Friday, November 22, 2024
Homeರಾಜ್ಯಕಾಂಗ್ರೆಸ್‍ನತ್ತ ಕೆ.ಆರ್.ಪೇಟೆ ಮಾಜಿ ಶಾಸಕ ನಾರಾಯಣಗೌಡ..!?

ಕಾಂಗ್ರೆಸ್‍ನತ್ತ ಕೆ.ಆರ್.ಪೇಟೆ ಮಾಜಿ ಶಾಸಕ ನಾರಾಯಣಗೌಡ..!?

ಬೆಂಗಳೂರು,ಫೆ.8- ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದತೆ ಕಾಂಗ್ರೆಸ್ ಮತ್ತೊಂದು ಸುತ್ತಿನ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದು, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ಕರೆದುಕೊಳ್ಳಲು ತಯಾರಿ ನಡೆಸಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಸಿ.ನಾರಾಯಣಗೌಡ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ ಕೀಯವಾಗಿ ಭೇಟಿ ಮಾಡಿದ್ದು ಸಮಾಲೋಚನೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ಸರ್ಕಾರ ರಚನೆಯಾದ ಆರಂಭದಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳಲಾಗಿತ್ತು. ಆ ವೇಳೆ ಹತ್ತಾರು ನಾಯಕರು ಕಾಂಗ್ರೆಸ್ ಸೇರಿದ್ದರು. ಇದಕ್ಕೆ ಕಾಂಗ್ರೆಸ್‍ನಲ್ಲಿಯೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದಿಷ್ಟು ಕಾಲ ಆಪರೇಷನ್ ಹಸ್ತವನ್ನು ಸ್ಥಗಿತಗೊಳಿಸಲಾಗಿತ್ತು. ಬಿಜೆಪಿಯಿಂದ ವಲಸೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ಮರಳಿ ಮಾತೃಪಕ್ಷಕ್ಕೆ ಹೋಗಿದ್ದು ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೀಡು ಮಾಡಿತ್ತು.

ಹೀಗಾಗಿ ರೊಚ್ಚಿಗೆದ್ದಿರುವ ಕಾಂಗ್ರೆಸ್ ನಾಯಕರು ಈ ಬಾರಿ ಬಿಜೆಪಿಯ ಬುಟ್ಟಿಗೆ ಕೈಹಾಕಲು ಮುಂದಾಗಿದ್ದಾರೆ. ಜೆಡಿಎಸ್-ಬಿಜೆಪಿಯ ಮೈತ್ರಿಯಿಂದಾಗಿ ಅಸಮಾಧಾನಗೊಂಡಿರುವ ಆಯಾ ಪಕ್ಷಗಳ ಹಲವು ನಾಯಕರು ಪರ್ಯಾಯ ರಾಜಕೀಯದತ್ತ ಗಮನ ಹರಿಸಿದ್ದು, ಅಂತವರಿಗೆ ಕಾಂಗ್ರೆಸ್ ಮುಕ್ತ ಆಹ್ವಾನ ನೀಡುತ್ತಿದೆ. ಕೆ.ಸಿ.ನಾರಾಯಣಗೌಡ ಸೇರಿದಂತೆ ಬಿಜೆಪಿಯ ಬಹಳಷ್ಟು ನಾಯಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ. ಎರಡನೇ ಸುತ್ತಿನ ಆಪರೇಷನ್ ಹಸ್ತ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಭಾರತ ಅಮೆರಿಕವನ್ನು ದುರ್ಬಲವಾಗಿ ಪರಿಗಣಿಸಿದೆ : ಹ್ಯಾಲೆ

ಈ ಮೊದಲು ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪಕ್ಷ ತೊರೆದವರ ವಿರುದ್ಧ ತನಿಖೆ ನಡೆಸುತ್ತದೆ ಎಂಬ ಆತಂಕ ಇತ್ತು. ಹೀಗಾಗಿ ಬಹಳಷ್ಟು ನಾಯಕರು ಉಸಿರುಗಟ್ಟುವ ವಾತಾವರಣವಿದ್ದರೂ, ರಾಜಕೀಯ ಪ್ರಾತಿನಿಧ್ಯ ದೊರೆಯದಿದ್ದರೂ ಕೂಡ ಅನಿವಾರ್ಯವಾಗಿ ಬಿಜೆಪಿಯಲ್ಲೇ ಮುಂದುವರೆದಿದ್ದರು.

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಮಯ ಹತ್ತಿರ ಬರುತ್ತಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಬಿಜೆಪಿಯ ಹಿಡಿತ ತಗ್ಗಲಿದೆ. ಈ ಸಂದರ್ಭವನ್ನು ಬಳಸಿಕೊಂಡು ಪಕ್ಷಾಂತರ ಮಾಡಲು ಸಾಕಷ್ಟು ನಾಯಕರು ತಯಾರಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ರಾಜ್ಯಾದ್ಯಂತ ಹುಕ್ಕಾ ಬಳಕೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ

ಆದರೆ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ನಾಯಕರ ಹಿನ್ನೆಲೆ, ಸೈದ್ಧಾಂತಿಕ ನಿಲುವು ಮತ್ತು ಬದ್ಧತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ರಾಜ್ಯನಾಯಕರು ಪಕ್ಷ ಸೇರ್ಪಡೆಯನ್ನು ಕ್ರಮಬದ್ಧವಾಗಿ ಪರಿಶೀಲಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News