ಟೋಕಿಯೋ, ಅ.4- ಜಪಾನ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನಿ ಆಯ್ಕೆಯಾಗುವ ಸಾಧ್ಯತೆಗಳಿವೆ.ಜಪಾನ್‌ನ ಆಡಳಿತ ಪಕ್ಷವು ಸನೇ ತಕೈಚಿ ಅವರನ್ನು ಹೊಸ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಅವರೇ ಜಪಾನ್ ಪ್ರಧಾನಿ ಪಟ್ಟ ಏರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜಪಾನ್‌ನ ಮಾಜಿ ಆರ್ಥಿಕ ಭದ್ರತಾ ಸಚಿವೆಯಾಗಿದ್ದ ಸನೇ ತಕೈಚಿ ಅವರನ್ನು ಹೊಸ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಲ್ಲಿನ ಆಡಳಿತ ಪಕ್ಷ ತಿಳಿಸಿದೆ.
ಇದರಿಂದಾಗಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗುವ ಸಾಧ್ಯತೆಯಿದೆ.
ಲಿಬರಲ್ ಡೆಮಾಕ್ರಟಿಕ್ ಪಕ್ಷದ ಆಂತರಿಕ ಮತದಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯಿಜುಮಿ ಅವರ ಪುತ್ರ ಕೃಷಿ ಸಚಿವ ಶಿಂಜಿರೊ ಕೊಯಿಜುಮಿ ಅವರನ್ನು ತಕೈಚಿ ಸೋಲಿಸಿದ್ದರು.