ಬೆಳಗಾವಿ,ಜು.25- ದಂಡು ಮಂಡಳಿ ವ್ಯಾಪ್ತಿಯ ಎಲ್ಲ ನಾಗರಿಕ ಕ್ಷೇತ್ರವನ್ನು / ಜಮೀನನ್ನು ರಕ್ಷಣಾ ಸಚಿವಾಲಯದ ನಿರ್ದೇಶನಗಳಡಿ, ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರವಾಗುವ ನಿಟ್ಟಿನಲ್ಲಿ ಪ್ರಸ್ತಾವನೆ ತಯಾರಿಸುವ ಬಗ್ಗೆ ಸೂಚನೆ ನೀಡಬೇಕೆಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರಿಗೆ ಸಂಸದ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಈ ಕುರಿತು ಮಾತುಕತೆ ನಡೆಸಿರುವ ಅವರು, ಬೆಳಗಾವಿ ದಂಡು ಮಂಡಳಿ ಇದರ ವ್ಯಾಪ್ತಿಯ ನೋಟಿೈಡ್ ಸಿವಿಲ್ ಏರೀಯಾ ಮಾತ್ರ ಅಧಿಕಾರಿಗಳು ಗುರುತಿಸಿ ಉಳಿದ ಸಿವಿಲ್ ಏರಿಯಾಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂರಿಸುವ ಬಗ್ಗೆ ಕರಡು ಪ್ರಸ್ತಾವನೆಯಲ್ಲಿ ಪ್ರಸ್ತಾಪ ಮಾಡಿರಲಿಲ್ಲ.
ಕೇವಲ ಬಜಾರ ಪ್ರದೇಶಗಳನ್ನು ಮಾತ್ರ ಪರಿಗಣಿಸಿ ಬಂಗಲೋ ಪ್ರದೇಶ ಮಾಡಿರಿಲಿಲ್ಲ. ಈ ಕುರಿತು ಇದೇ ಜು. 6 ರಂದು ಜರುಗಿದ ದಂಡು ಮಂಡಳಿ ಸಭೆಯಲ್ಲಿ ಖುದ್ದಾಗಿ ಹಾಜರಿದ್ದು ಗಮನಕ್ಕೂ ತಂದರು ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಅಲ್ಲದೆ ಸಾರ್ವಜನಿಕ ವಲಯದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನಲೆಯಲ್ಲಿ ನವ-ದೆಹಲಿಯಲ್ಲಿ ಸಂಸದ ಜಗದೀಶ ಶೆಟ್ಟರ್‌ರವರು ರಕ್ಷಣಾ ಸಚಿವ ರಾಜನಾಥ ಸಿಂಗ್‌ರನ್ನು ಬೇಟಿ ಮಾಡಿ ಸುಧೀೕರ್ಘವಾಗಿ ಈ ಕುರಿತು ಚರ್ಚಿಸಿ, ರಕ್ಷಣಾ ಸಚಿವಾಲಯದ ಆದೇಶಗಳಂತೆ ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ಸಿವಿಲ್ ಪ್ರದೇಶಗಳನ್ನು ಗುರುತಿಸಿ, ಕರಡು ಪ್ರಸ್ತಾವನೆಯನ್ನು ರೂಪಿಸಿ ಕರ್ನಾಟಕ ರಾಜ್ಯ ಸರಕಾರಕ್ಕೆ ಸಲ್ಲಿಸುವಂತೆ ವಿನಂತಿದರು.
ರಕ್ಷಣಾ ಸಚಿವಾಲಯದ ನಿರ್ದೇಶಗಳಡಿ ಯಲ್ಲಿಯೇ ಪ್ರಸ್ತಾಪಿತ ಕರಡು ಪ್ರಸ್ತಾವನೆ ತಯಾರಿಸುವ ಬಗ್ಗೆ ಸೂಚನೆಯನ್ನು ಬೆಳಗಾವಿ ದಂಡು ಮಂಡಳಿ ಅಧಿಕಾರಿಗಳಿಗೆ ನೀಡುವುದಾಗಿ ರಾಜನಾಥ ಸಿಂಗ್ ಭರವಸೆ ನೀಡಿದ್ದಾರೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.