ಮುಂಬೈ, ಅ.28– ಮರಾಠಿ ಚಿತ್ರರಂಗದ ಯುವ ನಟ ಸಚಿನ್ ಚಂದ್ವಾಡೆ ಆತಹತ್ಯೆ ಮಾಡಿಕೊಂಡಿದ್ದಾರೆ. ಜನಪ್ರಿಯ ಹಿಂದಿಯ ಜಮ್ತಾರಾ 2 ನಲ್ಲಿ ಕಾಣಿಸಿಕೊಂಡಿದ್ದ ಅವರು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪರೋಲಾ ಪ್ರದೇಶದಲ್ಲಿರುವ ಉಂಡಿರ್ಖೇಡಾ ಗ್ರಾಮದಲ್ಲಿರುವ ತಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್‌ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಅವರನ್ನು ಧುಲೆ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ವೇಳೆ ನಿಧನರಾದರು. ಆತಹತ್ಯೆಮುನ್ನ ಚಂದ್ವಾಡೆ ಅವರು ಮುಂಬರುವ ಮರಾಠಿ ಚಿತ್ರ ಅಸುರ್ವಾನ್ ನ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಜಲ್ಗಾಂವ್‌ನ ಪರೋಲಾ ಪೊಲೀಸರು ಆಕಸಿಕ ಸಾವಿನ ಪ್ರಕರಣವನ್ನು ದಾಖಲಿಸಿದರು ಹೆಚ್ಚಿನ ತನಿಖೆಗಾಗಿ ಧುಲೆ ಪೊಲೀಸರಿಗೆ ವರ್ಗಾಯಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.ಕೇವಲ 25 ವರ್ಷದ ಚಂದ್ವಾಡೆ ನಟನೆಯ ಜೊತೆಗೆ, ಚಂದ್ವಾಡೆ ಪುಣೆಯ ಕಂಪನಿಯೊಂದರಲ್ಲಿ ಐಟಿ ವೃತ್ತಿಪರರಾಗಿದ್ದರು ಎಂದು ಹೇಳಿದರು.
