ಸಿಂಧೂರ ಬಗ್ಗೆ ಅಪಪ್ರಚಾರಕ್ಕೆ ಕಾಂಗ್ರೆಸ್ ಸಚಿವರಿಗೆ ಟಾಸ್ಕ್ ಕೊಟ್ಟಂತೆ ಕಾಣುತ್ತೆ : ಸಿ.ಟಿ.ರವಿ

It seems that Congress has given ministers a task to spread misinformation about Operation Sidoor

ಬೆಂಗಳೂರು, ಮೇ 16-ಕಾಂಗ್ರೆಸ್‌ ನವರು ಅಪರೇಷನ್ ಸಿಂಧೂರ ಬಗ್ಗೆ ಸಚಿವರಿಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್‌ನವರು ಸಿಂಧೂರ ಕಾರ್ಯಾಚರಣೆ ಬಗ್ಗೆ ಅಪಸ್ವರದ ಮಾತನಾಡುತ್ತಿದ್ದಾರೆ. ಯಾಕೆ ಕದನ ನಿಲ್ಲಿಸಿದರು ಅಂತಿದ್ದಾರೆ.

ಇನ್ನು ಕೆಲವರು ಕೇವಲ ನಾಲ್ಕು ವಿಮಾನ ಹಾರಿಸಿದರು ಎನ್ನುತ್ತಿದ್ದಾರೆ. ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ದಿನೇಶ್, ಶಾಸಕ ಕೊತ್ತೂರು ಮಂಜುನಾಥ್ ಇವರೆಲ್ಲರಿಗೆ ಅಪರೇಷನ್ ಸಿಂದೂರ್ ಬಗ್ಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂಗೆ ಕಾಣುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನವರಲ್ಲೇ ಸಿಂಧೂರ ಬಗ್ಗೆ ದ್ವಂದ್ವ ಕಾಣುತ್ತಿದೆ. ದೇಶವಿಡೀ ಯುದ್ಧ ಮಾಡಬೇಕು ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡ ಎಂದರು. ನಂತರ ಸಿದ್ದರಾಮಯ್ಯ ಹಣೆ ಮೇಲೆ ದೊಡ್ಡ ಕುಂಕುಮ. ಹಾಕಿಕೊಂಡು ಸುದ್ದಿಗೋಷ್ಟಿ ಮಾಡಿ ಸೈನಿಕರನ್ನು ಶ್ಲಾಘಿಸಿದರು ಎಂದು ಅವರು ಹೇಳಿದರು.

ಸಿಂಧೂರ ಕಾರ್ಯಾಚರಣೆ ಕ್ರೆಡಿಟ್ ಸೈನ್ಯಕ್ಕೆ ಸಲ್ಲಬೇಕು ಎಂದ ಸಿದ್ದರಾಮಯ್ಯ ಅವರು ಈಗ ಅಪಪ್ರಚಾರ ಯಾಕೆ ಮಾಡುತ್ತಿದ್ದಾರೆ? ನಿಮ್ಮ ಅಪಪ್ರಚಾರ ಸೈನ್ಯದ ಬಗ್ಗೆನೋ? ರಾಜಕೀಯ ನಾಯಕತ್ವಕ್ಕೋ? ಎಂದು ಅವರು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನೇನೆಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದ್ದರು. ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಂದ್ ಮಾಡಿದರು. ಪಾಕ್ ಉಗ್ರ ಪೋಷಕ ರಾಷ್ಟ್ರವೆಂದು ಜಗತ್ತಿಗೂ ಹೇಳಿದ್ದಾರೆ. 9 ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ನೂರಾರು ಉಗ್ರರನ್ನು ನರಕಕ್ಕೆ ಕಳಿಸಿದ್ದಾರೆ.

ಮುಂಬೈ ತಾಜ್ ಹೊಟೇಲ್ ಮೇಲೆ ದಾಳಿ, ವಾರಣಾಸಿ ಸ್ಫೋಟ, ರೈಲು ಸ್ಫೋಟ, ಮಾಲೇಗಾಂವ್ ಸ್ಫೋಟ, ಅಹಮದಾಬಾದ್ ಬಾಂಬ್ ಸ್ಪೋಟ, ದೆಹಲಿ ಬಾಂಬ್ ಸ್ಫೋಟ, ಪುಣಿ ಬಾಂಬ್ ಸ್ಫೋಟಗಳು ಆದಾಗ ಯಾವ ಕ್ರಮ ಕೈಗೊಂಡಿದ್ದರು? ಯಾವ ಸರ್ಜಿಕಲ್ ಸ್ಟೈಕ್ ಮಾಡಿದ್ದರು. ಕಾಂಗ್ರೆಸ್‌ ನವರು? ಕಾಂಗ್ರೆಸ್‌ನವರು ನೇನೆಗೆ ಸ್ವಾತಂತ್ರ್ಯ ಕೊಟ್ಟಿದ್ದರೆ? ಎಂದು ಅವರು ತರಾಟೆಗೆ ತೆಗೆದುಕೊಂಡರು.

ಆಗ ಕಾಂಗ್ರೆಸ್‌ನವರಿಗೆ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಅನಿಸಿರಲಿಲ್ಲ. ಈಗ ಅನಿಸುತ್ತಿರುವುದರ ಹಿಂದಿನ ಕಾರಣವೇನು? ಭಯೋತ್ಪಾದನೆಯ ಮೂಲ ಡಿಎನ್‌ನಲ್ಲೇ ಇದೆ ಆ ಡಿಎನ್ಎ ಕಿತ್ತು ಹಾಕಬೇಕು. ಇಥಿಯೋಪಿಯಾ, ನೂಡಾನ್, ಹಮಾನ್ ಭಯೋತ್ಪಾದನೆ, ಆಫ್ಘಾನಿಸ್ತಾನ, ಇರಾಕ್, ಇರಾನ್, ಟ್ವಿನ್ ಟವರ್ ಸ್ಫೋಟ ಇದಕ್ಕೆಲ್ಲ ಯಾವ ಭಯೋತ್ಪಾದನೆಯ ಡಿಎನ್ಎ ಕಾರಣ? ಎಂದು ಅವರು ಪ್ರಶ್ನಿಸಿದರು.

ಈ ಡಿಎನ್ಎ ಅನ್ನು ಮತಬ್ಯಾಂಕ್‌ ಗಾಗಿ ಪೋಷಿಸುತ್ತಿರೋರು ಯಾರು? ದೆ ಆರ್. ಮೈ ಬ್ರದರ್ಸ್ ಅಂದವರು ಯಾರು? ಬಿಜೆಪಿ ಸರ್ಜಿಕಲ್ ನೈಕ್ ಮಾಡಿದಾಗ ನಾಕ್ಷಿ ಕೇಳಿದವರು ಇದೇ ಕಾಂಗ್ರೆಸ್ ನವರು. ಈಗ ಪಾಕ್ ಉಗ್ರರ ಮೇಲಿನ ದಾಳಿಗೆ ಭಾರತ ಜಾಗತಿಕ ಸಾಕ್ಷ್ಯ ಕೊಟ್ಟಿದೆ. ಯುದ್ಧ ನಿಲ್ಲಿಸಿಲ್ಲ. ಇದು ತಾತ್ಕಾಲಿಕ ಅಷ್ಟೇ ಮತ್ತೆ ಯುದ್ಧ ಶುರುವಾದರೆ, ಅವರ ತಲೇನೂ, ಬಾಲನೂ ಕಟ್ ಆಗುತ್ತದೆ ಎಂದು ರವಿ ವಾಗ್ದಾಳಿ ನಡೆಸಿದರು.

ಭಯೋತ್ಪಾದನೆಯ ಮೂಲ ಕಿತ್ತು ಹಾಕಬೇಕಾದರೆ ನಮ್ಮ ಜತೆ ಕಾಂಗ್ರೆಸ್ ಕೈ ಜೋಡಿಸಲಿ. ಇಲ್ಲಿರುವ ಡಿಎನ್ಎ ಕಿತ್ತು ಹಾಕಲು ಕಾಂಗ್ರೆಸ್ ಸಿದ್ಧವಾಗಿದೆಯೇ? ಭಯೋತ್ಪಾದನೆ ಬೆಳೆಸುವ ವ್ಯವಸ್ಥೆಯ ಕೇಂದ್ರಗಳಿಗೆ ನೀರು, ಗೊಬ್ಬರ ಹಾಕಿ ಪೋಷಿಸುತ್ತಿರುವ ಕಾಂಗ್ರೆಸ್ ಮನಸ್ಥಿತಿ ಬದಲಾಗಬೇಕು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಏಕೆ ಪಾಕ್ ನ್ಯಾಷನಲ್ ಕಾಂಗ್ರೆಸ್ ಥರ ವರ್ತಿಸುತ್ತಿದೆ? ಆ ಡಿಎನ್ಎ ಕರ್ನಾಟಕದಲ್ಲೂ ಇದೆ. ಜಗತ್ತಲ್ಲೂ ಇದೆ.

ಮೊದಲು ಇದನ್ನು ಮಟ್ಟ ಹಾಕಬೇಕು. ಭಯೋತ್ಪಾದನೆ ಮೂಲಕ್ಕೆ 1400 ವರ್ಷಗಳ ಇತಿಹಾಸ ಇದೆ. ಬದಲಾದ ಸಂದರ್ಭ, ಬದಲಾದ ರೀತಿಯಲ್ಲಿ ಅದು ನಡೀತಿದೆ. ಕರ್ನಾಟಕದಲ್ಲೂ ಭಯೋತ್ಪಾದಕರ ಕೇಂದ್ರಗಳಿವೆ. ಮತದ ಹೆಸರಲ್ಲಿ ಅಲ್ಲಿ ಏನು ಕಲಿಸುತ್ತಿದ್ದಾರೆ? ಅದಕ್ಕೆ ಯಾರ ಪೋಷಣೆ ಇದೆ? ಎಂದು ಅವರು ಪ್ರಶ್ನಿಸಿದರು.

RELATED ARTICLES

Latest News