Tuesday, April 16, 2024
Homeಅಂತಾರಾಷ್ಟ್ರೀಯಪುಟಿನ್ ಒಬ್ಬ ಹುಚ್ಚು ಮನುಷ್ಯ : ಬೈಡೆನ್ ಲೇವಡಿ

ಪುಟಿನ್ ಒಬ್ಬ ಹುಚ್ಚು ಮನುಷ್ಯ : ಬೈಡೆನ್ ಲೇವಡಿ

ಸ್ಯಾನ್‍ಫ್ರಾನ್ಸಿಸ್ಕೋ, ಫೆ.22- ಅಮೆರಿಕ ಅಧ್ಯಕ್ಷ ಜೋಬೈಡೆನ್ ಅವರು ಪುನರಾಯ್ಕೆ ಬಯಸಿ ನಡೆಸುತ್ತಿರುವ ಚುನಾವಣಾ ಪ್ರಚಾರಕ್ಕಾಗಿ ಬುಧವಾರ ರಾತ್ರಿ ನಿಧಿ ಸಂಗ್ರಹಿಸುವ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒಬ್ಬ ಹುಚ್ಚು ಮನುಷ್ಯ ಎಂದು ಕರೆದಿದ್ದಾರೆ. ಆಕ್ರ್ಟಿಕ್ ಕಾರಾಗೃಹದಲ್ಲಿ ಕಳೆದ ವಾರ ನಿಧನರಾದ ರಷ್ಯಾದ ಪ್ರತಿಪಕ್ಷ ನಾಯಕನಿಗೆ ತಮ್ಮನ್ನು ಹೋಲಿಸಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೂ ಬೈಡೆನ್ ವಾಗ್ದಾಳಿ ನಡೆಸಿದ್ದಾರೆ.

ಶಿಕ್ಷಕರ ಕ್ಷೇತ್ರದ ಗೆಲುವು ಲೋಕಸಭೆಗೆ ದಿಕ್ಸೂಚಿ : ಸಿಎಂ

ಹವಾಮಾನ ವೈಪರೀತ್ಯ ಕುರಿತು ಮಾತನಾಡುತ್ತಿದ್ದ ಬೈಡೆನ್ ನಮ್ಮಲ್ಲಿ ಪುಟಿನ್‍ರಂತಹ ಹುಚ್ಚು ಮನುಷ್ಯರಿದ್ದಾರೆ. ನಾವು ಯಾವಾಗಲೂ ಅಣ್ವಸ್ತ್ರ ಸಮರದ ಕುರಿತು ಚಿಂತಿತರಗುತ್ತೇವೆ. ಬೆದರಿಕೆಯೊಡ್ಡಿದೆ ಎಂದು ನುಡಿದರು.2024ರ ಚು ನಾವಣೆಯಲ್ಲಿ ಡೆಮಾಕ್ರಟ್ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿರುವ ಬೈಡೆನ್ ಮೂರು ದಿನಗಳ ತಮ್ಮ ಕ್ಯಾಲಿಫೋನಿರ್ಯಾ ಪ್ರಚಾರದ ಸಂದರ್ಭದಲ್ಲಿ ಸಂಭವನೀಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಂದ ಇತ್ತೀಚೆಗೆ ತಮ್ಮ ವಿರುದ್ಧ ವ್ಯಕ್ತವಾಗಿರುವ ಟೀಕೆಗಳಿಂದ ಬೇಸರವಾಗಿದೆ ಎಂದು ತಿಳಿಸಿದರು.

RELATED ARTICLES

Latest News