Friday, March 7, 2025
Homeಬೆಂಗಳೂರುಜನರಿಗೆ ಗ್ಯಾರಂಟಿ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದು ಬೆಲೆ ಏರಿಕೆ ಕಾಯಕ ಮಾಡುತ್ತಿದೆ ಕಾಂಗ್ರೆಸ್ :...

ಜನರಿಗೆ ಗ್ಯಾರಂಟಿ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದು ಬೆಲೆ ಏರಿಕೆ ಕಾಯಕ ಮಾಡುತ್ತಿದೆ ಕಾಂಗ್ರೆಸ್ : ಜೆಡಿಎಸ್

JDS Attack on Congress Govt Guarantees

ಬೆಂಗಳೂರು, ಮಾ.5– ಗ್ಯಾರಂಟಿ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಆಡಳಿತ ನಡೆಸಲು ಹಣವಿಲ್ಲದೆ ಬೆಲೆ ಏರಿಕೆಯನ್ನೇ ಖಾಯಂ ಕೆಲಸ ಮಾಡಿಕೊಂಡಿದೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ವಿದ್ಯುತ್ ದರ ಏರಿಕೆ ಶಾಕ್‌ ಗೆ ಮೊದಲೇ ವಿದ್ಯುತ್ ಸ್ಮಾರ್ಟ್ ಮೀಟ‌ರ್ ದರವನ್ನು ಶೇ.400 ರಿಂದ ಶೇ.800ರಷ್ಟು ಹೆಚ್ಚಿಸಿ ರಾಜ್ಯದ ಜನರಿಗೆ ಹೈವೋಲ್ವೇಜ್ ಶಾಕ್ ನೀಡಿದೆ ಎಂದು ಟೀಕಿಸಿದೆ.

980 ರೂ. ಇದ್ದ ಸಾಮಾನ್ಯ ಮೀಟರ್ ಇದೀಗ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ ಜಿಎಸ್ಟಿ 4,998 ರೂ. 2450 ರೂ.ಗೆ ಸಿಗುತ್ತಿದ್ದ ಎಸ್ಪಿ-2 ಮೀಟರ್ ಇದೀಗ ಸ್ಟಾರ್ಟ್ ಮೀಟರ್ ರೂಪದಲ್ಲಿ 8,880 ರೂ. ಆಗಿದೆ.

3,450 ರೂ.ಇದ್ದ ಎಸ್ಪಿ-3 (3ಫೇಸ್) ಮೀಟರ್‌ಗೆ 28,080 ರೂ. ಆಗಿದೆ ಎಂದು ಹೇಳಿದೆ.
ಸಾಮಾನ್ಯ ಮೀಟರ್‌ಗಿಂತ ಹೊಸ ಸ್ಟಾರ್ಟ್ ಮೀಟರ್ ದುಬಾರಿಯಾಗಿದ್ದು, ಸರ್ಕಾರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಹೊಸ ಶಾಕ್ ಕೊಟ್ಟಿದೆ. ಬೆಲೆಗಳನ್ನು ಹೆಚ್ಚಿಸಿ ರಾಜ್ಯದ ಜನರಿಗೆ ಈ ಪರಿ ಶೋಷಣೆ ಮಾಡುತ್ತಿರುವುದು ಜನ ವಿರೋಧಿ ಆಡಳಿತ ಎಂದು ಜೆಡಿಎಸ್ ಆರೋಪಿಸಿದೆ.

RELATED ARTICLES

Latest News