ಬೆಂಗಳೂರು, ಸೆ.18- ಲೇ ಮೆಂಥಾಂಗ್‌ನಲ್ಲಿ ಸುಮಾರು 1959-60ರಲ್ಲಿ ಖಾಂಫಾ ಅಂಗರಕ್ಷರರೊಂದಿಗೆ ಬಂದಿದ್ದ ಟಿಬೇಟಿಯನ್ ಸನ್ಯಾಸಿಯೊಬ್ಬರು ಭಾರಿ ಗಾತ್ರದ ವಕ್ಷಸ್ಥಳವುಳ್ಳ ಪ್ರತಿಮೆಯೊಂದನ್ನು ಸಿಐಎ ಅಧಿಕಾರಿಗಳಿಗೆ ನೀಡಿದರೆಂದು ಹೇಳಲಾಗಿದೆ. ಈ ಎದೆವಿಗ್ರಹ ಮತ್ತು ಅದರ ಪ್ರಾಮುಖ್ಯವನ್ನು ಸಿಐಎ ಅಧಿಕಾರಿಗಳಿಗೆ ಸನ್ಯಾಸಿ ವಿವರಿಸಿದರು.
ಕುತೂಹಲಗೊಂಡ ಸಿಐಎ ಅಧಿಕಾರಿಯೊಬ್ಬರು ಆ ಬೌದ್ಧ ಸನ್ಯಾಸಿ ಆ ಎದೆವಿಗ್ರಹದ ಬಗ್ಗೆ ತಮಗೆ ಹೇಳಿದ್ದನ್ನು ಬರೆದಿರಿಸಿದರು. ಆದರೆ ಆ ವೇಳೆಗೆ ಅಮೆರಿಕದಲ್ಲಿ ವಿಗ್ರಹಾರಾಧನೆ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆ ಸಮಯದಲ್ಲಿ ಟಿಬೆಟ್‌ನೊಳಗೆ ಮುನ್ನುಗ್ಗುತ್ತಿದ್ದ ಚೀನೀ ಪಡೆಗಳ ವಿರುದ್ಧ ಗೆರಿಲ್ಲಾ ಸಮರ ನಡೆಸುವುದೇ ಅಮೆರಿಕ ಪಡೆಗಳ ಗುರಿಯಾಗಿತ್ತು.
ಅದೇ ವಾರ ಯುದ್ಧದಲ್ಲಿ ಟಿಬೆಟಿಯನ್ ಸನ್ಯಾಸಿ ಮತ್ತು ಅಂಗರಕ್ಷಕರು ಮಡಿದರು. ಸಿಐಎ ಅಧಿಕಾರಿ ಚೀನೀ ಪಡೆಗಳಿಂದ ಆ ವಿಗ್ರಹವನ್ನು ಪಡೆದುಕೊಂಡರು. ಆ ನಿಗೂಢ ಎದೆ ವಿಗ್ರಹವನ್ನು ಏನು ಮಾಡಬೇಕೆಂದು ಹೊಳೆಯದೆ ಸಿಐಎ ಅಧಿಕಾರಿಗಳು ಅದನ್ನು ವಿಮಾನವೊಂದರಲ್ಲಿರಿಸಿ ಭಾರತದಲ್ಲಿನ ರಹಸ್ಯ ವಾಯುನೆಲೆಯೊಂದಕ್ಕೆ ರವಾನಿಸಿದರು. ತರುವಾಯ ಕೊಲರಾಡೋದ ವೈಲ್‌ನಲ್ಲಿ ಈಗ ಬಳಕೆಯಲ್ಲಿಲ್ಲದ ಸೇನಾ ನೆಲೆಯಾದ ಕ್ಯಾಂಪ್ ಹಾಲೆಗೆ ಸಾಗಿಸಲಾಯಿತು. ಕೆಲವು ವಾರಗಳ ಬಳಿಕ ವಾಷಿಗ್ಟನ್ ಡಿಸಿಯ ಸಿಐಎ ಉಗ್ರಾಣದಲ್ಲಿ ಎಸ್‌ಟಿ ಸರ್ಕಸ್ ಮುಸ್ತಾಂಗ್-0813 ಎಂಬ ಶೀರ್ಷಿಕೆಯಡಿ ಇರಿಸಲಾಯಿತು.
ತಿಂಗಳುಗಳು ಉರುಳಿದವು. ಸಿಐಎನ ಕೆಲವು ಅಧಿಕಾರಿಗಳು ಆ ವಕ್ಷಸ್ಥಳ ಮತ್ತು ಅದರ ಅಂಶಗಳ ಬಗ್ಗೆ ತಿಳಿಯುವ ಆಸಕ್ತಿ ತಳೆದರು. ಶೋಧ ಕೈಗೊಂಡಾಗ ಅದರೊಳಗೆ ಒಂದು ವಿಚಿತ್ರ ಹಸ್ತಪ್ರತಿ ದೊರೆಯಿತು. ಇದರ ಜೊತೆಗೆ ಅಸಾಧಾರಣವಾದ ಆ ಪುರಾತನ ವಿಗ್ರಹದ ವಿಶಿಷ್ಟ ವಿನ್ಯಾಸವು ಅವರನ್ನು ವಿಗ್ರಹವನ್ನು ಮಾಡಲಾದ ಮರದ ರೇಡಿಯೋ ಕಾರ್ಬನ್ ಪರೀಕ್ಷೆ ಮಾಡಲು ಪ್ರೇರೇಪಿಸಿತು.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ರೇಡಿಯೇಷನ್ ಪ್ರಯೋಗಾಲಯ ತಿಳಿಸಿದ ಫಲಿತಾಂಶ ಅವರನ್ನು ನಿಬ್ಬೆರಗಾಗಿಸಿತು. ಆ ಪುರಾತನ ವಿಗ್ರಹ ಇಂದಿನ ಯುಗಕ್ಕೆ ಸೇರಿರಲಿಲ್ಲ. ಈ ವಿಷಯವನ್ನು ಸನ್ಯಾಸಿ ಮೊದಲೇ ಪ್ರತಿಪಾದಿಸಿದ್ದ. ಆದರೆ ಸಿಐಎ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆ ವಿಗ್ರಹವು ದ್ವಾಪರಯುಗಕ್ಕೆ ಸೇರಿದ್ದಾಗಿದೆ ಎಂದು ಪರೀಕ್ಷಾ ಫಲಿತಾಂಶಗಳು ತಿಳಿಸಿದವು. ಇದು ಇಲ್ಲಿಯವರೆಗೆ ದೊರೆತಿರುವ ಅತಿ ಹಳೆಯ ಮಾನವಕೃತ ಕಲಾಕೃತಿಯಾಗಿದೆ.ಈ ವಿಗ್ರಹವು ಕ್ರಿಸ್ತ ಪೂರ್ವ ಸುಮಾರು 26,450ರ ಕಾಲಕ್ಕೆ ಸೇರಿದೆ ಎಂದು ಗೊತ್ತಾಯಿತು. ಇಂದು ಇದು 25,450 ವರ್ಷಗಳಿಗಿಂತ ಹಳೆಯದಾಗಿದೆ ಎಂದು ಹೇಳಲಾಗಿದೆ. ಮಹಾಭಾರತದಲ್ಲಿ ಬಣ್ಣಿಸಿರುವ ಕುರುಕ್ಷೇತ್ರ ಮಹಾಯುದ್ಧ ನಡೆದಿದ್ದ ಕಾಲಕ್ಕಿಂತ ಈ ವಿಗ್ರಹವು 23,300 ವರ್ಷಗಳಷ್ಟು ಪ್ರಾಚೀನವಾದದ್ದಾಗಿದೆ ಎನ್ನುವುದು ವಿಶೇಷ.
ಈ ವಿಗ್ರಹವನ್ನು ಪರೀಕ್ಷಿಸಿರುವ ತಜ್ಞರು ಇದು ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಹಿಂದೂ ವಿಗ್ರಹವಾಗಿದೆ ಎಂದು ತಿಳಿಸಿದ್ದಾರೆ.ಈಜಿಪ್ಟಿಯನ್, ಮೆಸಪಟೋಮಿಯನ್ ಅಥವಾ ಸಿಂಧೂಕಣಿವೆ ನಾಗರಿಕತೆ ಈ ಉತ್ಖನದ ಮೂಲಕ ಬೆಳಕಿಗೆ ಬಂದ ಯಾವ ನಾಗರಿಕತೆಯೂ 6000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿರಲಿಲ್ಲ!