Wednesday, January 1, 2025
Homeಕ್ರೀಡಾ ಸುದ್ದಿ | Sportsಕಪಿಲ್ ದೇವ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಬೂಮ್ರಾ

ಕಪಿಲ್ ದೇವ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಬೂಮ್ರಾ

Jasprit Bumrah Creates History In Australia, Breaks Kapil Dev's Record

ಮೆಲ್ಬೋರ್ನ್, ಡಿ. 29– ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಎರಡನ್ನೂ ಇನಿಂಗ್ಸ್ ನಲ್ಲೂ ಙ ಭರ್ಜರಿ ಬೇಟೆಯಾಡುವ ಮೂಲಕ ಭಾರತ ತಂಡದ ಪರ ಇತಿಹಾಸ ಸೃಷ್ಟಿಸಿದ್ದಾರೆ.

ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ತಮ 50ನೇ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದ ಪಂದ್ಯದಲ್ಲಿ ಅತಿ ವೇಗವಾಗಿ 200 ಟೆಸ್ಟ್ ವಿಕೆಟ್ ಪಡೆದ ಭಾರತದ ವೇಗದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಜಸ್ ಪ್ರೀತ್ ಬೂಮ್ರಾ 44 ಪಂದ್ಯಗಳಲ್ಲೇ 200 ವಿಕೆಟ್ ಪಡೆಯುವ ಮೂಲಕ ಅಳಿಸಿಹಾಕಿದ್ದಾರೆ.

ಟೀಮ್ ಇಂಡಿಯಾ ಪರ ಶರವೇಗದಲ್ಲಿ 200 ವಿಕೆಟ್ ಪಡೆದ ಸಾಧನೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಸ್ಪಿನ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಹೆಸರಿನಲ್ಲಿದೆ.

ಭಾರತ ತಂಡದ ಪರ ಅತಿ ವೇಗದ 200 ಟೆಸ್ಟ್ ವಿಕೆಟ್:

  • ರವಿಚಂದ್ರನ್ ಅಶ್ವಿನ್- 37 ಪಂದ್ಯ- ಸೆಪ್ಟೆಂಬರ್ 2016
  • ರವೀಂದ್ರ ಜಡೇಜಾ- 44 ಪಂದ್ಯ- ಅಕ್ಟೋಬರ್ 2019
  • ಜಸ್ ಪ್ರೀತ್ ಬೂಮ್ರಾ- 44 ಪಂದ್ಯ- ಡಿಸೆಂಬರ್ 2024
  • ಹರ್ಭಜನ್ ಸಿಂಗ್- 46 ಪಂದ್ಯ- ಸೆಪ್ಟೆಂಬರ್ 2005
  • ಅನಿಲ್ ಕುಂಬ್ಳೆ- 47 ಪಂದ್ಯ- ಅಕ್ಟೋಬರ್ 1998.
    ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ವೇಗಿಗಳು:
  • 7725 ಎಸೆತ- ವಖಾರ್ ಯೂನಿಸ್- ಪಾಕಿಸ್ತಾನ
  • 7848 ಎಸೆತ- ಡೇಲ್ ಸ್ಟೇಯ್ನ್ – ದಕ್ಷಿಣ ಆಫ್ರಿಕಾ
  • 8153 ಎಸೆತ- ಕಗಿಸೊ ರಬಾಡಾ- ದಕ್ಷಿಣ ಆಫ್ರಿಕಾ
    *8484 ಎಸೆತ- ಜಸ್ ಪ್ರೀತ್ ಬೂಮ್ರಾ- ಭಾರತ.

ಜಸ್ ಪ್ರೀತ್ ಬೂಮ್ರಾ ಕೇವಲ 19.56 ಸರಾಸರಿಯಲ್ಲೇ 200 ವಿಕೆಟ್ ಪಡೆದಿರುವ ದಾಖಲೆ ಹೊಂದಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ದ್ವಿಪಕ್ಷೀಯ ಸರಣಿಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎಂಬ ದಾಖಲೆ ನಿರ್ಮಿಸಿ, ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ.

RELATED ARTICLES

Latest News