ಬೆಂಗಳೂರು,ಜ.23- ಮಾಜಿ ಸಚಿವ ಬಿ.ಶ್ರೀರಾಮುಲು ಬಿಜೆಪಿ ಬಿಡುವುದಾದರೆ ಬಿಟ್ಟು ಹೋಗಲಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ನನ್ನ ವಿರುದ್ಧ ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುವುದು ಬೇಡ ಎಂದು ಒಂದು ಕಾಲದ ಆತೀಯ ಗೆಳೆಯ ಶಾಸಕ ಗಾಲಿ ಜನಾರ್ಧನ ರೆಡ್ಡಿ ಗುಡುಗಿದ್ದಾರೆ. ಕರ್ಮ ನನ್ನನ್ನು ಸೇರಿದಂತೆ ಯಾರನ್ನೂ ಬಿಡುವುದಿಲ್ಲ. ನಾವು ಮಾಡಿದ ಪಾಪವನ್ನು ಅನುಭವಿಸಿಯೇ ತೀರಬೇಕು. ಶ್ರೀರಾಮುಲುಗೆ ಒಂದು ವೇಳೆ ಬಿಜೆಪಿಯಲ್ಲಿ ಇರಲು ಸಾಧ್ಯವಿಲ್ಲ ಎನ್ನುವುದಾದರೆ ಅವರು ಪಕ್ಷ ಬಿಟ್ಟು ಹೋಗಲು ಸ್ವತಂತ್ರರು. ಸುಮನೆ ನನ್ನ ವಿರುದ್ಧ ಆರೋಪ ಮಾಡಿದರೆ ನಾನು ಮಾತನಾಡಲೇ ಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಮುಲು ಮಾಡಿದ ಆರೋಪಗಳಿಗೆ ಇಂಚಿಂಚು ಪ್ರತ್ಯುತ್ತರ ನೀಡಿದರು. 40 ವರ್ಷದ ಹಿಂದೆ ಶ್ರೀರಾಮುಲು ಅವರು ಏನಾಗಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರನ್ನು ನಾನು ಆನೆಯಂತೆ ಬೆಳೆಸಿದೆ. ಈಗ ನನ್ನ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ನಾನು ಇದೆಲ್ಲವನ್ನೂ ನೋಡಿಯೇ ಬೆಳೆದಿದ್ದೇನೆ ಎಂದು ತಿರುಗೇಟು ನೀಡಿದರು.
ಶ್ರೀರಾಮುಲು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲಿ ಸಚಿವ ಸತೀಶ್ ಜಾರಕಿಹೊಳಿಯನ್ನು ಮೂಲೆಗೆ ತಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಮುಲು ಅವರನ್ನು ಎತ್ತಿಕಟ್ಟುತ್ತಿದ್ದಾರೆ. ಬಿಜೆಪಿ ಸಮುದ್ರವಿದ್ದಂತೆ. ಯಾರೇ ಹೋದರೂ, ಬಂದರೂ ತಡೆದುಕೊಳ್ಳುವ ಶಕ್ತಿ ಇದೆ ಎಂದು ಎಚ್ಚರಿಸಿದರು.
ನಾನೇನು ಆಟವಾಡುವ ಮಗುವಲ್ಲ. ಗೋಲಿ ಆಡುವ ಸಮಯದಲ್ಲೇ ರಾಜಕಾರಣವನ್ನು ನೋಡಿಕೊಂಡು ಬಂದಿದ್ದೇನೆ. ಬಿಜೆಪಿಗೆ ನನ್ನ ಶಕ್ತಿ ಏನೆಂಬುದು ಗೊತ್ತಿದೆ. ನಾನು ಬೆಳೆಸಿದ ಹುಡುಗ ರಾಮುಲು. ಪಕ್ಷಕ್ಕೆ ಅವರಿಂದ ಶಿಫಾರಸು ಮಾಡಿಕೊಂಡು ಬರುವಂತಹ ಅಗತ್ಯ ನನಗಿಲ್ಲ. ಸಂಡೂರು ಉಪಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಕೇಂದ್ರದ ಮಾಜಿ ಸಚಿವ ಸದಾನಂದಗೌಡ ನೇತೃತ್ವದ ಸಮಿತಿಗೆ ಅಭಿಪ್ರಾಯವನ್ನು ತಿಳಿಸಿದ್ದೇನೆ. ಅದನ್ನು ಆರೋಪ ಮಾಡಿದರೆ ನಾನೇನು ಮಾಡಲಿ ರೆಡ್ಡಿ ಪ್ರಶ್ನಿಸಿದರು.
14 ವರ್ಷ ನಾನು ನನ್ನ ತವರು ಜಿಲ್ಲೆ ಬಳ್ಳಾರಿಗೆ ಹೋಗಿರಲಿಲ್ಲ. ಆ ವೇಳೆ ರಾಮುಲು ನನಗೆ ಎಲ್ಲಾ ರೀತಿಯಲ್ಲೂ ದ್ರೋಹ ಮಾಡಿದ್ದಾರೆ. ನಾನು ಹೇಳಿದರೆ ಅದು ನಂಬಲು ಅಸಾಧ್ಯವಾದುದು. ಬಾಯಿ ಬಿಟ್ಟರೆ ತನಿಖಾ ಏಜೆನ್ಸಿಗಳು ತನಿಖೆ ಮಾಡಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ಇದನ್ನು ಹೇಳುತ್ತೇನೆಂದು ಕುತೂಹಲ ಕೆರಳಿಸಿದರು. ಶ್ರೀರಾಮುಲು ಮೇಲೆ ಒಂದು ಕೊಲೆ ಮಾಡಿದ ಆರೋಪ ಇತ್ತು. ನಾನು ಒಂದು ಮರ್ಡರ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇದೆಲ್ಲಾ ಬೇಡ ಎಂದು ನಾನು ಅವನನ್ನ ಬೆಳಿಸಿದ್ದೆ. ಅವರ ಕುಟುಂಬವನ್ನು ರಕ್ಷಣೆ ಮಾಡಿದೆ. ಅವರನ್ನು ರಕ್ಷಣೆ ಮಾಡಿದ್ದಕ್ಕೆ ನಾನು ಈಗ ಅನುಭವಿಸುತ್ತಿದ್ದೇನೆ ಎಂದರು.
ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ಮಾಡಿದ್ದರು. ಆದರೆ ಬಿಜೆಪಿಯಲ್ಲಿ ಟಿಕೆಟ್ ನೀಡಲಾಯಿತು. ರಾಮುಲು ಅವರ ಮಾವನನ್ನ ರೈಲ್ವೇ ಬಾಬು ಅವರನ್ನು ಕೊಲೆ ಮಾಡಲಾಗಿತ್ತು. 1991ರಲ್ಲಿ ಆದ ಭೀಕರ ಕೊಲೆ ಅದು. ರಾಮುಲು ಇಂದು ಮಾತನ್ನಾಡಿದ್ದಕ್ಕೆ ಸಾಕಷ್ಟು ಕಾರಣಗಳಿವೆೆ. ಅಂದು ರಾಮುಲು ಅವರು ಚಾಕು, ಬೆನ್ನಿಗೆ ಲಾಂಗು ಹಿಡಿದುಕೊಂಡು ಬಂದಿದ್ದರು. ಅಂದು ರಾಮುಲು ಅವರನ್ನು ನಾವು ಉಳಿಸಿಕೊಳ್ಳಬೇಕಾಗಿತ್ತು. ನಾನು ಉಳಿಸಿಕೊಂಡೇ. ನಮ ತಾಯಿ ಕಾಪಾಡು ಅವನನ್ನು ಎಂದರು. ಅಂದು ನಾನು ಅವರ ಜೊತೆಗೆ ನಿಂತೆ ಎಂದು ಹೇಳಿದರು.
2004ರಲ್ಲಿ ಕಾರ್ಪೊರೇಟರ್ ಕೊಲೆ ಆಗಿತ್ತು. ಅಂದು ಮೊದಲ ಬಾರಿಗೆ ಶ್ರೀರಾಮುಲು ಶಾಸಕರಾದರು. ಕೊಲೆ ಆರೋಪ ರಾಮುಲು ಮೇಲೆ ಬಂದಿತ್ತು. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿದ್ದ ಅಂದು ನಾನು ಸುದ್ದಿಗೋಷ್ಠಿ ನಡೆಸಿದ್ದೆ. ದಿವಾಕರ್ ರೆಡ್ಡಿ ಹಾಗೂ ಸೂರ್ಯನಾರಾಯಣ ರೆಡ್ಡಿ ಕೊಲೆ ಮಾಡಿಸಿದ್ದು. ಆ ಕೊಲೆ ಮಾಡಿಸಿದ್ದು ದಿವಾಕರ್ ರೆಡ್ಡಿ. ಅದಕ್ಕೆ ಸೂರ್ಯನಾರಾಯಣ ರೆಡ್ಡಿ ಫೈನಾನ್ಸ್ ಮಾಡಿದ್ದು ಶ್ರೀರಾಮುಲು ಅವರ ಮಾವನ ಮರ್ಡರ್‌ಗೆ. ಅಂದು ರಾಮುಲು ನನ್ನತ್ತ ಓಡೋಡಿ ಬಂದ. ನಾನು ಅಂದು ಸನಾರ್ಗದಲ್ಲಿ ನಡೆಸಿದ್ದೇ ಇಂದು ತಪ್ಪಾಯ್ತು ಎಂದು ಹೇಳಿದರು.
ದಿವಾಕರ್ ಬಾಬು 1999ರಲ್ಲಿ ಕಾರ್ಪೋರೇಷನ್ ಟಿಕೆಟ್ ಪಡೆದಿದ್ದರು. ಅಂದು ನಾನು ಕಾಂಗ್ರೆಸ್‌ನಲ್ಲಿ ರಾಮುಲು ಟಿಕೆಟ್ ಪಡೆದುಕೊಳ್ಳಲು ಮುಂದಾಗಿದ್ದ. ನಾನು ಅಂದು ರಾಮುಲುನನ್ನು ಯಡಿಯೂರಪ್ಪರ ಬಳಿ ಕರೆದುಕೊಂಡು ಬಂದೆ. ಅವರ ಮನೆಗೆ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸಿದೆ. ಬಳಿಕ 2004ರಲ್ಲಿ ಮೊದಲ ಬಾರಿಗೆ ಶ್ರೀರಾಮುಲ ಶಾಸಕರಾದರು. 2006ರಲ್ಲಿ ಮೊದಲ ಬಾರಿಗೆ ಮಂತ್ರಿ ಆಗುವುದಕ್ಕೆ ನನಗೆ ಆಹ್ವಾನ ಬಂತು. ಯಡಿಯೂರಪ್ಪ ನೀನು ಮಂತ್ರಿ ಆಗು ಅಂದರು. ನಾನು ನನಗೆ ಮಂತ್ರಿ ಬೇಡ. ರಾಮುಲು ಅವರಿಗೆ ಮಂತ್ರಿ ಮಾಡಿ ಎಂದೆ. ಅದೇ ನಾನು ಮಾಡಿದ ತಪ್ಪು ಎಂದರು.