Thursday, November 21, 2024
Homeರಾಷ್ಟ್ರೀಯ | Nationalಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ ಉಗ್ರವಾದಿಗಳ ಗೆಲುವು, ಅಣ್ಣಾಮಲೈ ಸೋಲು

ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ ಉಗ್ರವಾದಿಗಳ ಗೆಲುವು, ಅಣ್ಣಾಮಲೈ ಸೋಲು

ಬೆಂಗಳೂರು,ಜೂ.6- ಐಪಿಎಸ್‌‍ ಹುದ್ದೆಯನ್ನು ತ್ಯಾಗ ಮಾಡಿ ದೇಶಸೇವೆಗೆಂದು ರಾಜಕಾರಣಕ್ಕೆ ಬಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ದಕ್ಷ, ಪ್ರಾಮಾಣಿಕ ಸಿಂಗಂ ಎಂದೇ ಪ್ರಸಿದ್ಧಿ ಪಡೆದಿದ್ದ ಅಣ್ಣಾಮಲೈ ಅವರಿಗೆ ಒಂದು ಕಡೆ ಸೋಲಾದರೆ, ಮತ್ತೊಂದೆಡೆ ಉಗ್ರ ಚಟುವಟಿಕೆಗಳ ಆರೋಪದಲ್ಲಿ ಜೈಲಿನಲ್ಲಿರುವ ಸಿಖ್ಬ್ ಧರ್ಮ ಬೋಧಕ ಅಮೃತ್‌ಪಾಲ್‌ ಸಿಂಗ್‌, ಶೇಖ್‌ ಅಬ್ದುಲ್ಲಾ ರಶೀದ್‌ ಈ ಇಬ್ಬರಿಗೆ ಭರ್ಜರಿ ಗೆಲುವು ದೊರೆತಿದೆ. ಪ್ರಜಾಪ್ರಭುತ್ವದ ವೈರುಧ್ಯವೋ… ಸೌಂದರ್ಯವೋ… ವಿರೂಪವೋ…ಗೊತ್ತಾಗುತ್ತಿಲ್ಲ.

ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್‌‍ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಕರ್ನಾಟಕದ ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ಹತ್ತಿಕ್ಕಿದ್ದರು. ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಎಡೆಮುರಿ ಕಟ್ಟಿದ್ದರು. ಮಲೆನಾಡಿನಲ್ಲಿ ನಕ್ಸಲರನ್ನು ಮಟ್ಟ ಹಾಕಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹೆಸರು ಮಾಡಿದ್ದರು. ದೇಶಸೇವೆ ಮಾಡಲೆಂದು ತಮ ಐಪಿಎಸ್‌‍ ಹುದ್ದೆಯನ್ನು ತ್ಯಜಿಸಿ ತಮಿಳುನಾಡಿನಲ್ಲಿ ಬಿಜೆಪಿ ಸೇರ್ಪಡೆಗೊಂಡು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಾಡಿನಾದ್ಯಂತ ಸಂಚರಿಸಿ ಸಂಚಲನ ಮೂಡಿಸಿ ಕೊಯಮತ್ತೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

ವಿಪರ್ಯಾಸವೆಂದರೆ ಜನ ಅವರ ಕೈ ಹಿಡಿಯಲಿಲ್ಲ. ಈ ಕ್ಷೇತ್ರದಲ್ಲಿ ಅಣ್ಣಾಮಲೈ ಅವರಿಗೆ ಸೋಲಾಯಿತು. ವಿದ್ಯಾವಂತ, ಬುದ್ಧಿವಂತ, ಪ್ರಖರ ಪಾಂಡಿತ್ಯ ಹೊಂದಿದ್ದ ಯುವ ನಾಯಕನಿಗೆ ತಮಿಳುನಾಡು ಜನ ಮನ್ನಣೆ ನೀಡಲಿಲ್ಲ.

ಆದರೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಜೈಲಿನಲ್ಲಿದ್ದ ಇಬ್ಬರನ್ನು ಜನ ಗೆಲ್ಲಿಸಿದ್ದಾರೆ. ಸಿಖ್‌್ಖ ಧರ್ಮ ಬೋಧಕ ಅಮೃತ್‌ಸಿಂಗ್‌ ಪಂಜಾಬ್‌ನ ಕುದೂರು ಕ್ಷೇತ್ರದಿಂದ ಗೆಲುವು ಸಾಧಿಸಿದರೆ ಜಮು-ಕಾಶೀರದ ಬಾರಾಮುಲ್ಲಾ ಕ್ಷೇತ್ರದಿಂದ ಎಂಜಿನಿಯರ್‌ ರಶೀದ್‌ ಎಂದು ಕರೆಯಲಾಗುವ ಶೇಖ್‌ ಅಬ್ದುಲ್ಲಾ ರಶೀದ್‌ ಆಯ್ಕೆಯಾಗಿದ್ದಾರೆ.

ಅಮೃತ್‌ಪಾಲ್‌ ಸಿಂಗ್‌ ಅಸ್ಸಾಂನ ದಿಬ್ರೂಗಡ ಜೈಲಿನಲ್ಲಿದ್ದಾರೆ. ಸಿಖ್‌್ಖ ಮೂಲಭೂತವಾದಿ ಖಲಿಸ್ತಾನಿ ಪ್ರತ್ಯೇಕತಾವಾದಿದ್ದ ಇವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಜೈಲಿನಿಂದಲೇ ಚುನಾವಣಾ ಕಣಕ್ಕಿಳಿದಿದ್ದ ಇವರು ಪ್ರಸ್ತುತ 1.93 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅದೇ ರೀತಿ ಎಂಜಿನಿಯರ್‌ ರಶೀದ್‌ 2019 ರಿಂದ ಜೈಲಿನಲ್ಲಿದ್ದಾರೆ. ಜಮು-ಕಾಶೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು, ಗೆಲುವು ಸಾಧಿಸಿದ್ದಾರೆ.ದಕ್ಷ, ಪ್ರಾಮಾಣಿಕ ದೇಶಸೇವೆಯ ಮನಸ್ಥಿತಿಯ ಯುವ ನಾಯಕರನ್ನು ಕಡೆಗಣಿಸಿ ದೇಶದ್ರೋಹದ ಆರೋಪದಲ್ಲಿ ಬಂಧಿತವಾಗಿರುವವರನ್ನು ಕೈ ಹಿಡಿದಿರುವುದು ಪ್ರಜಾಪ್ರಭುತ್ವದ ಸೌಂದರ್ಯವೆನ್ನಬೇಕೋ, ವಿರೂಪವೆನ್ನಬೇಕೋ? ತಿಳಿಯದಾಗಿದೆ.

ಜೈಲಿನಿಂದ ಆಯ್ಕೆಯಾದ ಈ ಇಬ್ಬರು ಜೈಲಾಧಿಕಾರಿಗಳ ಅನುಮತಿ ಪಡೆದು ಸಂಸತ್‌ಗೆ ಬಂದು ಪ್ರಮಾಣವಚನ ಸ್ವೀಕರಿಸಬೇಕು. ಲೋಕಸಭಾ ಕಾರ್ಯಕಲಾಪದಲ್ಲಿ ಏಕೆ ಪಾಲ್ಗೊಳ್ಳದಿರುವ ಬಗ್ಗೆ ಸ್ಪೀಕರ್‌ಗೆ ಪತ್ರ ನೀಡಬೇಕು. ಅವರಿಂದ ಅನುಮತಿ ಪಡೆದು ಗೈರುಹಾಜರಾಗಬೇಕಾಗುತ್ತದೆ. ಇಲ್ಲದಿದ್ದರೆ, ಅನರ್ಹಗೊಳ್ಳುತ್ತಾರೆ.

RELATED ARTICLES

Latest News