Friday, April 18, 2025
Homeರಾಷ್ಟ್ರೀಯ | Nationalನಾಳೆ ಭಾರತಕ್ಕೆ ಬರುತ್ತಿದ್ದಾರೆ ಇಟಲಿ ಉಪ ಪ್ರಧಾನಿ

ನಾಳೆ ಭಾರತಕ್ಕೆ ಬರುತ್ತಿದ್ದಾರೆ ಇಟಲಿ ಉಪ ಪ್ರಧಾನಿ

Italy's Deputy PM Tajani to visit India on April 11

ನವದೆಹಲಿ, ಏ.10 : ಇಟಲಿಯ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಆಂಟೋನಿಯೊ ತಜಾನಿ ಅವರು ನಾಳೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಎರಡು ದಿನಗಳ ಭಾರತ ಭೇಟಿ ಸಂದರ್ಭದಲ್ಲಿ ಅವರು ರಾಷ್ಟಪತಿ ದೌಪದಿ ಮುರ್ಮು ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡದಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಅವರ ಮುಂಬರುವ ಭೇಟಿಯ ಮಾಧ್ಯಮ ಸಲಹೆಯನ್ನು ಹಂಚಿಕೊಂಡಿದೆ.

ತಜಾನಿ ನಾಳೆ ದೆಹಲಿಗೆ ಆಗಮಿಸಲಿದ್ದು, ಹೈದರಾಬಾದ್ ಹೌಸ್ ನಲ್ಲಿ ಜೈಶಂಕರ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ವಾಣಿಜ್ಯ ಭವನದಲ್ಲಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಏಪ್ರಿಲ್ 12 ರಂದು ಮಧ್ಯಾಹ್ನ ರಾಷ್ಟ್ರಪತಿ ಭವನದಲ್ಲಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

Latest News