Sunday, January 5, 2025
Homeಕ್ರೀಡಾ ಸುದ್ದಿ | Sportsವಿಶ್ವದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಬೂಮ್ರಾ

ವಿಶ್ವದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಬೂಮ್ರಾ

Jasprit Bumrah Breaks to Record

ಬೆಂಗಳೂರು, ಜ.2– ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯವು ನಾಳೆಯಿಂದ ಸಿಡ್ನಿಯಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ವಿಶ್ವದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಇದುವರೆಗೂ ನಡೆದಿರುವ 4 ಟೆಸ್ಟ್ ಪಂದ್ಯಗಳಲ್ಲೂ ಕಾಂಗರೂ ನಾಡಿನ ಬ್ಯಾಟರ್ ಗಳ ರನ್ ದಾಹಕ್ಕೆ ಲಗಾಮು ಹಾಕಿರುವ ಬೂಮ್ರಾ ಒಟ್ಟು 30 ವಿಕೆಟ್ ಪಡೆದಿದ್ದು, ಇನ್ನೂ 6 ವಿಕೆಟ್ ಪಡೆದರೆ ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ಬೌಲರ್ ಆಗಿ ಗುರುತಿಸಿಕೊಂಡು ದಿಗ್ಗಜರಾದ ಬಿ.ಎಸ್.ಚಂದ್ರಶೇಖರ್, ಕಪಿಲ್ ದೇವ್ ಅವರ ದಾಖಲೆ ಮುರಿಯಲಿದ್ದಾರೆ.

ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಗಳು:
35 ವಿಕೆಟ್- ಬಿ.ಎಸ್.ಚಂದ್ರಶೇಖರ್ – 1972-73- ಇಂಗ್ಲೆಂಡ್ ವಿರುದ್ಧ – 5 ಪಂದ್ಯ
34 ವಿಕೆಟ್- ವಿನೂ ಮಂಕಡ್ – 1951-52- ಇಂಗ್ಲೆಂಡ್ ವಿರುದ್ಧ – 5 ಪಂದ್ಯ
34 ವಿಕೆಟ್ – ಸುಭಾಷ್ ಗುಪ್ತೆ – 1955-56- ನ್ಯೂಜಿಲೆಂಡ್ ವಿರುದ್ಧ – 5 ಪಂದ್ಯ
32 ವಿಕೆಟ್- ಕಪಿಲ್ ದೇವ್ – 1979-80- ಪಾಕಿಸ್ತಾನ ವಿರುದ್ಧ – 6 ಪಂದ್ಯ
32 ವಿಕೆಟ್- ಹರ್ಭಜನ್ ಸಿಂಗ್ – 2000-01- ಆಸ್ಟ್ರೇಲಿಯಾ ವಿರುದ್ಧ – 3 ಪಂದ್ಯ
32 ವಿಕೆಟ್ -ರವಿಚಂದ್ರನ್ ಅಶ್ವಿನ್ – 2020-21- ಇಂಗ್ಲೆಂಡ್ ವಿರುದ್ಧ – 4 ಪಂದ್ಯ
31 ವಿಕೆಟ್ – ಬಿಶನ್ ಸಿಂಗ್ ಬೇಡಿ – 1977-78ರಲ್ಲಿ ಆಸ್ಟ್ರೇಲಿಯಾ ವಿರುದ್ಧ – 5 ಪಂದ್ಯ

31 ವಿಕೆಟ್- ರವಿಚಂದ್ರನ್ ಅಶ್ವಿನ್ – 2015-16- ದಕ್ಷಿಣ ಆಫ್ರಿಕಾ ವಿರುದ್ಧ- 4 ಪಂದ್ಯ
30 ವಿಕೆಟ್- ಜಸ್ಪ್ರೀತ್ ಬುಮ್ರಾ – 2024-25- ಆಸ್ಟ್ರೇಲಿಯಾ ವಿರುದ್ಧ – 4 ಪಂದ್ಯ.
ಐದು ಪಂದ್ಯಗಳ ಟೆಸ್ಟ್ ಸರಣಿಯ 4ನೇ ಪಂದ್ಯದ ಅಂತ್ಯಕ್ಕೆ ಭಾರತ 1-2 ಹಿನ್ನೆಡೆ ಅನುಭವಿಸಿದ್ದು ಸರಣಿ ಸಮಬಲಗೊಳಿಸುವಲ್ಲಿ ಬೂಮ್ರಾ ಪಾತ್ರ ವಹಿಸುವ ಅವಶ್ಯಕತೆ ಇದೆ.

RELATED ARTICLES

Latest News