Thursday, August 28, 2025
Homeರಾಷ್ಟ್ರೀಯ | Nationalಕಾಶ್ಮೀರದ ಬಂಡಿಪೋರಾ ಗಡಿನಿಯಂತ್ರಣ ರೇಖೆ ಬಳಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಕಾಶ್ಮೀರದ ಬಂಡಿಪೋರಾ ಗಡಿನಿಯಂತ್ರಣ ರೇಖೆ ಬಳಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

J&K: Army foils infiltration bid along LoC in Bandipora; 2 terrorists killed

ಶ್ರೀನಗರ,ಆ.28– ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್‌ ಸೆಕ್ಟರ್‌ನ ಗಡಿನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿ ಇಬ್ಬರು ಭಯೋತ್ಪಾದಕರು ಹೊಡೆದುರುಳಿಸಿದೆ.

ಒಳನುಸುಳುವಿಕೆ ಪ್ರಯತ್ನದ ಬಗ್ಗೆ ಜಮ್ಮು-ಕಾಶೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಗುರೆಜ್‌ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಮತ್ತು ರಾಜ್ಯಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ಸೇನೆಯ ಶ್ರೀನಗರ ಮೂಲದ ಚಿನಾರ್‌ ಕಾರ್ಪ್ಸ್ ತಿಳಿಸಿದೆ.

ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿ ಒಳನುಗ್ಗುವವರನ್ನು ತಡೆಯಲು ಪ್ರಯತ್ನಿಸಿದಾಗ ಭಯೋತ್ಪಾದಕರು ವಿವೇಚನಾರಹಿತವಾಗಿ ಗುಂಡು ಹಾರಿಸಿದರು ಎಂದು ಸೇನೆ ತಿಳಿಸಿದೆ.ನಮ ಪಡೆಗಳು ಗುಂಡಿನ ಪ್ರತಿದಾಳಿಯೊಂದಿಗೆ ಪ್ರತಿಕ್ರಿಯಿಸಿ, ಇಬ್ಬರು ಭಯೋತ್ಪಾದಕರನ್ನು ತಟಸ್ಥಗೊಳಿಸಿದವು ಎಂದು ಸೇನೆ ತಿಳಿಸಿದೆ.ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅದು ಹೇಳಿದೆ.

RELATED ARTICLES

Latest News