ಬೆಂಗಳೂರು,ಜು.28- ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಲೇ ಬಂದಿರುವ ರಾಜ್ಯ ಕಾಂಗ್ರೆಸ್ ಪಕ್ಷ ಮತ್ತೆ ದಲಿತರ ಬೆನ್ನಿಗೆ ಚೂರಿ ಹಾಕಿದೆ ಎಂದು ಜೆಡಿಎಸ್ ಆರೋಪಿಸಿದೆ. ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಮಜಾವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಸಮುದಾಯಕ್ಕೆ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು ಎಂದು ಟೀಕಿಸಿದೆ.
ದಲಿತ ವಿರೋಧಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನಲ್ಲಿ ಎಸ್ ಸಿ ಎಸ್ ಪಿ/ ಟಿಎಸ್ ಪಿ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದ 42,017.51 ಕೋಟಿ ರೂ.ನಲ್ಲಿ 11,896.84 ಕೋಟಿ ರೂ.ವನ್ನು ಗ್ಯಾರಂಟಿ ಯೋಜನೆಗೆ ಹಂಚಿಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಪರಿಶಿಷ್ಟರ ಎಸ್ ಸಿ ಎಸ್ ಪಿ/ ಟಿಎಸ್ ಪಿ ಹಣಕ್ಕೆ ಕನ್ನ ಹಾಕಿದ ಸಿದ್ದರಾಮಯ್ಯ ಎಂದು ಆಪಾದಿಸಿರುವ ಜೆಡಿಎಸ್, 2025-26ನೇ ಸಾಲಿನಲ್ಲಿ 11,896.84 ಕೋಟಿ ರೂ., 2024-25ನೇ ಸಾಲಿನಲ್ಲಿ 14.282.38 ಕೋಟಿ ರೂ., 2023-24ನೇ ಸಾಲಿನಲ್ಲಿ 11,114 ಕೋಟಿ ರೂ.ಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ಸಾವಿರಾರು ಕೋಟಿ ಹಣವನ್ನ ಅವೈಜ್ಞಾನಿಕ ಗ್ಯಾರಂಟಿಗಳಿಗೆ ದುರುಪಯೋಗ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಮತ್ತೊಮೆ ದಲಿತರಿಗೆ ದ್ರೋಹ ಮಾಡುತ್ತಿದೆ ಎಂದು ಹೇಳಿದೆ.
- BREKING : ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಇಲ್ಲಿದೆ ಪುರಸ್ಕೃತರ ಪಟ್ಟಿ
- ಡೇಟಿಂಗ್ ಚೀಟಿಂಗ್ : ಮಹಿಳೆಯ ಅಂದಕ್ಕೆ ಮರುಳಾಗಿ 32 ಲಕ್ಷ ರೂ. ಹಣ ಕಳೆದುಕೊಂಡ ವೃದ್ಧ..!
- ಆನ್ಲೈನ್ ಚಟಕ್ಕೆ ಬಿದ್ದು ಅನ್ನ ಹಾಕಿದ ಮನೆಗೆ ಖನ್ನ ಹಾಕಿದ ಮನೆಗೆಲಸದಾಕೆ
- ಡಿಸಿಎಂ ಡಿ.ಕೆ. ಶಿವಕುಮಾರ್ ಕನಸಿನ ಸುರಂಗ ಮಾರ್ಗ ಯೋಜನೆಗೆ ಎದುರಾಯ್ತು ವಿಘ್ನ
- ಡಾಲರ್ ಎದುರು 21 ಪೈಸೆ ಕುಸಿತ ಕಂಡ ರೂಪಾಯಿ
