Friday, November 22, 2024
Homeರಾಜಕೀಯ | Politicsಕಾಂಗ್ರೆಸ್‌‍ ಸರ್ಕಾರ ಆಡಳಿತದಲ್ಲಿ ಐಟಿಬಿಟಿ ಸಿಟಿ 'ಉಡ್ತಾ ಬೆಂಗಳೂರು' ಆಗುತ್ತಿದೆ : ಬಿಜೆಪಿ ಆರೋಪ

ಕಾಂಗ್ರೆಸ್‌‍ ಸರ್ಕಾರ ಆಡಳಿತದಲ್ಲಿ ಐಟಿಬಿಟಿ ಸಿಟಿ ‘ಉಡ್ತಾ ಬೆಂಗಳೂರು’ ಆಗುತ್ತಿದೆ : ಬಿಜೆಪಿ ಆರೋಪ

ಬೆಂಗಳೂರು,ಮೇ24- ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಐಟಿಬಿಟಿ ಖ್ಯಾತಿಯ ಬೆಂಗಳೂರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಉಡ್ತಾ ಬೆಂಗಳೂರು ಮಾಡಲು ಹೊರಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಸಿಲಿಕಾನ್‌ ಸಿಟಿಯು ಇತ್ತೀಚೆಗೆ ಉಡ್ತಾ ಬೆಂಗಳೂರು ಆಗುವತ್ತಾ ಹೊರಟಿದೆ. ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ನಿದರ್ಶನ ಎಂದು ಕೆಂಡಕಾರಿದೆ.

ಬೆಂಗಳೂರು ಮಾದಕಮತ್ತು ರೇವ್‌ ಪಾರ್ಟಿ ಅಡ್ಡವಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಂಗಳೂರಿನಲ್ಲಿ ಅನೈತಿಕ ಸಭೆಗಳು ನಡೆಯುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌‍ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಅನೈತಿಕ ಕೂಟಗಳು ನಡೆಯುತ್ತಿವೆ. ಸಿಲಿಕಾನ್‌ ಸಿಟಿ ಈಗ ಡ್ರಗ್ಸ್ , ಗಾಂಜಾ, ರೇವ್‌ ಪಾರ್ಟಿಗಳಿಂದ ತುಂಬಿ ತುಳುಕುತ್ತಿದೆ ಎಂದು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದೆ.

ಬ್ಯಾಡ್‌ ಬೆಂಗಳೂರು ಮತ್ತು ಕಾಂಗ್ರೆಸ್‌‍ ಫೇಲ್‌ ಕರ್ನಾಟಕ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇರುವ ಪೋಸ್ಟರ್‌ ಅನ್ನು ಬಳಸಿದೆ.

RELATED ARTICLES

Latest News