ಸ್ಯಾನ್‌ಫ್ರಾನ್ಸಿಸ್ಕೋ, ಏ.2– ಹೆತ್ತವರು ಅಥವಾ ಪೋಷಕರಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ವಲಸೆ ಮಕ್ಕಳಿಗೆ ಕಾನೂನು ನೆರವನ್ನು ತಾತ್ಕಾಲಿಕವಾಗಿ ಪುನರ್‌ಸ್ಥಾಪಿಸುವಂತೆ ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಧೀಶರು ಟ್ರಂಪ್ ಆಡಳಿತಕ್ಕೆ ಆದೇಶಿಸಿದ್ದಾರೆ.
ರಿಪಬ್ಲಿಕನ್ ಆಡಳಿತವು ಮಾರ್ಚ್ 21 ರಂದು ಅಕೇಶಿಯಾ ಸೆಂಟರ್ ಫಾರ್ ಜಸ್ಟೀಸ್‌ನೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿತ್ತು. ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿ ನ ವಲಸೆ ಮಕ್ಕಳಿಗೆ ಕಾನೂನು ಸೇವೆಗಳನ್ನು ಒದಗಿಸುತ್ತದೆ.
26,000 ಮಕ್ಕಳು ತಮ್ಮ ವಕೀಲರನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಹನ್ನೊಂದು ಉಪಗುತ್ತಿಗೆದಾರ ಗುಂಪುಗಳು ಮೊಕದ್ದಮೆ ಹೂಡಿದವು. ಅಕೇಶಿಯಾ ವಾದಿಯಲ್ಲ.2008 ರ ಕಳ್ಳಸಾಗಣೆ ವಿರೋಧಿ ಕಾನೂನಿನ ಅಡಿಯಲ್ಲಿ ದುರ್ಬಲ ಮಕ್ಕಳಿಗೆ ಕಾನೂನು ಸಲಹೆಯನ್ನು ಒದಗಿಸುವ ಬಾಧ್ಯತೆ ಸರ್ಕಾರಕ್ಕೆ ಇದೆ ಎಂದು ಆ ಗುಂಪುಗಳು ವಾದಿಸಿದ್ದವು.
ಸ್ಯಾನ್ ಫ್ರಾನ್ಸಿ ಸ್ಕೋದ ಯುಎಸ್ ಜಿಲ್ಲಾ ನ್ಯಾಯಾಧೀಶ ಅರಾಸೆಲಿ ಮಾರ್ಟಿನೆಜ್-ಓಲ್ಲುಯಿನ್ ಅವರು ತಡರಾತ್ರಿ ತಾತ್ಕಾಲಿಕ ನಿರ್ಬಂಧ ಆದೇಶವನ್ನು ನೀಡಿದರು. ಟ್ರಂಫ್ ಆಡಳಿತವು 2008 ರ ಕಾನೂನನ್ನು ಉಲ್ಲಂಘಿಸಿದೆಯೇ ಎಂಬ ಬಗ್ಗೆ ವಕೀಲರು ಕಾನೂನುಬದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಅವರು ಬರೆದಿದ್ದಾರೆ.