ಬೆಂಗಳೂರು,ಅ.3- ಸತ್ತ ಲಿಂಗ ಅಲಿಯಾಸ್ ಜವರನ 3 ಎಕರೆ 16 ಗುಂಟೆ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಸ್ವಾಧೀನ ಪಡಿಸಿಕೊಳ್ಳುವಾಗ ನಿಮ ಆತಸಾಕ್ಷಿ ಸತ್ತು ಹೋಗಿತ್ತೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಪ್ರಶ್ನಿಸಿದೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಪರಿಶಿಷ್ಟರ ಜಮೀನು ಕಬಳಿಸುವಾಗ ನಿಮ ಆತಸಾಕ್ಷಿ ಅಜ್ಞಾತವಾಸದಲ್ಲಿತ್ತೇ? ಎಂದಿದೆ.2013ರ ಚುನಾವಣಾ ಅಫಿಡವಿಟ್‌ನಲ್ಲಿ ನಿಮ ಪತ್ನಿ ಬಳಿಯಿರುವ 3 ಎಕರೆ16 ಗುಂಟೆ ಜಮೀನಿನ ಮಾಹಿತಿ ಉಲ್ಲೇಖಿಸದೆ ಮುಚ್ಚಿಟ್ಟು ಚುನಾವಣಾ ಆಯೋಗಕ್ಕೆ ಸುಳ್ಳು ಹೇಳುವಾಗ ತಮ ಆತಸಾಕ್ಷಿ ಕುರುಡಾಗಿತ್ತೇ? ಎಂದು ವಾಗ್ದಾಳಿ ನಡೆಸಿದೆ.
ಮುಡಾದಲ್ಲಿ ಅಕ್ರಮವಾಗಿ ಪಡೆದ 14 ಸೈಟುಗಳಿಗೆ 62 ಕೋಟಿ ಕೇಳಲು ನಿಮ ಆತಸಾಕ್ಷಿ ಅನುಮತಿ ಕೊಟ್ಟಿತ್ತೇ?, ಮುಡಾ ಹಗರಣದಲ್ಲಿ ಎ1 ಆರೋಪಿಯಾದ ಮೇಲೆ 14 ಸೈಟ್ ಸರೆಂಡರ್ ಮಾಡಲು ನಿಮ ಆತಸಾಕ್ಷಿ ಒಪ್ಪಿತೇ?, ವಾಲೀಕಿ ನಿಗಮದ ಹಣವನ್ನು ಕದ್ದು ಕಳ್ಳಮಾರ್ಗದಲ್ಲಿ ಚುನಾವಣೆಗೆ ಬಳಸಿಕೊಂಡಾಗ ನಿಮ ಆತಸಾಕ್ಷಿ ಏನು ಮಾಡುತ್ತಿತ್ತು? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪ್ರಶ್ನೆಗಳ ಸುರಿಮಳೆಗೈದಿದ್ದು, ಉತ್ತರಿಸಿ ಎಂದಿದೆ.
ಮದ್ಯಪಾನ ಮುಕ್ತ ಸಮಾಜ ಮಹಾತ ಗಾಂಧಿ ಅವರ ಆಶಯ, ಧ್ಯೇಯವಾಗಿತ್ತು. ಆದರೆ ನೀವು ಬಾರ್ ಮತ್ತು ವೈನ್ ಸ್ಟೋರ್‌ಗಳಿಗೆ ಹಣವನ್ನು ಅಕ್ರಮವಾಗಿ ಟ್ರಾನ್ಸ್ ಫರ್ ಮಾಡಿ, ಹೆಂಡ, ಸಾರಾಯಿ ಹೊಳೆ ಹರಿಸುವಾಗ ನಿಮ ಆತಸಾಕ್ಷಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿತ್ತೇ?, ಆತಸಾಕ್ಷಿಯಿಂದ ರಾಜೀನಾಮೆ ಕೊಟ್ಟು ನಿಮ ರಾಜಕೀಯ ನೈತಿಕತೆ ಉಳಿಸಿಕೊಳ್ಳಿ. ಸತ್ಯ ಮಾರ್ಗದಲ್ಲಿ ನಡೆದ ಮಹಾತ ಗಾಂಧಿಯವರು ಬರಿಗೈ ಫಕೀರ. ತಾವು ಏನು?, ತಮ ಆತಸಾಕ್ಷಿ ನ್ಯಾಯಾಲಯ ಏನು ಹೇಳುತ್ತದೆ? ಎಂದು ಜೆಡಿಎಸ್ ಪ್ರಶ್ನಿಸಿದೆ.