ಜೈಪುರ,ಮಾ.20- ತನ್ನ ಹಳೆಯ ಪ್ರಿಯಕನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆ ಮಾಡಿದ 42 ವರ್ಷದ ಮಹಿಳೆ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಜೈಪುರದಲ್ಲಿ ನಡೆದಿದೆ.
ತರಕಾರಿ ವ್ಯಾಪಾರಿಯಾಗಿದ್ದ ಧನ್ನಲಾಲ್ ಸೈನಿ ಪತ್ನಿಯಿಂದಲೇ ಕೊಲೆಯಾದ ಪತಿ. ಸಂಗನೇರ್‌ನ ನಿವಾಸಿ ಗೋಪಾಲಿ ದೇವಿ ಮತ್ತು ಸವಾಯಿ ಮಧೋಪುರ್‌ದ ನಿವಾಸಿ
ಪ್ರಸ್ತುತ ಮುಹಾನಾದಲ್ಲಿ ವಾಸಿಸುತ್ತಿರುವ ಪ್ರಿಯಕರ ದೀನ್ ದಯಾಳ್ ಕುಶ್ವಾಹ(30) ಕೊಲೆ ಆರೋಪಿಗಳು.
ಮಾರ್ಚ್ 16ರಂದು ರಿಂಗ್ ರಸ್ತೆಯ ಬಳಿ ಸುಟ್ಟ ಶವ ಪತ್ತೆಯಾದ ಬಳಿಕ ಪ್ರಕರಣದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಗೋಪಾಲಿದೇವಿ ಪ್ರಿಯಕರ ದೀನದಯಾಳ್ ಕುಶ್ವಾಹನ ಸಹಕಾರ ಪಡೆದು ಈ ಕೃತ್ಯ ಎಸಗಿದ್ದಾಳೆ.
ಧನ್ನಾ ಲಾಲ್ ಸೈನಿಯನ್ನು ಕೊಲೆ ಮಾಡಿದ ಬಳಿಕ ಶವವನ್ನು ಮುಹಾನಾ ಪೊಲೀಸ್ ಠಾಣೆ ಪ್ರದೇಶದ ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಡಿಸಿಪಿ ದಿಗಂತ್ ಆನಂದ್ ತಿಳಿಸಿದ್ದಾರೆ.
ಗೋಪಾಲಿ ದೇವಿ ಮತ್ತು ಆಕೆಯ ಪ್ರಿಯಕರ ಕುಶ್ಚಾಹನನ್ನು ಕೊಲೆ ಮಾಡಲು ಸಂಚು ರೂಪಿಸಿ ಅದರಂತೆ ಆತನ ಕೊಂದು ಬೇರೆ ಊರಿಗೆ ಪರಾರಿಯಾಗಲು ಮುಂದಾಗಿದ್ದರು. ಅಷ್ಟರಲ್ಲಾಗಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಪ್ರೊಪ್ಪಿಕೊಂಡಿದ್ದಾರೆ.
ಗೋಪಾಲಿ ದೇವಿಗೆ ಕುಶ್ವಾಹ ಎಂಬ ಪರಪುರಷನೊಂದಿಗೆ ಹಲವಾರು ವರ್ಷಗಳಿಂದ ಸಂಬಂಧ ಹೊಂದಿದ್ದಳು. ತಾನು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಪತಿಗೆ ವಂಚಿಸಿ ಈತನನ್ನು ಸಂಪರ್ಕಿಸುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.