Tuesday, May 13, 2025
Homeಮನರಂಜನೆಫಿಲಿಪೈನ್ಸ್ ನ್‌ ಪ್ರವಾಸಕ್ಕೆ ಹೋಗಿದ್ದ ಭಾರತದ ದಂಪತಿ ಅಪಘಾತದಲ್ಲಿ ಸಾವು

ಫಿಲಿಪೈನ್ಸ್ ನ್‌ ಪ್ರವಾಸಕ್ಕೆ ಹೋಗಿದ್ದ ಭಾರತದ ದಂಪತಿ ಅಪಘಾತದಲ್ಲಿ ಸಾವು

"Just Married" cast celebrated Women's Day

ಪಾಲ್ಘರ್‌,ಮೇ.13-ಫಿಲಿಪೈನ್‌್ಸಗೆ ಪ್ರವಾಸಕ್ಕೆ ಹೋಗಿದ್ದ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ದಂಪತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ ಮೇ 10 ರಂದು ಫಿಲಿಪೈನ್ಸ್ ನ ಬಡಿಯನ್‌ನಲ್ಲಿ ಜೆರಾಲ್‌್ಡ ಪೆರೇರಾ (50) ಮತ್ತು ಅವರ ಪತ್ನಿ ಪ್ರಿಯಾ (46) ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಟ್ರಕ್‌ ಡಿಕ್ಕಿ ಹೊಡೆದೆದೆ ಎಂದು ಅಲ್ಲಿನ ವಸಾಯಿಯಲ್ಲಿರುವ ಸೇಂಟ್‌ ಥಾಮಸ್‌‍ ಚರ್ಚ್‌ನ ಮುಖ್ಯ ಪಾದ್ರಿ ತಿಳಿಸಿದ್ದಾರೆ.

ಪೆರೇರಾ ದಂಪತಿಗಳು ವಸಾಯಿಯ ಸ್ಯಾಂಡರ್‌ ಪ್ರದೇಶದಲ್ಲಿ ವಾಸಿಸುತ್ತಿದ್ದರು ಅಪಘಾತ ವೇಳೆ ಪ್ರಿಯಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಜೆರಾಲ್ಡ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.

ದಂಪತಿಯ ಮಗ ಮತ್ತು ಮಗಳುಬದುಕುಳಿದಿದ್ದಾರೆ. ಮೃತರ ಶವವನ್ನು ಸ್ವದೇಶಕ್ಕೆ ಕಳುಹಿಸುವ ಕುರಿತು ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಚರ್ಚ್‌ನ ಅಧಿಕಾರಿಗಳು ತಿಳಿಸಿದ್ದಾರೆ

RELATED ARTICLES

Latest News