ರಷ್ಯಾ-ಉಕ್ರೇನ್‍ ಯುದ್ಧ ನಿರ್ಣಾಯಕ ಹಂತದಲ್ಲಿದೆ : ಬಿಡೆನ್

ವಾಷಿಂಗ್ಟನ್, ಜ.6-ರಷ್ಯಾ – ಉಕ್ರೇನ್ ಯುದ್ಧ ಇದೀಗ ನಿರ್ಣಾಯಕ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ರಷ್ಯಾದ ಆಕ್ರಮಣವನ್ನು ಎದುರಿಸಲು ಉಕ್ರೇನಿಯನ್ನರಿಗೆ ಏನ್ನೆಲ್ಲಾ ಸಹಾಯ ಮಾಡಬೇಕೊ ಅದನ್ನು ನಾವು ಮಾಡಿದ್ದೇವೆ ಎಂದು ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಜಪಾನ್ ಒಳಗೊಂಡಂತೆ ನಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುವ ಇತರ ದೇಶಗಳ ದೊಡ್ಡ ತಂಡವನ್ನು ನಾವು ಹೊಂದಿದ್ದೇವೆ. ಆದರೆ ನಾವು ಏನು ಮಾಡಲಿದ್ದೇವೆ ಎಂಬುದರ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇವೆ ಎಂದು ಅವರು ಹೇಳಿದರು. ನಾವು ಉಕ್ರೇನ್‍ಗೆ ಬೆಂಬಲವನ್ನು […]

ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕ

ವಾಷಿಂಗ್ಟನ್, ಜ. 4-ಲಾಸ್ ಏಂಜಲೀಸ್‍ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತಕ್ಕೆ ತನ್ನ ರಾಯಭಾರಿಯಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮರುನಾಮಕರಣ ಮಾಡಿದ್ದಾರೆ. ಮೂಲತ ಕ್ಯಾಲಿಫೋರ್ನಿಯಾದವರಾದ ಎರಿಕ್ ಎಂ. ಗಾರ್ಸೆಟ್ಟಿ ಅವರು ರಿಪಬ್ಲಿಕ್ ಆಫ್ ಇಂಡಿಯಾಕ್ಕೆ ಅಮೇರಿಕಾ ರಾಯಭಾರಿಯಾಗಲಿದ್ದಾರೆ ಎಂದು ಸೆನೆಟ್‍ಗೆ ಅನುಮೂದನೆಗಾಗಿ ಕಳುಹಿಸಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತಕ್ಕೆ ರಾಯಭಾರಿಯಾಗಿ ಸೇವೆ ಸಲ್ಲಿಸಲು ಸರ್ವಾನುಮತದಿಂದ ನಾವು ಈ ನಿರ್ಧರ ಮಾಡಿರುವುದಾಗಿ ಹೇಳಿದ್ದಾರೆ. ಪ್ರಮುಖ ಪಾತ್ರದಲ್ಲಿ ಸೇವೆ ಸಲ್ಲಿಸಲು […]

ದ್ವೇಷದಿಂದ ತುಂಬಿದ ಹಿಂಸೆಗೆ ಅಮೆರಿಕದಲ್ಲಿ ಸ್ಥಾನವಿಲ್ಲ: ಬಿಡೆನ್

ವಾಷಿಂಗ್ಟನ್,ಸೆ.16- ದೇಶದಲ್ಲಿ ನಡೆಯುತ್ತ್ತರುವ ದ್ವೇಷದ ಹಿಂಸಾಚಾರವನ್ನು ಬೇರು ಸಹಿತ ಕಿತ್ತುಹಾಕಬೇಕು ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಹಿಂಸಾಚಾರವನ್ನು ಉತ್ತೇಜಿಸುವವರಿಗೆ ತಕ್ಕ ಶಿಕ್ಷೆ ಖಚಿತ, ಇಂತಹುದಕ್ಕೆ ಅಮೆರಿಕಾದಲ್ಲಿ ಸ್ಥಾನವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಕಳೆದ 2020ರಲ್ಲಿ ಅಮೆರಿಕದಲ್ಲಿ ನಡೆದ ಅಪರಾಧ ಚಟುವಟಿಕೆಗಳು ಮಿತಿ ಮೀರಿವೆ ಇದನ್ನು ಕೊನೆಗಾಣಿಸಲು ಸಿದ್ದ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರ ವಿರುದ್ಧದ ಘಟನೆಗಳು ಸೇರಿದಂತೆ ದೇಶಾದ್ಯಂತ ದ್ವೇಷ ಸಂಬಂಧಿತ ಘಟನೆಗಳ ಉಲ್ಬಣಸಿರುವುದು ಶ್ವೇತ ವರ್ಣೀಯರ ಪ್ರಾಬಲ್ಯಕ್ಕಾಗಿ ಇಂತಹ ಪ್ರವೃತ್ತಿಯಿಂದ […]

ಅಮೆರಿಕ ಅಧ್ಯಕ್ಷ ಜೋ ಬಿಡೆನ್‍ಗೆ ಮತ್ತೆ ವಕ್ಕರಿಸಿದ ಕೊರೊನಾ

ವಾಷಿಂಗ್ಟನ್ , ಜುಲೈ 31 – ಅಮೆರಿಕ ಅಧ್ಯಕ್ಷ ಜೋ ಬಿಡೆನ್‍ಗೆ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದ್ದು ಶ್ವೇತಭವನದ ಪ್ರತ್ಯೇಕ ಕೊಠಡಿಯಲ್ಲಿ ನೆಲೆಸಲಿದ್ದಾರೆ. ಇತ್ತೀಚೆಗೆ ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಅದರೆ ಶನಿವಾರ ಮತ್ತೆ ಪರೀಕ್ಷೆ ನಡೆಸಿದಾಗ ಕರೋನ ಸೋಂಕು ಮತ್ತೆ ಕಾಣಿಸಿಕೊಂಡಿದೆ. ಶ್ವೇತಭವನದ ವೈದ್ಯ ಡಾ. ಕೆವಿನ್ ಒ ಕಾನೂರ್ ನೀಡಿರುವ ಮಾಹಿತಿ ಪ್ರಕಾರ ಈಗಾಗಲೆ ರೋಗ ನಿರೋದಕ ಔಷದಿ ,ಚಿಕಿತ್ಸೆ ಪಡೆದಿರುವುದರಿಂದ ಅಧುಕ್ಷ ಬಿಡೆನ್ ಅವರಿಗೆ ರೋಗಲಕ್ಷಣಗಳ ಹೆಚ್ಚಾಗಿ ಬಾದಿಸಿಲ್ಲ ಈ ಸಮಯದಲ್ಲಿ ಹೆಚ್ಚಿನ […]