Saturday, October 19, 2024
Homeರಾಜ್ಯಕಾಂಗ್ರೆಸ್‌‍ ಭದ್ರಕೋಟೆ ಸಂಡೂರಲ್ಲಿ ಜನಾರ್ದನ ರೆಡ್ಡಿ "ಗೃಹ ಪ್ರವೇಶ", ಬಿಜೆಪಿ ರಣತಂತ್ರ

ಕಾಂಗ್ರೆಸ್‌‍ ಭದ್ರಕೋಟೆ ಸಂಡೂರಲ್ಲಿ ಜನಾರ್ದನ ರೆಡ್ಡಿ “ಗೃಹ ಪ್ರವೇಶ”, ಬಿಜೆಪಿ ರಣತಂತ್ರ

Janardhana Reddy Role In Sandur By Election

ಬಳ್ಳಾರಿ,ಅ.19- ಕಾಂಗ್ರೆಸ್‌‍ ಭದ್ರಕೋಟೆಯಾಗಿರುವ ಸಂಡೂರಲ್ಲಿ ಈ ಬಾರಿ ಕಮಲ ಅರಳಿಸಲು ಬಿಜೆಪಿ ನಾಯಕರು ರಣತಂತ್ರ ಹೆಣೆದಿದ್ದಾರೆ. ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲು ಸಂಡೂರಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ತಾತ್ಕಾಲಿಕವಾಗಿ ಮನೆ ಮಾಡಿದ್ದು ಗೃಹ ಪ್ರವೇಶ ಕೂಡ ನಡೆದಿದೆ.

ಕಾಂಗ್ರೆಸ್ಸಿನಿಂದ ಶಾಸಕರಾಗಿದ್ದ ಈ.ತುಕಾರಾಂ ರಾಜೀನಾಮೆ ನೀಡಿ ಈಗ ಸಂಸದರಾಗಿದ್ದಾರೆ ಹಾಗಾಗಿ ತೆರವಾದ ಸಂಡೂರು ವಿಧಾಸನಭಾ ಕ್ಷೇತ್ರದ ಉಪಚುನಾವಣೆಗೆ ನಡೆಯುತ್ತಿದ್ದು ನ. 13ರಂದು ಮತದಾನ ನಡೆಯಲಿದೆ.

ಎನ್‌ಡಿಎ ಮೈತ್ರಿ ಮತ್ತು ಕಾಂಗ್ರೆಸ್‌‍ ಮಧ್ಯ ನೇರ ಸ್ಪರ್ಧೆೆ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆದಿದೆ.ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶದ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿದ ನಂತರ ಜಿಲ್ಲೆಯಲ್ಲಿ ಹೊಸ ಅಲೆ ಸೃಷ್ಠಿಯಾಗಿದೆ.

ರೆಡ್ಡಿ ಅವರಿಗೆ ಈಗಲೂ ಬೆಂಬಲಿಗರಿದ್ದುಅವರ ಜನಪ್ರಿಯತೆಯ ಮೇಲೆ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಬಿಜೆಪಿ ಭರವಸೆಯಿರಿಸಿದೆ. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಂಡೂರಿನಲ್ಲಿ ಮನೆ ಮಾಡಿದ್ದಾರೆ.

ಸಂಡೂರು ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮತ್ತು ಬಳ್ಳಾರಿಯಲ್ಲಿ ಬಲವಾದ ಹಿಡಿತವನ್ನು ಉಳಿಸಿಕೊಳ್ಳುವತ್ತ ಗಮನಹರಿಸಿರುವ ರೆಡ್ಡಿ ಇತ್ತೀಚೆಗೆ ಪಕ್ಷದ ಕಾರ್ಯಕರ್ತರಿಗೆ ಉಪಚುನಾವಣೆ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸುವುದಾಗಿ ಭರವಸೆ ನೀಡಿದರು.ಆದರೆ, ಮತದಾನದ ನಂತರ ಮನೆಗೆ ಶಾಶ್ವತವಾಗಿ ಬೀಗ ಹಾಕಿ ಮುಚ್ಚುತ್ತಾರೆ ಎಂದು ಕಾಂಗ್ರೆಸ್‌‍ ನಾಯಕರು ವ್ಯಂಗ್ಯವಾಡಿದ್ದಾರೆ.

RELATED ARTICLES

Latest News