Friday, November 22, 2024
Homeರಾಜಕೀಯ | Politicsಗ್ಯಾರಂಟಿ ಸರ್ಕಾರ ಅಧಿಕಾರಕ್ಕೆ ವರ್ಷ ಕಳೆದರೂ ಎತ್ತಿನಹೊಳೆ ಯೋಜನೆ ಇನ್ನೂ ಅತಂತ್ರ : ಜೆಡಿಎಸ್‌‍

ಗ್ಯಾರಂಟಿ ಸರ್ಕಾರ ಅಧಿಕಾರಕ್ಕೆ ವರ್ಷ ಕಳೆದರೂ ಎತ್ತಿನಹೊಳೆ ಯೋಜನೆ ಇನ್ನೂ ಅತಂತ್ರ : ಜೆಡಿಎಸ್‌‍

ಬೆಂಗಳೂರು, ಮಾ 21- ರಾಜ್ಯ ಕಾಂಗ್ರೆಸ್‌‍ ಸರ್ಕಾರಕ್ಕೆ ಒಂದು ವರ್ಷ ತುಂಬಿದರೂ ಎತ್ತಿನಹೊಳೆ ಯೋಜನೆ ಇನ್ನೂ ತೆವಳುತ್ತಲೇ ಇದೆ ಎಂದು ಜೆಡಿಎಸ್‌‍ ಆರೋಪಿಸಿದೆ. ಕಳೆದ 2014ರ ಮಾರ್ಚ್‌ 3 ರಂದು ಚಿಕ್ಕಬಳ್ಳಾಪುರದಲ್ಲಿ ಅಂದಿನ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಡಿಗಲ್ಲು ಭಾಗ್ಯ ಕಂಡ ಈ ಯೋಜನೆ ಇವತ್ತು ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎನ್ನುವಂತಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಟೀಕಿಸಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಜಲ ಸಂಪನೂಲಕ್ಕಿಂತ ಬೆಂಗಳೂರು ನಗರಾಭಿವೃದ್ಧಿ ಮೇಲೆಯೇ ಆಸಕ್ತಿ ಜಾಸ್ತಿ. ಒಮೆಯಷ್ಟೇ ಎತ್ತಿನಹೊಳೆಗೆ ಕಾಟಾಚಾರದ ಭೇಟಿ ನೀಡಿದ್ದ ಅವರು, ಹೂತಿಟ್ಟ ನಿಧಿಯಂತಿರುವ ರಾಜಧಾನಿಯನ್ನು ಬ್ರ್ಯಾಂಡ್‌ ಬೆಂಗಳೂರು ಮಾಡಲು ಅತ್ಯುತ್ಸಾಹ ತೋರುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಕಳಪೆ ಕಾಮಗಾರಿ, ಅಧಿಕಾರಿ-ಮಂತ್ರಿಗಳ ನಿರ್ಲಕ್ಷ್ಯದಿಂದ ಇಡೀ ಯೋಜನೆ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿದೆ. ಪೈಪುಗಳು ತುಕ್ಕು ಹಿಡಿಯುತ್ತಿದ್ದರೆ, ತಡೆಗೋಡೆಗಳು ಕುಸಿದು ಬೀಳುತ್ತಿವೆ. 10 ವರ್ಷ ಕಳೆದರೂ ಹನಿ ನೀರೂ ಹರಿಯುವ ನಿರೀಕ್ಷೆ ಇಲ್ಲ. ಗುತ್ತಿಗೆದಾರರ ಜೇಬು ತುಂಬಿದ್ದಷ್ಟೇ ಭಾಗ್ಯ ಎಂದು ಆರೋಪಿಸಿದೆ.

RELATED ARTICLES

Latest News