Thursday, April 3, 2025
Homeರಾಜಕೀಯ | Politics'ಕಲೆಕ್ಷನ್ ಅಧ್ಯಕ್ಷ'ನ ಪರ್ಸೆಂಟೇಜ್ ಪುರಾಣ ಎಂದು ಕಾಲೆಳೆದ ಜೆಡಿಎಸ್

‘ಕಲೆಕ್ಷನ್ ಅಧ್ಯಕ್ಷ’ನ ಪರ್ಸೆಂಟೇಜ್ ಪುರಾಣ ಎಂದು ಕಾಲೆಳೆದ ಜೆಡಿಎಸ್

Collection President's Percentage Story

ಬೆಂಗಳೂರು,ಅ.8– ನಗರದಲ್ಲಿ 15 ದಿನಗಳ ಕಾಲ ತೇಪೆ ಹಚ್ಚಿದ ರಸ್ತೆ ಗುಂಡಿಗಳು ಒಂದೇ ರಾತ್ರಿ ಸುರಿದ ಮಳೆಗೆ ಕೊಚ್ಚಿ ಹೋಗಿವೆ ಎಂದು ಜೆಡಿಎಸ್ ಆರೋಪಿಸಿದೆ. ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಮೇಯುತ್ತಿರುವ ಕಲೆಕ್ಷನ್ ಗಿರಾಕಿಯ ಪರ್ಸಂಟೇಜ್ ಅವ್ಯವಹಾರಕ್ಕೆ ಮತ್ತು ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ ! ಎಂದು ವ್ಯಂಗ್ಯವಾಡಿದೆ.

ಕಿತ್ತುಹೋಗಿರುವ ರಸ್ತೆ ಗುಂಡಿಗಳನ್ನು ವೀಕ್ಷಿಸಲು ಗುಂಡು ಹಾಕಿ ಸಿಟಿ ನೈಟ್ ರೌಂಡ್ಸ್ ಯಾವಾಗ ಮಾಡ್ತೀರಾ? ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದೆ. ಪರ್ಸೆಂಟೇಜ್ ಗಿರಾಕಿ ಎಂದು ಸ್ವತಃ ಕಾಂಗ್ರೆಸ್ ವಕ್ತಾರರೇ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೋಲ್ ಕಾಲ್ ಪುರಾಣ ಬಿಚ್ಚಿಟ್ಟಿದ್ದಾರೆ. ಕಲೆಕ್ಷನ್ ಅಧ್ಯಕ್ಷನ ಪರ್ಸೆಂಟೇಜ್ ಪುರಾಣ ಎಂದು ಜೆಡಿಎಸ್ ಲೇವಡಿ ಮಾಡಿದೆ.

RELATED ARTICLES

Latest News