ವಾಷಿಂಗ್ಟನ್,ಮೇ 9- ಪಹಲ್ಗಾಮ್ ಉಗ್ರ ದಾಳಿ ಬಳಿಕ ಉಲ್ಬಣವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ವಿಚಾರವಾಗಿ ಕಡ್ಡಿಮುರಿದಂತೆ ಉತ್ತರ ನೀಡಿರುವ ಅಮೆರಿಕ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ , ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಮಗೆ ಸಂಬಂಧವಿಲ್ಲ. ಆದರೂ ನಾನು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.
ಸ್ವಲ್ಪ ಮಟ್ಟಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುವುದನ್ನು ನಾವು ಮಾಡಬಹುದಾಗಿದೆ. ಆದರೆ ನಾವು ಯುದ್ಧದ ಮಧ್ಯದಲ್ಲಿ ಭಾಗಿಯಾಗುವುದಿಲ್ಲ, ಅದು ಮೂಲಭೂತವಾಗಿ ನಮ ವಿಷಯವಲ್ಲ. ನಮಗೆ ಸಂಬಂಧಿಸಿದ್ದಲ್ಲ ಮತ್ತು ಅಮೆರಿಕದ ನಿಯಂತ್ರಣ ಸಾಮರ್ಥ್ಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ.
ಇದೇ ವೇಳೆ ಅಮೆರಿಕವು ಭಾರತೀಯರಿಗೆ ಶಸಾ್ತ್ರಸ್ತ್ರಗಳನ್ನು ತ್ಯಜಿಸಲು ಹೇಳಲು ಸಾಧ್ಯವಿಲ್ಲ. ಪಾಕಿಸ್ತಾನಿಗಳಿಗೆ ಶಸಾ್ತ್ರಸ್ತ್ರಗಳನ್ನು ತ್ಯಜಿಸಲು ನಾವು ಹೇಳಲು ಸಾಧ್ಯವಿಲ್ಲ. ಆದ್ದರಿಂದ, ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತ್ರ ಈ ವಿಷಯವನ್ನು ಮುಂದುವರಿಸುತ್ತೇವೆ ಎಂದು ವ್ಯ್ಸ್‌ಾ ಫ್ಸ್‌ಾ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಅಂತೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ವಿಶಾಲವಾದ ಪ್ರಾದೇಶಿಕ ಯುದ್ಧ ಎಂದು ಹೇಳಿದ ವ್ಯ್ಸ್‌ಾ, ಇದು ಪರಮಾಣು ಸಂಘರ್ಷವಾಗಿ ಬದಲಾಗಬಾರದು ಎಂಬುದು ನಮ ಆಶಯ ಮತ್ತು ನಿರೀಕ್ಷೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಸದ್ಯಕ್ಕೆ, ಅದು ಸಂಭವಿಸುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.
ಯುದ್ಧ ನಿಲ್ಲಿಸಲು ಸಿದ್ಧ ಎಂದಿದ್ದ ಟ್ರಂಪ್: ಈ ಮೊದಲು ಉಗ್ರರ ವಿರುದ್ಧದ ಭಾರತದ ಕಾರ್ಯಾಚರಣೆಯನ್ನು ಮುಯ್ಯಿಗೆ ಮುಯ್ಯಿ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತ ಮತ್ತು ಪಾಕಿಸ್ಥಾನ ನಡುವಿನ ಉದ್ವಿಗ್ನ ಸ್ಥಿತಿಯನ್ನು ನಿಲ್ಲಿಸಲು ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಪ್ರತೀಕಾರದ ದಾಳಿಗಳನ್ನು ನಿಲ್ಲಿಸಿ.
ನಿಮಗೇನಾದರೂ ಸಹಾಯ ಬೇಕಿದ್ದರೆ ನಾನಿದ್ದೇನೆ. ಭಾರತ ಮತ್ತು ಪಾಕಿಸ್ಥಾನ ಜತೆ ಉತ್ತಮ ಸಂಬಂಧವಿದೆ. ಅವರೆಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ನಿಲ್ಲುವುದನ್ನು ನಾನು ನೋಡಲು ಬಯಸುತ್ತೇನೆ. ಇದಕ್ಕಾಗಿ ನಾನು ಸಹಾಯ ಮಾಡಲು ಸಾಧ್ಯವಾದರೆ, ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಭಾರತ ಮತ್ತು ಪಾಕಿಸ್ಥಾನ ನಡುವಿನ ಯುದ್ಧದ ಕುರಿತ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ.