ಬೆಂಗಳೂರು,ಡಿ.24- ಬಾಂಬ್ ಹಾಕುತ್ತೇನೆಂದು ಬೆದರಿಕೆ ಹಾಕಿರುವ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಜೆಡಿಎಸ್ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಆಗ್ರಹಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಸದಾ ಸಮಾಜದಲ್ಲಿ ಶಾಂತಿ ಸಾಮರಸ್ಯ ಕದಡುವ ಪ್ರಚೋದನಕಾರಿ ಹೇಳಿಕೆ ನೀಡುವ ಶಾಸಕ ಶಿವಲಿಂಗೇಗೌಡ ಅವರು ಕೆಲ ದಿನಗಳ ಹಿಂದಷ್ಟೆ ರಾಜ್ಯದಲ್ಲಿ ರಕ್ತ ಕ್ರಾಂತಿ ಮಾಡುತ್ತೇವೆ ಎಂಬ ಉಗ್ರ ಭಾಷಣ ಮಾಡಿದ್ದರು ಎಂದು ಆರೋಪಿಸಿದೆ.
ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರೇ ನೀವೇನೂ ಜನಪ್ರತಿನಿಧಿಯೋ ? ಭಯೋತ್ಪಾದಕನೋ? ಎಂದು ಪ್ರಶ್ನಿಸಿದೆ. ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಭೂಮಿ ಕೊಡದಿದ್ದರೆ ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿರುವ ಶಿವಲಿಂಗೇಗೌಡ ಅವರೇ ನೀವು ಯಾವ ಉಗ್ರಸಂಘಟನೆಯ ಸದಸ್ಯ? ಎಂದು ಪ್ರಶ್ನೆ ಮಾಡಿದೆ.