ಬೆಂಗಳೂರು,ಫೆ.12-ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿರುವ ಭಾಷಣದಲ್ಲಿ ಉಪ್ಪು, ಹುಳಿ, ಖಾರ ಯಾವುದೂ ಇಲ್ಲ. ಕಾಂಗ್ರೆಸ್ ಸರ್ಕಾರದ ಕಳಪೆ ಸಾಧನೆ ಇದರಿಂದ ಬಿಂಬಿತವಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಸಂಪ್ರದಾಯದಂತೆ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ರಾಜ್ಯ ಸರ್ಕಾರ ರಚನೆಯಾದ ದಿನದಿಂದ ಗ್ಯಾರಂಟಿ ವಿಷಯವನ್ನೇ ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲೂ ಅದೇ ವಿಚಾರ ಪ್ರಸ್ತಾಪವಾಗಿದೆ. ಮೇಕೆದಾಟು ಯೋಜನೆ ನಿಂತಲ್ಲೇ ನಿಂತಿದೆ. ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪವಿಲ್ಲ. ಅಭಿವೃದ್ದಿಗೆ ಪೂರಕ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ ಎಂದು ಆರೋಪಿಸಿದರು.
ತಾಯಿ-ಮಗನಿಗೆ ವಿಷವುಣಿಸಿ ಕೊಂದು ಉದ್ಯಮಿ ಆತ್ಮಹತ್ಯೆ
ಐದು ಗ್ಯಾರಂಟಿಗಳ ಜೊತೆಗೆ ಇನ್ನು 5 ಗ್ಯಾರಂಟಿ ಕೊಡಲಿ ಅಭ್ಯಂತರವಿಲ್ಲ. ಅಭಿನಂದಿಸುತ್ತೇನೆ. ಕಾಂತರಾಜ್ ವರದಿ ಬಗ್ಗೆ ಪ್ರಸ್ತಾಪವಿಲ್ಲ . ಲೋಕಸಭೆ ಚುನಾವಣೆವರೆಗೂ ಈ ವಿಚಾರವನ್ನು ಜೀವಂತವಾಗಿಡಬೇಕು ಎಂಬುದಷ್ಟೇ ಅವರ ಉದ್ದೇಶ. ಮುಖ್ಯಮಂತ್ರಿ 8 ತಿಂಗಳಲ್ಲಿ ಎಷ್ಟು ಜಾತಿ ಧರ್ಮಗಳ ಸಮಾವೇಶ ನಡೆಸಿದ್ದಾರೆ ಎಂಬ ದಾಖಲೆಗಳನ್ನು ತೆಗೆದು ನೋಡೋಣ ಎಂದು ಪ್ರತಿಕ್ರಿಯಿಸಿದರು.