ನವದೆಹಲಿ, ಮಾ.24- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವತಂತ್ ವರ್ಮ ಅವರನ್ನು ತತ್‌ಕ್ಷಣವೇ ಜಾರಿಯಾಗುವಂತೆ ನ್ಯಾಯಾಂಗದ ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಮುಂದಿನ ಆದೇಶದವರೆಗೆ ಅವರನ್ನು ತಕ್ಷಣದಿಂದಲೇ ಕರ್ತವ್ಯದಿಂದ ವಜಾಗೊಳಿಸಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಉಪಾಧ್ಯಾಯ ಆದೇಶ ಹೊರಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸೂಕ್ತ ಸ್ಥಿತಿಯಲ್ಲಿ 15 ಕೋಟಿ ಮೌಲ್ಯದಕಂತೆ ಕಂತೆ ನೋಟುಗಳು ಸಿಕ್ಕಿಬಿದ್ದ ಪ್ರಕರಣ ಸಂಬಂಧಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಗಾಗಿ ಪಂಜಾಬ್
ಹರಿಯಾಣ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯನ್ನು ರಚನೆ ಮಾಡಿತ್ತು.
ಇದರ ಬೆನ್ನಲ್ಲೇ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿರುವ ನ್ಯಾಯಧೀಶರ ಮನೆಯಲ್ಲಿ ಸುಮಾರು 15 ಕೋಟಿ ಮೌಲ್ಯದ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದವು. ಇದು ದೇಶಾದ್ಯಂತ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಆದರೆ ವರ್ಮ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದು, ತಮ್ಮ ಅಥವಾ ಅವರ ಕುಟುಂಬಕ್ಕೆ ನಗದು ಇದಲ್ಲ ಎಂದು ಪ್ರತಿಪಾದಿಸಿದ್ದರು.
ಈ ಘಟನೆಯು ತನ್ನ ಇಮೇಜ್‌ಗೆ ಧಕ್ಕೆ ತರುವ ಸಂಚಿನ ಭಾಗವಾಗಿದೆ. ನಗದು ಪತ್ತೆಯಾಗಿರುವುದು ಔಟ್‌ಹೌಸ್‌ನಲ್ಲಿ, ಅವರು ಮತ್ತು ಅವರ ಕುಟುಂಬ ವಾಸಿಸುವ ಮುಖ್ಯ ಕಟ್ಟಡವಲ್ಲ, ಅವರು ಅಥವಾ ಅವರ ಕುಟುಂಬ ಸದಸ್ಯರು ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದಿದ್ದರು.
ಶನಿವಾರ ರಾತ್ರಿ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು. ಈ ವಿಷಯವು ಆಳವಾದ ತನಿಖೆಯನ್ನು ಸಮರ್ಥಿಸುತ್ತದೆ ಎಂದು ವರದಿಯು ಪ್ರಾಥಮಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಆರೋಪಗಳ ತನಿಖೆಗಾಗಿ ಹಿರಿಯ ನ್ಯಾಯಮೂರ್ತಿಗಳ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದರು. ಬೆಂಕಿ ನಂದಿಸುವ ಸಮಯದಲ್ಲಿ ನ್ಯಾ. ವರ್ಮಾ ಅವರ ನಿವಾಸದಲ್ಲಿ ಪತ್ತೆಯಾದ ನೋಟಿನ ಕಂತೆಗಳ ಕುರಿತು ಸುಪ್ರೀಂಕೋರ್ಟ್ ಶನಿವಾರ ರಾತ್ರಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ಸಲ್ಲಿಸಿದ್ದ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು.
ನ್ಯಾ. ಯಶ್ವಂತ್ ವರ್ಮಾ ಅವರ ನಿವಾಸದಲ್ಲಿ ಲೆಕ್ಕವಿಲ್ಲದಷ್ಟು ನೋಟು ಪತ್ತೆಯಾದ ಆರೋಪಗಳನ್ನು ದೃಢೀಕರಿಸುವ ಫೋಟೋಗಳು ಮತ್ತು ವೀಡಿಯೋ ಸೇರಿದಂತೆ ಹಲವು
ದಾಖಲೆಗಳನ್ನು ಸುಪ್ರೀಂ ಕೋರ್ಟ್ ತನ್ನ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿತ್ತು. ಮಾರ್ಚ್ 14 ರಂದು ನಡೆದ ಅಗ್ನಿಶಾಮಕ ಕಾರ್ಯಾಚರಣೆಯ ಸಮಯದಲ್ಲಿ ದೆಹಲಿ ಪೊಲೀಸರು ಈ ವೀಡಿಯೋಗಳು ಮತ್ತು ಛಾಯಾಚಿತ್ರಗಳನ್ನು ತೆಗೆದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ವರ್ಮಾ. ನಾನು ಅಥವಾ ನನ್ನ ಕುಟುಂಬ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇರಿಸಿಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಅಪಾದಿತ ನಗದು ನಮಗೆ ಸೇರಿದೆ ಎಂಬ ಸಲಹೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ನಗದನ್ನು ನಾವು ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣವಾಗಿ ಆಸಂಬದ್ಧವಾಗಿದೆ ಎಂದು ಹೇಳಿದರು.
ಸಿಬ್ಬಂದಿ ಕ್ವಾರ್ಟಸ್್ರ ಬಳಿ ಅಥವಾ ಔಟ್ ಹೌಸ್‌ನಲ್ಲಿ ತೆರೆದ, ಮುಕ್ತವಾಗಿ ಪ್ರವೇಶಿಸಬಹುದಾದ ಮತ್ತು ಸಾಮಾನ್ಯವಾಗಿ ಬಳಸುವ ಸ್ಪೋರೂಮ್ ನಲ್ಲಿ ಹಣ ಸಂಗ್ರಹಿಸಬಹುದು ಎಂಬ ಆರೋಪ ನಂಬಲಾಗದಂತಿದೆ ಎಂದಿದ್ದಾರೆ.
ಇದು ನನ್ನ ವಾಸಸ್ಥಳದಿಂದ ಪ್ರತ್ಯೇಕವಾಗಿರುವ ಕೋಣೆಯಾಗಿದೆ. ಗೋಡೆಯೊಂದು ನನ್ನ ವಾಸಸ್ಥಳವನ್ನು ಆ ಔಟ್‌ಹೌಸ್‌ನಿಂದ ಪ್ರತ್ಯೇಕಿಸುತ್ತದೆ. ಪತ್ರಿಕೆಗಳಲ್ಲಿ ನನ್ನ ಮೇಲೆ ಆರೋಪ ಹೊರಿಸಿ ಮಾನಹಾನಿಯಾಗುವ ಮೊದಲು ಮಾಧ್ಯಮವು ಸ್ವಲ್ಪ ವಿಚಾರಣೆ ನಡೆಸಬೇಕಿತ್ತು ಎಂದು ನಾನು ಬಯಸುತ್ತೇನೆ ಎಂದು ನ್ಯಾ. ವರ್ಮಾ ಹೇಳಿದ್ದರು.