ಬೆಂಗಳೂರು,ಜ.17-ಕಲಬುರ್ಗಿಯ ಜೈಲು ಬಿಜೆಪಿಯ ಮಾಜಿ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರಿಂದಲೇ ತುಂಬಿ ಹೋಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಕಲಬುರ್ಗಿಯನ್ನು ತೆಕ್ಕೆಯಲ್ಲಿ ಇಟ್ಟುಕೊಂಡಂತೆ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಉಸ್ತುವಾರಿಯಲ್ಲಿ ಬರೀ ಅಕ್ರಮಗಳದೇ ಸದ್ದು. ಜೈಲಿನಲ್ಲಿರುವ ವಿಚಾರಣಾೀಧಿನ ಖೈದಿ ಹಾಗೂ ಜೈಲು ಸಿಬ್ಬಂದಿ ನಡುವೆ ಗಾಂಜಾಕ್ಕಾಗಿ ಹೊಡೆದಾಟ ನಡೆದಿದೆ. ಕಲಬುರ್ಗಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವುದು ಮಾತ್ರವಲ್ಲದೆ, ಜೈಲುಗಳು ಅಕ್ರಮದ ತಾಣಗಳಾಗಿವೆ ಎಂದು ಆರೋಪಿಸಿತ್ತು.
ಕೆನಡಾದಲ್ಲಿ ಕ್ಷೀಣಿಸಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಕಲಬುರ್ಗಿ ಜೈಲುಗಳು ಸದ್ಯ ಗೂಂಡಾಗಿರಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ನಿಮ್ಮದೇ ಪಕ್ಷದ ಮಾಜಿ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರಿಂದಲೇ ತುಂಬಿದ್ದು, ಅಲ್ಲಿಯೂ ಅವರ ಪುಂಡಾಟಿಕೆ ಮುಂದುವರೆದಿದೆ. ಆದರೆ ನಿಮಗೆ ಚಿಂತೆ ಬೇಡ. ಜೈಲಿನ ಒಳಗೂ ಅವರ ಪುಂಡಾಟಿಕೆಯನ್ನು ಮಟ್ಟ ಹಾಕುವುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನೀವು ಅವರ ಪೈಕಿ ಯಾರಿಗೆ ಪಕ್ಷದ ಉನ್ನತ ಹುದ್ದೆ ನೀಡಬಹುದು, ಯಾರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಬಹುದು ಎಂಬ ಬಗ್ಗೆ ಚಿಂತೆ ನಡೆಸಿ ಎಂದು ತಿರುಗೇಟು ನೀಡಿದ್ದಾರೆ.