ಚೆನ್ನೈ, ಜ.26– ತಮಿಳು ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಿರುವ ಖ್ಯಾತ ಚಿತ್ರ ನಟ ವಿಜಯ್ ನಟನೆಯ ಕೊನೆ ಚಿತ್ರಕ್ಕೆ ಜನ ನಾಯಗನ್ ಎಂದು ನಾಮಕರಣ ಮಾಡಲಾಗಿದೆ. ವಿಜಯ್ ನಟನೆಯ ಕೊನೆ ಚಿತ್ರವನ್ನು ದಳಪತಿ 69 ಎಂದು ಕರೆಯಲಾಗುತ್ತಿತ್ತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವರ ಕೊನೆ ಚಿತ್ರಕ್ಕೆ ಜನ ನಾಯಗನ್ ಎಂದು ಮರು ನಾಮಕರಣ ಮಾಡಲಾಗಿದೆ.
ಇದರ ಜೊತೆಗೆ ಜನ ಸಮೂಹದ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ವಿಜಯ್ ಅವರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ.ವಿಜಯ್ ಅವರೇ ಎಕ್‌್ಸನಲ್ಲಿ ಈ ರೋಚಕ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ. ಮೊನ್ನೆ ಶುಕ್ರವಾರ, ಚಿತ್ರದ ಅಧಿಕತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪೊಡಕ್ಷನ್‌್ಸನವರು ಸಾಮಾಜಿಕ ಮಾಧ್ಯಮದಲ್ಲಿ ಗಣರಾಜ್ಯೋತ್ಸವದಂದು ಶೀರ್ಷಿಕೆಯನ್ನು ಬಹಿರಂಗಪಡಿಸುವುದಾಗಿ ಘೋಷಿಸಿದ್ದರು.
ಜನ ನಾಯಗನ್ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ, ಅಭಿಮಾನಿಗಳು ಅವರ ಕೊನೆ ಚಿತ್ರವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.ಜನ ನಾಯಕನ ಕಥಾಹಂದರವು ವಿಜಯ್ ಅವರನ್ನು ಪ್ರಜಾಪ್ರಭುತ್ವದ ಜ್ಯೋತಿಧಾರಕ ಎಂದು ಚಿತ್ರಿಸುತ್ತದೆ, ಅವರ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಪ್ರಾರಂಭಿಸುವುದು ಸೇರಿದಂತೆ ಅವರ ಇತ್ತೀಚಿನ ರಾಜಕೀಯ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.