ನವದೆಹಲಿ,ಡಿ.31- ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿ ಮೊತ್ತ ನಿಗದಿ ಅಂತಿಮ ದಿನಾಂಕವನ್ನು ಜನವರಿ 31, 2025 ರವರೆಗೆ ವಿಸ್ತರಿಸಿದೆ. ತೆರಿಗೆ ಪಾವತಿ ಮೊತ್ತ ನಿಗದಿಗೆ ಇಂದು ಅಂತಿಮ ದಿನಾಂಕವಾಗಿದ್ದು ತೆರಿಗೆ ಪಾವತಿ ವಿಚಾರವಾಗಿ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ ದೊಡ್ಡ ರಿಲೀಫ್ ನೀಡಿದೆ. ಅದರಂತೆ ತೆರಿಗೆ ಪಾವತಿ ಅಂತಿಮ ಮೊತ್ತ ನಿಗದಿ ದಿನಾಂಕವನ್ನು ಜನವರಿ 31, 2025 ರವರೆಗೆ ವಿಸ್ತರಿಸಿದೆ.
ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ, 2024 ರ ವಿಭಾಗ 90ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಕೋಷ್ಟಕದ ಕಲಂ (3) ರ ಪ್ರಕಾರ ಪಾವತಿಸಬೇಕಾದ ಮೊತ್ತವನ್ನು ನಿರ್ಧರಿಸುವ ದಿನಾಂಕವನ್ನು ಡಿಸೆಂಬರ್ 31, 2024 ರಿಂದ ಜನವರಿ 31, 2025 ರವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.
ಅಂತೆಯೇ, 2024ರ ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ, ನಿಯಮಗಳು ಅಥವಾ ಮಾರ್ಗದರ್ಶನ ಟಿಪ್ಪಣಿಯಲ್ಲಿ ಏನೇ ಇದ್ದರೂ, ಜನವರಿ 3, 2025 ರಂದು ಅಥವಾ ಅದಕ್ಕೂ ಮೊದಲು ಘೋಷಣೆಯನ್ನು ಸಲ್ಲಿಸಿದ ಸಂದರ್ಭಗಳಲ್ಲಿ, ಯೋಜನೆಯ 90 ನೇ ವಿಭಾಗದ ಅಡಿಯಲ್ಲಿ ನಿರ್ದಿಷ್ಟ ಪಡಿಸಿದ ಕಲಂ (3) ರ ಪ್ರಕಾರ ಮತ್ತು ಫೆಬ್ರವರಿ 01, 2025 ರಂದು ಅಥವಾ ನಂತರ ಘೋಷಣೆಯನ್ನು ಸಲ್ಲಿಸಿದ ಸಂದರ್ಭಗಳಲ್ಲಿ, ಪಾವತಿಸಬೇಕಾದ ಮೊತ್ತವನ್ನು ಐಡಿ ಟ್ಯಾಬ್ನ ಕಲಂ (4) ರ ಪ್ರಕಾರ ನಿರ್ಧರಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.