Friday, September 20, 2024
Homeರಾಜ್ಯಪತ್ರಕರ್ತರ ಸಹಕಾರ ಸಂಘದ ನೆರವಿಗೆ ಸಿಎಂ ಭರವಸೆ

ಪತ್ರಕರ್ತರ ಸಹಕಾರ ಸಂಘದ ನೆರವಿಗೆ ಸಿಎಂ ಭರವಸೆ

Journalists' Co-operative Society

ಬೆಂಗಳೂರು, ಸೆ.20- ಪತ್ರಕರ್ತರ ಸಹಕಾರ ಸಂಘಕ್ಕೆ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ಗಿರೀಶ್‌ಕೋಟೆ ಅವರ ಸಹಕಾರದೊಂದಿಗೆ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್‌ ಪಾಳ್ಯ ನೇತತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ವೇಳೆ ಈ ಭರವಸೆ ನೀಡಿದ್ದಾರೆ.

1949ರಲ್ಲಿ ಆರಂಭವಾದ ಪತ್ರಕರ್ತರ ಸಹಕಾರ ಸಂಘ ರಾಜ್ಯದ ಪತ್ರಕರ್ತರ ಏಕೈಕ ಹಣಕಾಸಿನ ಪ್ರಾತಿನಿಧಿಕ ಸಂಸ್ಥೆ. ಈ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುದ್ರಣ ಮತ್ತು ವಿದ್ಯುನಾನ ಮಾಧ್ಯಮಗಳ ಪತ್ರಕರ್ತರನ್ನು ಸದಸ್ಯರನ್ನಾಗಿ ಹೊಂದಿದೆ. ಆಡಿಟ್‌ ವರ್ಗೀಕರಣದಲ್ಲಿ ನಮ ಸಂಸ್ಥೆ ಎ ಶ್ರೇಣಿ ಪಡೆದಿರುವ ಸಂಸ್ಥೆ. ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೂ ಪಾತ್ರವಾಗಿದೆ. ನಿರಂತರ ಏಳು ದಶಕಗಳಿಂದ ನಮ ಪತ್ರಕರ್ತರ ಸಹಕಾರ ಸಂಘ ಸೇವೆ ಸಲ್ಲಿಸುತ್ತಿದೆ.

ಪತ್ರಕರ್ತರ ಸಂಘದ ಸದಸ್ಯರಿಂದ ಆರೋಗ್ಯದ ನೆರವಿನ ಬೇಡಿಕೆ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಪತ್ರಕರ್ತರ ಆರೋಗ್ಯದ ಅನುಕೂಲಕ್ಕಾಗಿ ಆರ್ಥಿಕ ನೆರವು ಬೇಕಿದೆ. ವೈದ್ಯಕೀಯ ನೆರವಿಗೆ ರಾಜ್ಯ ಸರ್ಕಾರದಿಂದ ಸುಮಾರು 5 ಕೋಟಿ ರೂ. ಅನುದಾನ ನೀಡಬೇಕು ಎಂದು ಸಂಘದ ಅಧ್ಯಕ್ಷರಾದ ರಮೇಶ್‌ ಪಾಳ್ಯ ನೇತೃತ್ವದ ನಿಯೋಗವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿತು.

ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಘದ ಶ್ರೇಯೋಭಿವದ್ಧಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಇದರ ಜೊತೆಗೆ ಕೆಲವು ಹಿರಿಯ ಪತ್ರಕರ್ತರು ಸಂಘದಲ್ಲಿ ಸಾಲ ಪಡೆದಿದ್ದು, ಕೊರೋನಾ ಸಮಯದಲ್ಲಿ ಹಾಗೂ ಆನಂತರ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಕೊರೋನಾ ಆರ್ಥಿಕ ಸಂಕಷ್ಟದಿಂದ ನಿಗಧಿತ ಸಮಯಕ್ಕೆ ಸಾಲ ಮರು ಪಾವತಿ ಮಾಡದೆ ಸುಸ್ತಿದಾರರಾಗಿದ್ದಾರೆ.

ಹೀಗಾಗಿ ಸಂಸ್ಥೆಗೆ ಆರ್ಥಿಕ ನೆರವು ತೀರಾ ಅಗತ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಪತ್ರಕರ್ತರ ಸಹಕಾರ ಸಂಘಕ್ಕೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳನ್ನು ಮನವಿ ಮಾಡಿಕೊಂಡಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತರ ಸಹಕಾರ ಸಂಘಕ್ಕೆ ನೆರವು ನೀಡುವ ಭರವಸೆ ನೀಡಿದರು.

ನಿಗಮಗಳ ನೇಮಕದಲ್ಲಿ ಸಂಸ್ಥೆಯನ್ನೂ ಪರಿಗಣಿಸಿ: ಮಾಧ್ಯಮಕ್ಕೆ ಸಂಬಂಧಿಸಿದ ನಿಗಮ ಮಂಡಳಿ ಅಥವಾ ಅಕಾಡೆಮಿಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘವನ್ನೂ ಪರಿಗಣಿಸಬೇಕು. ಸಹಕಾರ ಸಂಘದ ಪ್ರತಿನಿಧಿಗಳನ್ನು ನಿರ್ದೇಶಕರು ಹಾಗೂ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿಯೋಗದ ಸದಸ್ಯರು ಸಿಎಂ ಸಿದ್ದರಾಮಯ್ಯನವರನ್ನು ವಿನಂತಿಸಿಕೊಳ್ಳಲಾಯಿತು.

ನಿಯೋಗದಲ್ಲಿ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮಯ್ಯ, ಖಜಾಂಚಿ ಮೋಹನ್‌ ಕುಮಾರ್‌ ಬಿ.ಎಸ್‌‍. ನಿರ್ದೇಶಕರಾದ ರಮೇಶ್‌ ಹಿರೇಜಂಬೂರು, ಸೋಮಶೇಖರ್‌ ಕೆ.ಎಸ್‌‍.( ಸೋಮಣ್ಣ ) ಉಪಸ್ಥಿತರಿದ್ದರು.

ಭಾನುವಾರ ಪ್ರೆಸ್‌‍ಕ್ಲಬ್‌ನಲ್ಲಿ ಪತ್ರಕರ್ತರ ಸಹಕಾರ ಸಂಘದ ಮಹಾಸಭೆ :
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ಪ್ರೆಸ್‌‍ಕ್ಲಬ್‌ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಸ್‌‍ಎಸ್‌‍ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೊತ್ತರ ಪದವಿಗಳಲ್ಲಿ ಅತ್ಯುತ್ತಮ ಶ್ರೇಣಿಗಳಲ್ಲಿ ಉತ್ತೀರ್ಣರಾಗಿರುವ ಸಂಘದ ಸದಸ್ಯರ ಮಕ್ಕಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಿಜ್ವಾನ್‌ ಹರ್ಷದ್‌ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮತ್ತಿತರ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.

ಪ್ರತಿಭಾವಂತ ಮಕ್ಕಳಿಗೆ 2500 ರೂ.ನಗದು, ಪ್ರಮಾಣ ಪತ್ರ, ಬ್ಯಾಗ್‌, ಮೊಮೆಂಟೋ ಮತ್ತಿತರ ವಸ್ತುಗಳನ್ನು ನೀಡಿ ಗೌರವಿಸಲಾಗುವುದು. ಇದೇ ಮೊದಲ ಬಾರಿಗೆ ಯುಪಿಎಸ್‌‍ಸಿ ಪರೀಕ್ಷೆಯಲ್ಲಿ ಸಂಘದ ಸದಸ್ಯರೊಬ್ಬರ ಪುತ್ರರೂ ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಸಿಎ ಪರೀಕ್ಷೆ ಹಾಗೂ ಡೆಂಟಲ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರತಿಭಾವಂತರನ್ನು ಸನಾನಿಸಲಾಗುತ್ತಿದೆ.

ಸಂಘದ ಅಧ್ಯಕ್ಷ ರಮೇಶ್‌ಪಾಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸಂಘದ ಬೆಳವಣಿಗೆ ಹಾಗೂ ಕೆಲ ನಿಯಮಗಳನ್ನು ಜಾರಿಗೆ ತಂದಿರುವ ಕುರಿತಂತೆ ಮಹಾಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ.

ಸಭೆಯಲ್ಲಿ ಉಪಾಧ್ಯಕ್ಷ ದೊಡ್ಡಬೊಮಯ್ಯ, ಖಜಾಂಚಿ ಮೋಹನ್‌ಕುಮಾರ್‌, ನಿರ್ದೇಶಕರುಗಳಾದ ಆನಂದ್‌ ಬೈದಮನೆ, ಧ್ಯಾನ್‌ಪೂಣಚ್ಚ, ಸೋಮಣ್ಣ, ರಮೇಶ್‌ ಹಿರೆಜಂಬೂರು, ವಿನೋದ್‌ಕುಮಾರ್‌ ನಾಯ್‌್ಕ, ರಾಜೇಂದ್ರ ಕುಮಾರ್‌, ಕೃಷ್ಣಕುಮಾರ್‌, ಕೆ.ವಿ.ಪರಮೇಶ್‌, ನಯನಾ, ವನಿತಾ, ಕಾರ್ಯದರ್ಶಿ ಕೆಂಪಣ್ಣ ಮತ್ತಿತರರು ಪಾಲ್ಗೊಳ್ಳುತ್ತಿದ್ದಾರೆ.

RELATED ARTICLES

Latest News