ವಿಶಾಖಪಟ್ಟಣಂ, ಫೆ.5- ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿದ ಟೀಮ್ ಇಂಡಿಯಾದ ಯುವ ಜೋಡಿಯಾದ ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ವಿಶೇಷ ದಾಖಲೆ ಸೃಷ್ಟಿಸಿ ದಿಗ್ಗಜರಾದ ಸಚಿನ್- ಸೌರವ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಇಲ್ಲಿನ ಎಸಿಎ- ವಿಸಿಡಿಎ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಈ ದಾಖಲೆ ನಿರ್ಮಾಣವಾಗಿದ್ದು, ಮೊದಲ ಇನಿಂಗ್ಸ್‍ನಲ್ಲಿ ಐಪಿಎಲ್ ತಾರೆ ಯಶಸ್ವಿ ಜೈಸ್ವಾಲ್ 290 ಎಸೆತಗಳಲ್ಲಿ ಚೊಚ್ಚಲ ದ್ವಿಶತಕ (209ರನ್) ಹಾಗೂ ದ್ವಿತೀಯ ಇನಿಂಗ್ಸ್‍ನಲ್ಲಿ ಶುಭಮನ್ ಗಿಲ್ 147 ಎಸೆತಗಳಲ್ಲಿ 104 ರನ್ ಗಳಿಸುವ ಮೂಲಕ ಒಂದೇ ಪಂದ್ಯದಲ್ಲೇ 25 ವರ್ಷದೊಳಗಿನ ಒಂದೇ ತಂಡದ ಆಟಗಾರರು ಶತಕ ಸಿಡಿಸಿದ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ : ವಿಜಯೇಂದ್ರ ಸ್ಪಷ್ಟನೆ
1996ರಲ್ಲಿ ಇಂಗ್ಲೆಂಡ್ ವಿರುದ್ಧ ನ್ಯಾಂಟಿಂಗ್‍ಹ್ಯಾಮ್‍ನಲ್ಲಿ ನಡೆದಿದ್ದ ಪಂದ್ಯದ ಮೊದಲ ಇನಿಂಗ್ಸ್‍ನಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ 23 ವರ್ಷದಲ್ಲಿ ಶತಕ (177 ರನ್) ಬಾರಿಸಿದರೆ, 24ರ ಹರಯದ ಸೌರವ್‍ಗಂಗೂಲಿ (136ರನ್) ಸಿಡಿಸಿ ಒಂದೇ ಪಂದ್ಯದಲ್ಲಿ 25ರ ಒಳಗಿನ ಇಬ್ಬರು ಆಟಗಾರರು ಶತಕ ಸಿಡಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಈಗ ದಾಖಲೆಯನ್ನು ಜೈಸ್ವಾಲ್- ಗಿಲ್ ಜೋಡಿ ಸರಿಗಟ್ಟಿದೆ. ಟೀಮ್ ಇಂಡಿಯಾದ ಯುವ ಆಟಗಾರರಾದ ಗಿಲ್ ಹಾಗೂ ಜೈಸ್ವಾಲ್ ಅವರ ಈ ದಾಖಲೆಯನ್ನು ಕ್ರಿಕೆಟ್ ದಿಗ್ಗಜರು ಶ್ಲಾಘಿಸಿದ್ದಾರೆ.