Friday, November 22, 2024
Homeರಾಜಕೀಯ | Politicsಗಡ್ಕರಿಯನ್ನು ಮಹಾವಿಕಾಸ್ ಅಘಾಡಿಗೆ ಸ್ವಾಗತಿಸಿದ ಉದ್ಧವ್ ಠಾಕ್ರೆ

ಗಡ್ಕರಿಯನ್ನು ಮಹಾವಿಕಾಸ್ ಅಘಾಡಿಗೆ ಸ್ವಾಗತಿಸಿದ ಉದ್ಧವ್ ಠಾಕ್ರೆ

ಯವತ್ಮಾಲ್, ಮಾ 13 (ಪಿಟಿಐ) – ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬಿಜೆಪಿ ಅವಮಾನ ಮಾಡುತ್ತಿದ್ದರೆ ಈ ಕೂಡಲೆ ಪಕ್ಷ ತೊರೆಯುವಂತೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತೆ ಕೇಳಿಕೊಂಡಿದ್ದಾರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಗೆಲುವನ್ನು ಮಹಾರಾಷ್ಟ್ರದ ಪ್ರತಿಪಕ್ಷಗಳು ನಿಮಗೆ ಖಚಿತಪಡಿಸುತ್ತವೆ ಎಂದು ಹೇಳಿದ್ದಾರೆ.

ಪೂರ್ವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಪುಸಾದ್‍ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಠಾಕ್ರೆ, ಬಿಜೆಪಿ ಒಂದು ಕಾಲದಲ್ಲಿ (ಭ್ರಷ್ಟಾಚಾರದ ಆರೋಪದ ಮೇಲೆ) ಗುರಿಯಾಗಿದ್ದ (ಮಾಜಿ ಕಾಂಗ್ರೆಸ್ ನಾಯಕ) ಕೃಪಾಶಂಕರ್ ಸಿಂಗ್ ಅವರಂತಹ ಜನರು ಕೇಸರಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಧಾನಿ ಜೊತೆಗೆ ಕಾಣಿಸಿಕೊಂಡಿದ್ದಾರೆ ಆದರೆ ಗಡ್ಕರಿ ಹೆಸರು ಕಾಣಿಸಿಕೊಂಡಿಲ್ಲದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಎರಡು ದಿನಗಳ ಹಿಂದೆಯೇ ನಾನು ಗಡ್ಕರಿ ಅವರಿಗೆ ಇದನ್ನು ಹೇಳಿದ್ದೆ , ಮತ್ತು ನಾನು ಅದನ್ನು ಮತ್ತೆ ಪುನರಾವರ್ತಿಸುತ್ತಿದ್ದೇನೆ, ನಿಮಗೆ ಅವಮಾನವಾಗುತ್ತಿದ್ದರೆ, ಬಿಜೆಪಿ ತೊರೆದು ಮಹಾ ವಿಕಾಸ್ ಅಘಾಡಿ (ಎಂವಿಎ) ಗೆ ಸೇರಿಕೊಳ್ಳಿ. ನಿಮ್ಮ ಗೆಲುವನ್ನು ನಾವು ಖಚಿತಪಡಿಸುತ್ತೇವೆ. ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಅವರು ಹೇಳಿದರು. ವಿರೋಧ ಪಕ್ಷಗಳಾದ ಶಿವಸೇನೆ (ಯುಟಿಬಿ), ಶರದ್ ಪವಾರ್ ನೇತೃತ್ವದ ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.

ಕಳೆದ ವಾರ, ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗಡ್ಕರಿ ಅವರಿಗೆ ಠಾಕ್ರೆ ನೀಡಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ -ಫಡ್ನವಿಸ್ ಅವರು ಸೇನಾ (ಯುಬಿಟಿ) ಮುಖ್ಯಸ್ಥರನ್ನು ಲೇವಡಿ ಮಾಡಿದರು, ಇದು ಬೀದಿಯಲ್ಲಿರುವ ವ್ಯಕ್ತಿಯೊಬ್ಬರು ಯುಎಸ್ ಅಧ್ಯಕ್ಷರಾಗಲು ಯಾರನ್ನಾದರೂ ಅರ್ಪಿಸಿದಂತೆ ಎಂದು ಕೆಣಕಿದ್ದಾರೆ.

ಗಡ್ಕರಿ ಅವರು ಬಿಜೆಪಿಯ ಪ್ರಮುಖ ನಾಯಕರಾಗಿದ್ದಾರೆ, ಆದರೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಚರ್ಚೆಗಳು ಪೂರ್ಣವಾಗಿಲ್ಲದ ಕಾರಣ ಮೊದಲ ಪಟ್ಟಿಯಲ್ಲಿ ಮಹಾರಾಷ್ಟ್ರದ ಹೆಸರುಗಳಿಲ್ಲ ಎಂದು -ಫಡ್ನವಿಸ್ ಹೇಳಿದ್ದಾರೆ.ಏತನ್ಮಧ್ಯೆ, ಠಾಕ್ರೆ, ಪೌರತ್ವ (ತಿದ್ದುಪಡಿ) ಕಾಯ್ದೆಯ ಅಡಿಯಲ್ಲಿ ನಿಯಮಗಳ ಅಧಿಸೂಚನೆಯನ್ನು ಚುನಾವಣಾ ಜುಮ್ಲಾ (ಘೋಷವಾಕ್ಯ) ಎಂದು ಕರೆದರು.

ಹಿಂದೂಗಳು, ಸಿಖ್ಖರು, ಪಾರ್ಸಿಗಳು ಮತ್ತು ಇತರರು (ನೆರೆಹೊರೆಯ ದೇಶಗಳಿಂದ) ಭಾರತಕ್ಕೆ ಬರುತ್ತಿರುವುದು ಸ್ವಾಗತಾರ್ಹ ಆದರೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವುದರಿಂದ ಅಧಿಸೂಚನೆಯ ಸಮಯವು ಅನುಮಾನಾಸ್ಪದವಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಹೇಳಿದ್ದಾರೆ.

370 ನೇ ವಿ„ಯನ್ನು ರದ್ದುಪಡಿಸಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಕಳೆದಿದೆ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾವಣೆಗಳು ನಡೆದಿಲ್ಲ ಮತ್ತು ಕಾಶ್ಮೀರಿ ಪಂಡಿತರು ಇನ್ನೂ ಕಾಶ್ಮೀರದಲ್ಲಿ ತಮ್ಮ ಮನೆಗಳಿಗೆ ಹಿಂತಿರುಗಿಲ್ಲ ಎಂದು ಅವರು ಹೇಳಿದರು.ಬಿಜೆಪಿ ಮೊದಲು ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರಬೇಕು ಮತ್ತು ನಂತರ ಸಿಎಎ ಜಾರಿಗೊಳಿಸಬೇಕು ಎಂದು ಠಾಕ್ರೆ ಹೇಳಿದರು.ಮುಂಬರುವ ಚುನಾವಣೆಯಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕಿ ಸಂವಿಧಾನ ಬದಲಿಸಲು ಹೊರಟಿರುವ ಬಿಜೆಪಿ, ಮತ್ತೊಂದೆಡೆ ದೇಶಪ್ರೇಮಿಗಳ ಮೈತ್ರಿಕೂಟವಾಗಿರುವ ಇಂಡಿಯಾ ಬಣವಿದೆ ಎಂದರು.

RELATED ARTICLES

Latest News